ಸಲ್ಮಾನ್ ಖಾನ್ ಈ ವರ್ಕೌಟ್ ವಿಡಿಯೋ ವೈರಲ್!

ಹುರಿಗಟ್ಟಿದ ದೇಹ ಸೌಂದರ್ಯಕ್ಕೆ ಹೆಸರಾಗಿರುವ ಬಾಲಿವುಡ್ ನಟ ಸಲ್ಮಾನ್ ಖಾನ್ , ತನ್ನ ಇಬ್ಬರು ಭದ್ರತಾ ಸಿಬ್ಬಂದಿಗಳೊಂದಿಗೆ ಕಾಲಿನ ವರ್ಕೌಟ್ ಮಾಡುತ್ತಿರುವ ವಿಡಿಯೋವನ್ನು ಬಿಡುಗಡೆ ಮಾಡಿದ್ದಾರೆ.
ಸಲ್ಮಾನ್ ಖಾನ್
ಸಲ್ಮಾನ್ ಖಾನ್
ಮುಂಬೈ: ಹುರಿಗಟ್ಟಿದ ದೇಹ ಸೌಂದರ್ಯಕ್ಕೆ ಹೆಸರಾಗಿರುವ ಬಾಲಿವುಡ್ ನಟ ಸಲ್ಮಾನ್ ಖಾನ್ , ತನ್ನ ಇಬ್ಬರು ಭದ್ರತಾ ಸಿಬ್ಬಂದಿಗಳೊಂದಿಗೆ ಕಾಲಿನ ವರ್ಕೌಟ್ ಮಾಡುತ್ತಿರುವ ವಿಡಿಯೋವನ್ನು  ಬಿಡುಗಡೆ ಮಾಡಿದ್ದಾರೆ.
ಶಾರ್ಟ್ಸ್ ಹಾಗೂ ಟಿ - ಶರ್ಟಿನಲ್ಲಿರುವ 53 ವರ್ಷದ ಮೋಸ್ಟ್  ಬ್ಯಾಚುಲರ್ ಸಲ್ಮಾನ್ ಖಾನ್ ,  ತನ್ನ ಇಬ್ಬರು ಭದ್ರತಾ ಸಿಬ್ಬಂದಿಗಳೊಂದಿಗೆ ಕಾಲಿನ ವ್ಯಾಯಾಮ ಮಾಡುವುದು ಈ ವಿಡಿಯೋದಲ್ಲಿದೆ. 
ಕಾಲಿನ ವ್ಯಾಯಾಮದ ಅನುಭವದಿಂದ ಯಾವ ರೀತಿಯ ವಿಶ್ರಾಂತಿ ಪಡೆಯಬಹುದು ಎಂಬುದನ್ನು ತಮ್ಮ ಭದ್ರತಾ ಸಿಬ್ಬಂದಿ ಮನವರಿಕೆ ಮಾಡಿದ್ದಾರೆ   ಎಂದು ಇನ್ಸಾಟಾಗ್ರಾಂನಲ್ಲಿ ಸಲ್ಮಾನ್ ಖಾನ್ ಬರೆದುಕೊಂಡಿದ್ದಾರೆ.
ದಬಾಂಗ್ ಖ್ಯಾತಿಯ ಸಲ್ಮಾನ್ ಖಾನ್ , ಕತ್ರಿನಾ ಕೈಪ್ ಜೊತೆಗೆ ನಟಿಸಿರುವ ಭರತ್  ಯಶಸ್ವಿಯಾಗಿ ಪ್ರದರ್ಶನವಾಗುತ್ತಿದ್ದು, ಬಿಡುಗಡೆಯಾದ ಮೊದಲ ಐದು ದಿನಗಳಲ್ಲಿಯೇ 150 ಕೋಟಿ ರೂಪಾಯಿ ಕಲೆಕ್ಷನ್ ಮಾಡಿ ಹೊಸ ದಾಖಲೆ ನಿರ್ಮಾಣ ಮಾಡಿದೆ.
ಸಂಜಯ್ ಲೀನಾ ಬನ್ಸಾಲಿ ನಿರ್ಮಾಣದಲ್ಲಿ ಅಲಿಯಾ ಭಟ್ ಜೊತೆಗೆ ಸಲ್ಮಾನ್ ಖಾನ್ ನಟಿಸಿರುವ 'ಇನ್ಶಲ್ಲಾ' ಚಿತ್ರ ಸದ್ಯದಲ್ಲೇ ತೆರೆ ಮೇಲೆ ಬರಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com