ನಿರ್ದೇಶನದ ಜೊತೆಗೆ ನಟನೆಗೂ ಜೈ ಎಂದ ಆರ್ ಜಿವಿ, 'ಕೋಬ್ರಾ'ದಲ್ಲಿ ಮೊದಲ ಬಾರಿಗೆ ನಟನೆ

ಬಾಲಿವುಡ್ ನ ವಿವಾದಾತ್ಮಕ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಇದೀಗ ನೂತನ ಸಾಹಸವೊಂದಕ್ಕೆ ಕೈ ಹಾಕಿದ್ದು, ಕ್ಯಾಮೆರಾ ಹಿಂದೆ ನಿಲ್ಲುತ್ತಿದ್ದ ಆರ್ ಜಿವಿ ಇದೀಗ ಕ್ಯಾಮೆರಾ ಮುಂದೆ ಬರಲು ಸಜ್ಜಾಗಿದ್ದಾರೆ.

Published: 08th April 2019 12:00 PM  |   Last Updated: 08th April 2019 07:36 AM   |  A+A-


Ram Gopal Varma to make acting debut with 'Cobra'

ಆರ್ ಜಿವಿ ಕೋಬ್ರಾ

Posted By : SVN SVN
Source : The New Indian Express
ಮುಂಬೈ: ಬಾಲಿವುಡ್ ನ ವಿವಾದಾತ್ಮಕ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಇದೀಗ ನೂತನ ಸಾಹಸವೊಂದಕ್ಕೆ ಕೈ ಹಾಕಿದ್ದು, ಕ್ಯಾಮೆರಾ ಹಿಂದೆ ನಿಲ್ಲುತ್ತಿದ್ದ ಆರ್ ಜಿವಿ ಇದೀಗ ಕ್ಯಾಮೆರಾ ಮುಂದೆ ಬರಲು ಸಜ್ಜಾಗಿದ್ದಾರೆ.

ಹೌದು.. ಸಾಕಷ್ಟು ವಿವಾದಾತ್ಮಕ ಚಿತ್ರಗಳ ಮೂಲಕ ಟಾಲಿವುಡ್ ಮತ್ತು ಬಾಲಿವುಡ್ ನಲ್ಲಿ ಸಂಚಲನ ಸೃಷ್ಟಿಸಿದ್ದ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ತಮ್ಮ ವೃತ್ತಿ ಜೀವನದಲ್ಲಿ ಇದೇ ಮೊದಲ ಬಾರಿಗೆ ನಟರಾಗಲು ಹೊರಟಿದ್ದಾರೆ. ಇಷ್ಟು ಕಾಲ ನಟರಿಗೆ ಪಾಠ ಮಾಡುತ್ತಿದ್ದ ವರ್ಮಾ ಅವರು ಇದೀಗ ಸ್ವತಃ ತಾವೇ ಬಣ್ಣ ಹಚ್ಚಿಕೊಂಡು ಕ್ಯಾಮರಾ ಮುಂದೆ ನಿಲ್ಲಲು ಸಜ್ಜಾಗಿದ್ದಾರೆ. ನೈಜ ಕಥೆಯಾಧಾರಿತ ಚಿತ್ರ ಕೋಬ್ರಾದಲ್ಲಿ ಆರ್ ಜಿವಿ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳಲ್ಲಿದ್ದಾರೆ.

ಈ ಬಗ್ಗೆ ಅವರೇ ಟ್ವೀಟ್ ಮಾಡಿದ್ದು, ತಮ್ಮ ವೃತ್ತಿ ಜೀವನದಲ್ಲಿ ಇದೇ ಮೊದಲ ಬಾರಿಗೆ ನಾನು ಕ್ಯಾಮೆರಾ ಮುಂದೆ ಬರುತ್ತಿದ್ದೇನೆ ಎಂದು ಹೇಳಿಕೊಂಡಿದ್ದಾರೆ. ಆರ್ಜಿವಿ 'ಗನ್ ಶಾಟ್ಸ್ ಫಿಲ್ಮ್ಸ್ ಪ್ರೊಡಕ್ಷನ್ಸ್ ಬ್ಯಾನರ್'ನಲ್ಲಿ 'ಕೋಬ್ರಾ' ಅನ್ನೋ ಸಿನಿಮಾ ಅನೌನ್ಸ್ ಮಾಡಿದ್ದು, ನಿರ್ದೇಶಕ ಅಗಸ್ತ್ಯ ಮಂಜು ಜೊತೆ ಸೇರಿ ಮುಂಬರುವ 'ಕೋಬ್ರಾ' ಸಿನಿಮಾ ನಿರ್ದೇಶನದೊಂದಿಗೆ ನಟನೆ ಕೂಡ ಮಾಡಲಿದ್ದಾರೆ.

