ಶಾರೂಖ್ ಅಭಿನಯದ 'ಝೀರೋ' ಚಿತ್ರದ ಸೆಟ್ ನಲ್ಲಿ ಬೆಂಕಿ ಅವಘಡ

ಶಾರೂಖ್ ಖಾನ್ ಅಭಿನಯದ "ಝೀರೋ" ಚಿತ್ರದ ಶೂಟಿಂಗ್ ವೇಳೆ ಬೆಂಕಿ ಅನಾಹುತ ಸಂಭವಿಸಿದೆ. ಶೂಟಿಂಗ್ ಸೆಟ್ ನಲ್ಲಿ ಬೆಂಕಿ ಕಾಣಿಸಿಕೊಂಡಾಗ ಶಾರೂಖ್ ಸೇರಿ ಹಲವು ನಟರು, ತಂತ್ರಜ್ಞರು ಸೆಟ್ ನಲ್ಲಿದ್ದರು.
ಝೀರೋ ಚಿತ್ರದ ದೃಉಶ್ಯ
ಝೀರೋ ಚಿತ್ರದ ದೃಉಶ್ಯ
Updated on
ಮುಂಬೈ:  ಶಾರೂಖ್ ಖಾನ್ ಅಭಿನಯದ "ಝೀರೋ" ಚಿತ್ರದ ಶೂಟಿಂಗ್ ವೇಳೆ ಬೆಂಕಿ ಅನಾಹುತ ಸಂಭವಿಸಿದೆ. ಶೂಟಿಂಗ್ ಸೆಟ್ ನಲ್ಲಿ ಬೆಂಕಿ ಕಾಣಿಸಿಕೊಂಡಾಗ ಶಾರೂಖ್ ಸೇರಿ ಹಲವು ನಟರು, ತಂತ್ರಜ್ಞರು ಸೆಟ್ ನಲ್ಲಿದ್ದರು.
ಆದರೆ  ಶಾರೂಖ್ ಸೇರಿದಂತೆ ಯಾವ ನಟರಿಗಾಗಲಿ, ತಂಡದ ಇತರೆ ಸದಸ್ಯರಿಗಾಗಲಿ ಅಪಾಯವಾಗಿಲ್ಲ ಎಂದು ಪೋಲೀಸರು ತಿಳಿಸಿದ್ದಾರೆ.
ಡೆಪ್ಯುಟಿ ಕಮಿಷ ನರ್ ವಿನಯ್ ರಾಥೋಡ್ ಮಾತನಾಡಿ ಬೆಂಕಿ ಯಾವ ಕಾರಣಕ್ಕೆ ಹೊತ್ತಿತೆಂದು ಇನ್ನೂ ಸ್ಪಷ್ಟವಾಗಿಲ್ಲ ಎಂದರು.
ಐದು ಅಗ್ನಿಶಾಮಕ ವಾಹನಗಳು ಬೆಂಕಿ ನಂದಿಸುವ ಕಾರ್ಯದಲ್ಲಿ ನಿರತವಾಗಿದ್ದವು. 
ಆನಂದ್ ಎಲ್. ರೈ ನಿರ್ದೇಶನದ "ಝೀರೋ" ಚಿತ್ರದಲ್ಲಿ ಶಾರೂಖ್ ಖಾನ್, ಕತ್ರೀನಾ ಕೈಫ್, ಅನುಷ್ಕಾ ಶರ್ಮಾ ಸೇರಿ ಹಲವು ನಟ ನಟಿಯರು ಅಭಿನಯಿಸುತ್ತಿದ್ದಾರೆ. ಚಿತ್ರ ಇದೇ ಡಿಸೆಂಬರ್ 21ರಂದು ಬಿಡುಗಡೆಯಾಗಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com