ಅವಕಾಶಕ್ಕಾಗಿ ನಟನ ಜೊತೆ ಹೀಗೆಲ್ಲಾ ಮಾಡಬೇಕಾ?: ನಿರ್ಮಾಪಕನ ಬೆವರಿಳಿಸಿದ್ದ ಬಾಲಿವುಡ್ ನಟಿ!

ಒಂಟಿಯಾಗಿ ಸಿಗುವಂತೆ ನಟನೊಬ್ಬ ನನಗೆ ಕೇಳಿದ್ದರು. ಅದಕ್ಕೆ ನಾನು ಒಲ್ಲೆ ಅಂದಿದ್ದೆ ಕೂಡಲೇ ನಿರ್ಮಾಪಕನಿಗೆ ಕರೆ ಮಾಡಿ ಒಂದು ಪಾತ್ರಕ್ಕಾಗಿ ನಾನು ಇದೆಲ್ಲಾ ಮಾಡಬೇಕ ಎಂದು ಕೇಳಿದ್ದಾಗಿ ಬಾಲಿವುಡ್ ನಟಿ ಇಶಾ ಕೊಪ್ಪಿಕ್ಕರ್ ಹೇಳಿದ್ದಾರೆ. 
ಇಶಾ ಕೊಪ್ಪಿಕ್ಕರ್
ಇಶಾ ಕೊಪ್ಪಿಕ್ಕರ್
Updated on

ಮುಂಬೈ: ಒಂಟಿಯಾಗಿ ಸಿಗುವಂತೆ ನಟನೊಬ್ಬ ನನಗೆ ಕೇಳಿದ್ದರು. ಅದಕ್ಕೆ ನಾನು ಒಲ್ಲೆ ಅಂದಿದ್ದೆ ಕೂಡಲೇ ನಿರ್ಮಾಪಕನಿಗೆ ಕರೆ ಮಾಡಿ ಒಂದು ಪಾತ್ರಕ್ಕಾಗಿ ನಾನು ಇದೆಲ್ಲಾ ಮಾಡಬೇಕ ಎಂದು ಕೇಳಿದ್ದಾಗಿ ಬಾಲಿವುಡ್ ನಟಿ ಇಶಾ ಕೊಪ್ಪಿಕ್ಕರ್ ಹೇಳಿದ್ದಾರೆ. 

ಇತ್ತೀಚೆಗೆ ಭಾರತೀಯ ಚಿತ್ರರಂಗದಲ್ಲಿ ಮೀಟು ಒಂದಿಲ್ಲೊಂದು ಆರೋಪಗಳು ದಾಖಲಾಗುತ್ತಿವೆ. ಇದೀಗ ಕನ್ನಡದ ಸೂರ್ಯವಂಶ ಚಿತ್ರದ ನಟಿ ಇಶಾ ಕೊಪ್ಪಿಕ್ಕರ್ ಮೀಟೂ ಆರೋಪ ಮಾಡಿದ್ದಾರೆ. 

ಬಾಲಿವುಡ್ ಚಿತ್ರವೊಂದರ ಅವಕಾಶ ನನಗೆ ಸಿಕ್ಕಿತ್ತು. ಈ ಚಿತ್ರದ ನಿರ್ಮಾಪಕರು ಸಹ ನಟರೊಂದಿಗೆ ಉತ್ತಮ ಸಂಬಂಧ ಇಟ್ಟುಕೊಳ್ಳಬೇಕೆಂದು ಹೇಳಿದ್ದರು. ಇನ್ನು ಚಿತ್ರದ ನಟ ನನಗೆ ಕರೆ ಮಾಡಿ ನಿಮ್ಮನ್ನು ಏಕಾಂಗಿಯಾಗಿ ಭೇಟಿ ಮಾಡಬೇಕು ಎಂದು ಕೇಳಿದ್ದರು. 

ಇದಕ್ಕೆ ನಾನು ಒಲ್ಲೆ ಅಂದಿದ್ದೆ. ಕೂಡಲೇ ನಿರ್ಮಾಪಕರಿಗೆ ಕರೆ ಮಾಡಿ ಒಂದು ಪಾತ್ರಕ್ಕಾಗಿ ಹೀಗೆಲ್ಲಾ ಮಾಡಬೇಕ ಎಂದು ಪ್ರಶ್ನಿಸಿದ್ದೆ. ಹೀಗಾಗಿ ನನಗೆ ಆ ಚಿತ್ರದ ಪಾತ್ರ ಕೈತಪ್ಪಿತ್ತು ಎಂದು ಇಶಾ ಹೇಳಿಕೊಂಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com