ಅವರೇ ಹೇಳಿಕೊಂಡಿರುವಂತೆ ಆರ್ ಜಿವಿ ಈ ಕೋಬ್ರಾ ಚಿತ್ರದಲ್ಲಿ ಇಂಟೆಲಿಜೆನ್ಸ್ ಆಫೀಸರ್ ಪಾತ್ರದಲ್ಲಿ ಬಣ್ಣ ಹಚ್ಚಿ ಕ್ಯಾಮೆರಾ ಮುಂದೆ ನಿಂತಾಗಿದೆ. ಈಗಾಗಲೇ 'ಕೋಬ್ರಾ' ಫಿಲ್ಮ್ ಫಸ್ಟ್ ಲುಕ್ ಪೋಸ್ಟರ್ ರಿವೀಲ್ ಆಗಿದ್ದು, ಗನ್ ಹಿಡಿದುಕೊಂಡು ರಾಮ್ ಗೋಪಾಲ್ ವರ್ಮಾ ಅವರು ಖಡಕ್ ಲುಕ್ ಕೊಟ್ಟಿದ್ದಾರೆ. ತೆಲಂಗಾಣದ ಮೋಸ್ಟ್ ಡೇಂಜರಸ್ ಕ್ರಿಮಿನಲ್ ಕಥೆಯನ್ನ ಕೋಬ್ರಾ ಸಿನಿಮಾದಲ್ಲಿ ವರ್ಮಾ ಹೇಳಲು ಹೊರಟಿದ್ದಾರಂತೆ. ಈ ಕೋಬ್ರಾ ಸಿನಿಮಾದಲ್ಲಿ ತೆಲಂಗಾಣ ಸಿಎಂ ಕೆಸಿಆರ್ ಪಾತ್ರ ಸಹ ಇರಲಿದೆ ಎನ್ನಲಾಗಿದೆ. ಖ್ಯಾತ ಸಂಗೀತ ನಿರ್ದೇಶಕ ಎಂ ಕೀರವಾಣಿ ಕೋಬ್ರಾ ಚಿತ್ರಕ್ಕೆ ಮ್ಯೂಸಿಕ್ ಕಂಪೋಸ್ ಮಾಡುತ್ತಿದ್ದಾರೆ. 

ಹೀಗಾಗಿ, ವರ್ಮಾ ಹೇಳಲು ಹೊರಟಿರುವ ಆ ಕ್ರಿಮಿನಲ್ ಯಾರು ಎನ್ನುವ ಚರ್ಚೆ ಟಾಲಿವುಡ್ ಅಂಗಳದಲ್ಲಿ ಶುರುವಾಗಿದೆ. ಅವರೇ ಹೇಳಿಕೊಂಡಿರುವಂತೆ ಕೋಬ್ರಾ ಚಿತ್ರ ತೆಲಂಗಾಣದ ನಟೋರಿಯಸ್ ರೌಡಿ ಶೀಟರ್, ನಕ್ಸಲೈಟ್, ಪೊಲೀಸ್ ಇನ್ ಫಾರ್ಮರ್, ಗ್ಯಾಂಗ್ ಸ್ಟರ್ ಆಗಿದ್ದ ಓರ್ವ ಕ್ರಿಮಿನಲ್ ಕಥೆಯಂತೆ. ಅವನು ಸಾಯುವವರೆಗೂ ಆತ ಯಾರು? ಆತ ಎಷ್ಟು ಭಯಾನಕ ವ್ಯಕ್ತಿಯಾಗಿದ್ದ ಎಂದು ಯಾರಿಗೂ ತಿಳಿದಿರಲಿಲ್ಲ ಎಂದು ಆರ್ ಜಿವಿ ಟ್ವೀಟ್ ಮಾಡಿದ್ದಾರೆ. ಆ ಮೂಲಕ ಈ ಚಿತ್ರದ ಕುರಿತ ಕುತೂಹಲನ್ನು ಮತ್ತಷ್ಟು ಹೆಚ್ಚಿಸಿದ್ದಾರೆ.

ಇನ್ನು ಆರ್ ಜಿವಿ ಬೆಳ್ಳಿ ಪರದೆ ಪ್ರವೇಶಕ್ಕೆ ಬಿಗ್ ಬಿ ಅಮಿತಾಬ್ ಬಚ್ಚನ್ ಹಾಗೂ ಕಿಚ್ಚಾ ಸುದೀಪ್ ಟ್ವೀಟ್ ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ. ಬಾಲಿವುಡ್ ಬಿಗ್ ಬಿ, ಸುದೀಪ್ ಟ್ವೀಟ್ ಮಾಡಿ 'ಆರ್ಜಿವಿ'ಗೆ ಸ್ವಾಗತ ಕೋರಿದ್ದಾರೆ. "ಫೈನಲಿ ಸರ್ಕಾರ್ ಸರಿಯಾದ ವೃತ್ತಿ ಆರಿಸಿಕೊಂಡಿದ್ದಾರೆ. ಆಲ್ ದಿ ಬೆಸ್ಟ್ ಸರ್ಕಾರ್. ನನಗೆ ಮತ್ತೊಬ್ಬ ಕಾಂಪಿಟೇಟರ್ .." ಎಂದು ಅಮಿತಾಭ್ ಬಚ್ಚನ್ ಟ್ವೀಟ್ ಮಾಡಿ ವರ್ಮಾಗೆ ವಿಶ್ ಮಾಡಿದ್ದಾರೆ. ವರ್ಮಾ ನಿರ್ದೇಶನದ ರಣ್, ಫೂಂಕ್, ರಕ್ತಚರಿತ್ರ ಸಿನಿಮಾಗಳಲ್ಲಿ ಅಭಿನಯಿಸಿರುವ ಸುದೀಪ್, ಅಮಿತಾಬ್ ಬಚ್ಚನ್ ಟ್ವೀಟ್ನ ರೀಟ್ವೀಟ್ ಮಾಡಿ ಆರ್ಜಿವಿಗೆ ಶುಭಾಶಯ ತಿಳಿಸಿದ್ದಾರೆ.

ಅವರಿಬ್ಬರ ಟ್ವೀಟ್‌ಗೆ ಪ್ರತಿಕ್ರಿಯೆ ನೀಡಿರುವ ವರ್ಮಾ "ನೀವು, ಅಮಿತಾಬ್ ಹೇಳ್ತಿರೋದು ನೋಡ್ತಿದ್ರೆ, ನನಗೆ ಭಯವಾಗ್ತಿದೆ" ಅಂತ ಟ್ವೀಟ್ ಮಾಡಿದ್ದಾರೆ. 
Stay up to date on all the latest ಬಾಲಿವುಡ್ news with The Kannadaprabha App. Download now
facebook twitter whatsapp