ನಿಮ್ಮ ತಾಯಿಯೂ ಇಷ್ಟೂ ಹಾಟ್ ಆಗಿದ್ರಾ? ಟ್ರೋಲಿಗರ ಬೆವರಿಳಿಸಿದ ನಟಿ ಸಮೀರಾ

ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಸೆಲಬ್ರಿಟಿಗಳನ್ನು ಟ್ರೋಲ್ ಮಾಡುವ ಹುಚ್ಚು ಸಾಹಸ ಹೆಚ್ಚಾಗಿದ್ದು ಸೆಲಬ್ರಿಟಿಗಳ ಪ್ರತಿ ಕೃತ್ಯಗಳು ಟೀಕೆಗೆ ಗುರಿಯಾಗುತ್ತಿವೆ.

Published: 14th March 2019 12:00 PM  |   Last Updated: 14th March 2019 03:20 AM   |  A+A-


Sameera Reddy

ಸಮೀರಾ ರೆಡ್ಡಿ

Posted By : VS VS
Source : Online Desk
ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಸೆಲಬ್ರಿಟಿಗಳನ್ನು ಟ್ರೋಲ್ ಮಾಡುವ ಹುಚ್ಚು ಸಾಹಸ ಹೆಚ್ಚಾಗಿದ್ದು ಸೆಲಬ್ರಿಟಿಗಳ ಪ್ರತಿ ಕೃತ್ಯಗಳು ಟೀಕೆಗೆ ಗುರಿಯಾಗುತ್ತಿವೆ.

ನಟಿ ಸಮೀರಾ ರೆಡ್ಡಿ ಅವರು ತುಂಬ ಗರ್ಭದ ಫೋಟೋವನ್ನು ಅಪ್ಲೋಡ್ ಮಾಡಿದ್ದು ಇದಕ್ಕೆ ನೆಟಿಗರು ಬಾಯಿಗೆ ಬಂದ ಹಾಗೆ ಟ್ವೀಟ್ ಮಾಡುತ್ತಿದ್ದು ಇದಕ್ಕೆ ಸಮೀರಾ ರೆಡ್ಡಿ ನೆಟಿಗರ ಮೈ ಚಳಿ ಬಿಡಿಸಿದ್ದಾರೆ.  2014ರಲ್ಲಿ ಅಕ್ಷಯ್ ವರ್ದೆ ಜತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಸಮೀರಾ ಅದಾಗಲೇ ಒಂದು ಮಗುವಿಗೆ ಜನ್ಮ ನೀಡಿದ್ದರು.

ಇದೀಗ ಎರಡನೇ ಮಗುವಿಗೆ ಜನ್ಮ ನೀಡುವ ಖುಷಿಯಲ್ಲಿರುವ ಅವರು ತಮ್ಮ ಸಂತಸವನ್ನು ಎಲ್ಲರೊಡನೆ ಹಂಚಿಕೊಳ್ಳಲು ಬಯಸಿದ್ದು ಬೇಬಿ ಬಂಪ್ ನ ಒಂದು ಫೋಟೋ ಇನ್ ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು. ಇದಕ್ಕೆ ಕೆಲವರು ಪ್ರಗ್ನೆನ್ಸಿಯಿಂದ ನಿಮ್ಮ ದೇಹಸೌಂದರ್ಯ ಹಾಳಾಗಿದೆ ಎಂದು ಟ್ವೀಟಿಸಿದ್ದರು. ಇದಕ್ಕೆ ಕೋಪಗೊಂಡ ಸಮೀರಾ ಸ್ವಲ್ಪ ಖಾರವಾಗಿಯೇ ಪ್ರತಿಕ್ರಿಯಿಸಿದ್ದಾರೆ.

ನೀವು ಜನ್ಮ ಪಡದೆ ವೇಳೆ ನಿಮ್ಮ ತಾಯಿಯೂ ಹಾಟ್ ಆಗಿದ್ದರಾ? ಎಂದು ಮರು ಪ್ರಶ್ನೆ ಹಾಕುವ ಮೂಲಕ ಟ್ರೋಲಿಗರ ಬಾಯಿ ಮುಚ್ಚಿಸಿದ್ದಾರೆ.
Poll
'Nationalism', 'citizenship', 'demonetisation' among chapters dropped from CBSE syllabus

ಹಿರಿಯ ತರಗತಿಗಳ ಪಠ್ಯಕ್ರಮವನ್ನು 30% ರಷ್ಟು ಕಡಿಮೆ ಮಾಡುವ ಸಿಬಿಎಸ್‌ಇ ನಡೆ ಸರಿಯೇ?


Result
ಸರಿ
ತಪ್ಪು
ಗೊತ್ತಿಲ್ಲ
flipboard facebook twitter whatsapp