ಧಾರ್ಮಿಕ ಭಾವನೆಗಳಿಗೆ ಧಕ್ಕೆ: ರವೀನಾ ಟಂಡನ್ ವಿರುದ್ಧ ಎರಡನೇ ಎಫ್ ಐಆರ್ ದಾಖಲು

ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದ ಮೇರೆಗೆ ಬಾಲಿವುಡ್ ನಟಿ ರವೀನಾ ಟಂಡನ್ ವಿರುದ್ಧ ವಾರದಲ್ಲಿ  ಎರಡನೇ ಬಾರಿಗೆ ಎಫ್ ಐಆರ್ ದಾಖಲಾಗಿದೆ
ರವೀನಾ ಟಂಡನ್
ರವೀನಾ ಟಂಡನ್

ಚಂಡೀಗಢ: ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದ ಮೇರೆಗೆ ಬಾಲಿವುಡ್ ನಟಿ ರವೀನಾ ಟಂಡನ್ ವಿರುದ್ಧ ವಾರದಲ್ಲಿ  ಎರಡನೇ ಬಾರಿಗೆ ಎಫ್ ಐಆರ್ ದಾಖಲಾಗಿದೆ

ಟಿವಿ ಶೋವೊಂದರಲ್ಲಿ ರವೀನಾ ಟಂಡನ್, ಖ್ಯಾತ ಸಿನಿಮಾ ನಿರ್ದೇಶಕಿ ಹಾಗೂ ನೃತ್ಯ ನಿರ್ದೇಶಕಿ ಫರ್ಹಾಖಾನ್ ಮತ್ತು ಹಾಸ್ಯ ನಟಿ ಭಾರ್ತಿ ಸಿಂಗ್  ತಮ್ಮ ಸಮುದಾಯದ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಿ  ದೂರು ದಾಖಲಿಸಿರುವುದಾಗಿ ಪೊಲೀಸರು ಇಂದು ತಿಳಿಸಿದ್ದಾರೆ.

ಕಾಂಬೊಜ್ ನಗರದ ನಿವಾಸಿಗಳು  ನೀಡಿದ ದೂರಿನ ಆಧಾರದ ಮೇಲೆ ಐಪಿಸಿ ಸೆಕ್ಷನ್ 295-ಎ ( ಧಾರ್ಮಿಕ ನಂಬಿಕೆ , ಧರ್ಮವನ್ನು ಪ್ರಚೋದಿಸುವ ಉದ್ದೇಶದ  ದುರದ್ದೇಶಪೂರ್ವಕ ಹೀನ ಕೃತ್ಯ ) ಅಡಿಯಲ್ಲಿ ಈ ಸೆಲೆಬ್ರಿಟಿಗಳ ವಿರುದ್ಧ  ಪ್ರಕರಣ ದಾಖಲಿಸಲಾಗಿದೆ ಎಂದು ಫಿರೊಜ್ ಪುರ್ ಎಸ್ ಎಸ್ ಪಿ ವಿವೇಕ್  ಶೀಲ್ ಸೊನಿ ಹೇಳಿದ್ದಾರೆ.

ಕ್ರಿಶ್ಚಿಯನ್ ಸಮುದಾಯವನ್ನು ಅವಮಾನಿಸುವ ಮೂಲಕ ಧಾರ್ಮಿಕ ಭಾವನೆಗಳಿಗೆ ದಕ್ಕೆ ತರಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಇದೇ ಪ್ರಕರಣದಲ್ಲಿ ಟಂಡನ್, ಫರ್ಹಾನ್ ಖಾನ್ ಹಾಗೂ ಭಾರ್ತಿ ಸಿಂಗ್ ವಿರುದ್ಧ ಬುಧವಾರ ಅಮೃತಸರ ಠಾಣೆಯಲ್ಲೂ ಪ್ರಕರಣ ದಾಖಲಾಗಿತ್ತು. 
  
ಈ ಮೂವರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ತನಿಖೆ ಪ್ರಗತಿಯಲ್ಲಿದೆ ಎಂದು ಅಮೃತಸರ ಗ್ರಾಮೀಣ ಎಸ್ ಎಸ್ ಪಿ ವಿಕ್ರಮ್ ಜೀತ್ ದಗ್ಗಲ್ ಹೇಳಿದ್ದರು. ಈ ಸೆಲೆಬ್ರಿಟಿಗಳ ವಿರುದ್ಧ ಕ್ರಿಶ್ಚಿಯನ್ ಸಂಘಟನೆಗಳಿಂದ ಪಂಜಾಬ್ ಮತ್ತಿತರ ಕಡೆಗಳಲ್ಲಿ ಪ್ರತಿಭಟನೆಗಳು ಕೂಡಾ ನಡೆಯುತ್ತಿವೆ.

ಈ ಮಧ್ಯೆ ಯಾವುದೇ ಧರ್ಮವನ್ನು ಅವಮಾನಿಸುವ ಹೇಳಿಕೆ ನೀಡಿಲ್ಲ, ಒಂದು ವೇಳೆ ಆ ರೀತಿಯ ಹೇಳಿಕೆ ನೀಡಿದ್ದರೆ ಕ್ಷಮೆ ಕೋರುವುದಾಗಿ ರವೀನಾ ಟಂಡನ್ ಹಾಗೂ ಫರ್ಹಾನ್ ಖಾನ್ ಶುಕ್ರವಾರ ಟ್ವೀಟ್ ಮಾಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com