ಟ್ವಿಟರ್'ಗೆ ಗುಡ್ ಬೈ, ಅದು 'ತುಂಬಾ ನಕಾರಾತ್ಮಕ': ಸೋನಮ್ ಕಪೂರ್

ಇತ್ತೀಚಿಗಷ್ಟೇ ದೆಹಲಿ ಮೂಲದ ಉದ್ಯಮಿ ಆನಂದ್ ಅಹುಜಾ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಬಾಲಿವುಡ್ ನಟಿ ಸೋನಮ್.....
ಸೋನಮ್ ಕಪೂರ್
ಸೋನಮ್ ಕಪೂರ್
ಮುಂಬೈ: ಇತ್ತೀಚಿಗಷ್ಟೇ ದೆಹಲಿ ಮೂಲದ ಉದ್ಯಮಿ ಆನಂದ್ ಅಹುಜಾ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಬಾಲಿವುಡ್ ನಟಿ ಸೋನಮ್ ಕಪೂರ್ ಅವರು ಸಾಮಾಜಿಕ ಜಾಲ ತಾಣ ಟ್ವಿಟರ್ ಗೆ ಗುಡ್ ಬೈ ಹೇಳಿದ್ದು, ಅದು ತುಂಬಾ ನಕಾರಾತ್ಮಕ ಎಂದು ಹೇಳಿದ್ದಾರೆ.
ನಾನು ಕೆಲವು ದಿನ ಸಾಮಾಜಿಕ ಮಾಧ್ಯಮದಲ್ಲಿ ಅಭಿಮಾನಿಗಳೊಂದಿಗೆ ಸಂವಹನ ನಡೆಸುವುದಿಲ್ಲ ಎಂದು 33 ವರ್ಷದ ಬಾಲಿವುಡ್ ನಟಿ ಶನಿವಾರ ಘೋಷಿಸಿದ್ದಾರೆ.
ಕೆಲವು ದಿನಗಳ ಕಾಲ ನಾನು ಟ್ವಿಟರ್ ನಿಂದ ಹಿಂದೆ ಸರಿಯುತ್ತಿದ್ದೇನೆ. ಅದು ತುಂಬಾ ನಕಾರಾತ್ಮಕ. ಎಲ್ಲರಿಗೂ ಶಾಂತಿ ಮತ್ತು ಪ್ರೀತಿ ಸಿಗಲಿ ಎಂದು ಸೋನಮ್ ಹಾರೈಸಿದ್ದಾರೆ.
ಸೋನಮ್ ಕಪೂರ್ ಅವರು ಸಾಮಾಜಿಕ ಮಾಧ್ಯಮದಿಂದ ಹೊರ ಬರಲು ಯಾವುದೇ ಕಾರಣ ನೀಡಿಲ್ಲವಾದರೂ, ಮುಂಬೈ ಮಾಲಿನ್ಯಕ್ಕೆ ಸಂಬಂಧಿಸಿದ ಆಕೆಯ ಪೋಸ್ಟ್ ಒಂದನ್ನು ವ್ಯಕ್ತಿಯೊಬ್ಬರು ಟ್ರೊಲ್ ಮಾಡಿದ್ದರು. ಇದರ ಬೆನ್ನಲ್ಲೇ ಸೋನಮ್ ಟ್ವಿಟರ್ ಗೆ ಗುಡ್ ಬೈ ಹೇಳಿದ್ದಾರೆ.
'ನಾನು ನಗರ ತಲುಪಲು ಎರಡು ಗಂಟೆ ತೆಗೆದುಕೊಂಡಿದ್ದೇನೆ. ಇನ್ನೂ ನಾನು ತಲುಪಬೇಕಾದ ಸ್ಥಳ ತಲುಪಿಲ್ಲ. ಕೆಟ್ಟ ರಸ್ತೆ ಹಾಗೂ ಮಾಲಿನ್ಯದಿಂದಾಗಿ ಮನೆಯಿಂದ ಹೊರ ಬರುವುದೇ ಕಷ್ಟವಾಗಿದೆ' ಎಂದು ಸೋನಮ್ ಟ್ವಿಟ್ ಮಾಡಿದ್ದರು. ಇದಕ್ಕೆ ವ್ಯಕ್ತಿಯೊಬ್ಬರು, ನಿಮ್ಮಂತವರಿಂದಲೇ ಮಾಲಿನ್ಯ ಹೆಚ್ಚಾಗಿದೆ. ನೀವು ಸಾರ್ವಜನಿಕ ಸಾರಿಗೆ ಬಳಸುವುದಿಲ್ಲ ಮತ್ತು ಕಡಿಮೆ ಇಂಧನ ಕುಡಿಯುವ ವಾಹನ ಬಳಸುವುದಿಲ್ಲ ಎಂದು ಟ್ರೊಲ್ ಮಾಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com