ಕೊನೆಗೂ ಕೋವಿಡ್ ಸೋಂಕಿನಿಂದ ಮುಕ್ತವಾಗಿದ್ದೇನೆ: ಅಭಿಷೇಕ್ ಬಚ್ಚನ್

ಬಾಲಿವುಡ್ ನಟ ಅಭಿಷೇಕ್ ಬಚ್ಚನ್ ಅವರ ಕೋವಿಡ್ ಸೋಂಕಿನ ಫಲಿತಾಂಶ ಋಣಾತ್ಮಕವಾಗಿದೆ. ಈ ವಿಷಯವನ್ನು ಸ್ವತಃ ಅಭಿಷೇಕ್ ಬಚ್ಚನ್ ಅವರೇ ಟ್ವಿಟರ್ ಮೂಲಕ ತಿಳಿಸಿದ್ದಾರೆ.
ಅಭಿಶೇಕ್ ಬಚ್ಚನ್
ಅಭಿಶೇಕ್ ಬಚ್ಚನ್
Updated on

ನವದೆಹಲಿ: ಬಾಲಿವುಡ್ ನಟ ಅಭಿಷೇಕ್ ಬಚ್ಚನ್ ಅವರ ಕೋವಿಡ್ ಸೋಂಕಿನ ಫಲಿತಾಂಶ ಋಣಾತ್ಮಕವಾಗಿದೆ. ಈ ವಿಷಯವನ್ನು ಸ್ವತಃ ಅಭಿಷೇಕ್ ಬಚ್ಚನ್ ಅವರೇ ಟ್ವಿಟರ್ ಮೂಲಕ ತಿಳಿಸಿದ್ದಾರೆ.

"ಈ ಮಧ್ಯಾಹ್ನ ನನ್ನ ಕೋವಿಡ್ -19 ಫಲಿತಾಂಶ ಹೊರಬಂದಿದ್ದು, ಋಣಾತ್ಮಕವಾಗಿದೆ. ನಾನು ಸೋಂಕನ್ನು ಎದುರಿಸುತ್ತೇನೆ ಎಂದು ನಿಮಗೆ ಹೇಳಿದ್ದೆ. ನನಗಾಗಿ ಮತ್ತು ನನ್ನ ಕುಟುಂಬಕ್ಕಾಗಿ ಪ್ರಾರ್ಥಿಸಿದ ಎಲ್ಲರಿಗೂ ಧನ್ಯವಾದಗಳು. ನಾನಾವತಿ ಆಸ್ಪತ್ರೆಯ ವೈದ್ಯರು ಮತ್ತು ಶುಶ್ರೂಷಾ ಸಿಬ್ಬಂದಿಗೆ ನನ್ನ ಶಾಶ್ವತ ಕೃತಜ್ಞತೆಗಳು ಎಂದು ಜೂನಿಯರ್ ಬಚ್ಚನ್ ಹೇಳಿದ್ದಾರೆ.

ಜುಲೈ 11ರಂದು ಅಮಿತಾಬ್ ಬಚ್ಚನ್ ಅವರ ಜತೆ 44 ವರ್ಷ ವಯಸ್ಸಿನ ಅಭಿಷೇಕ್ ಬಚ್ಚನ್ ಅವರಲ್ಲಿಯೂ ಕೋವಿಡ್ ಸೋಂಕು ದೃಢಪಟ್ಟಿತ್ತು.  

ಒಂದು ದಿನದ ನಂತರ ಅವರ ಪತ್ನಿ ಐಶ್ವರ್ಯಾ ರೈ ಬಚ್ಚನ್ ಮತ್ತು ಮಗಳು ಆರಾಧ್ಯಾ ಕೂಡ ಸೋಂಕಿಗೆ ಒಳಗಾಗಿದ್ದರು. ಚಿಕಿತ್ಸೆ ಪಡೆದು ಸೋಂಕು ಋಣಾತ್ಮಕವಾದ ಬಳಿಕ ಅಮಿತಾಭ್ ಬಚ್ಚನ್ ಅವರನ್ನು ಕಳೆದ ವಾರ ಭಾನುವಾರ ನಾನಾವತಿ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com