'ಅವನ' ಆದೇಶದಂತೆ ಚಿತ್ರರಂಗಕ್ಕೆ ಗುಡ್ ಬೈ ಹೇಳಿದ ಬಾಲಿವುಡ್ ನಟಿ ಸನಾ ಖಾನ್!

ದಿಢೀರ್ ಬೆಳವಣಿಗೆಯಲ್ಲಿ ಬಾಲಿವುಡ್ ನ ಖ್ಯಾತ ನಟಿ ಸನಾ ಖಾನ್ ಚಿತ್ರರಂಗಕ್ಕೆ ಗುಡ್ ಬೈ ಹೇಳಿದ್ದಾರೆ. 
ಸನಾ ಖಾನ್ (ಸಂಗ್ರಹ ಚಿತ್ರ)
ಸನಾ ಖಾನ್ (ಸಂಗ್ರಹ ಚಿತ್ರ)
Updated on: 

ಮುಂಬೈ: ದಿಢೀರ್ ಬೆಳವಣಿಗೆಯಲ್ಲಿ ಬಾಲಿವುಡ್ ನ ಖ್ಯಾತ ನಟಿ ಸನಾ ಖಾನ್ ಚಿತ್ರರಂಗಕ್ಕೆ ಗುಡ್ ಬೈ ಹೇಳಿದ್ದಾರೆ. 

ಹೌದು.. ಗೋಲ್ಡನ್ ಸ್ಟಾರ್ ಗಣೇಶ್ ರ ಕೂಲ್ ಚಿತ್ರದ ನಾಯಕಿ ನಟಿ ಸನಾ ಖಾನ್ ಚಿತ್ರರಂಗಕ್ಕೆ ಗುಡ್ ಬೈ ಹೇಳಿದ್ದಾರೆ. ನಟಿ ಸನಾ ಖಾನ್ ಅವರ ಈ ಅಚ್ಚರಿ ನಿರ್ಧಾರಕ್ಕೆ 'ಆತ' ಕಾರಣ ಎಂದು ಹೇಳಲಾಗಿದೆ. ಸನಾ ಖಾನ್ ರ ನಿರ್ಧಾರದ ಹಿಂದಿರುವ ಆತ ಯಾರು ಎಂಬ ಪ್ರಶ್ನೆಗೆ ಸ್ವತಃ ಸನಾ ಖಾನ್ ಇನ್  ಸ್ಟಾಗ್ರಾಮ್ ನಲ್ಲಿ ಬರೆದುಕೊಂಡಿದ್ದು, ತಾವು ಚಿತ್ರರಂಗದಿಂದ ದೂರ ಸರಿಯಲು ಆತ ಕಾರಣ ಎಂದು ಹೇಳಿಕೊಂಡಿದ್ದಾರೆ. ಸನಾ ಖಾನ್ ಭಗವಂತನ ಆದೇಶದಂತೆ ತಾನು ಮಾನವೀಯ ಸೇವೆಯಲ್ಲಿ ತೊಡಗಿಕೊಳ್ಳುವುದಾಗಿ ಹೇಳಿದ್ದಾರೆ.

ತೆಲುಗು, ತಮಿಳು, ಹಿಂದಿ, ಮಲಯಾಳಂ ಭಾಷೆಯ ಸಿನಿಮಾಗಳಲ್ಲಿ ಸನಾ ಖಾನ್ ನಟಿಸಿದ್ದಾರೆ. 2012ರಿಂದ ಇಲ್ಲಿಯವರೆಗಿನ ಬಿಗ್ ಬಾಸ್ ಸೀಸನ್‌ಗಳಲ್ಲಿ ಸ್ಪರ್ಧಿಯಾಗಿ, ಅತಿಥಿಯಾಗಿ ಸನಾ ಭಾಗವಹಿಸಿದ್ದರು. ಸಲ್ಮಾನ್ ಖಾನ್ ಅವರ 'ಜೈಹೋ' ಸಿನಿಮಾದಲ್ಲಿ ಸನಾ ನಟಿಸಿದ್ದರು. 

ಇಷ್ಟಕ್ಕೂ ಯಾರು ಆತ... ಸನಾ ಖಾನ್ ಏನು ಹೇಳಿದ್ದಾರೆ..?
'ಮಾನವೀಯತೆ ಮೇಲೆ ಕೆಲಸ ಮಾಡಿಕೊಂಡು, ಸೃಷ್ಟಿದಾತ ಹೇಳಿದ ನಿಯಮಗಳನ್ನು ಪಾಲಿಸುತ್ತೇನೆ. ನನಗೆ ಉದ್ಯಮ ಹೆಸರು, ಹಣ, ಗೌರವ ಎಲ್ಲವನ್ನು ನೀಡಿದೆ. ಆದರೆ' ಎಂದು ಹೇಳಿದ್ದರು. ಮನುಷ್ಯ ಹೆಸರು, ಹಣ ಮಾಡಲು ಭೂಮಿಗೆ ಬರುವುದಾ? ನನಗೆ ಇದರ ಅರಿವಾಗಿದೆ. 'ಸಮಾಜದಲ್ಲಿ ಕಷ್ಟದಲ್ಲಿರುವವರಿಗೆ,  ನಿಸ್ಸಹಾಯಕರಿಗೆ ಸಹಾಯ ಮಾಡೋದು ಮನುಷ್ಯರ ಜೀವನದ ಭಾಗವಲ್ಲವಾ? ಮನುಷ್ಯರು ಯಾವ ಸಂದರ್ಭದಲ್ಲಾದರೂ ಸಾಯಬಹುದು ಎಂದು ಅವರಿಗೆ ತಿಳಿದಿಲ್ಲವೇ? ಸತ್ತ ಮೇಲೆ ಮನುಷ್ಯರಿಗೆ ಏನಾಗುತ್ತದೆ? ಈ ಪ್ರಶ್ನಗೆ ನಾನು ಬಹಳ ಸಮಯದಿಂದ ಉತ್ತರ ಹುಡುಕುತ್ತಿದ್ದೇನೆ. ಆದರೆ ನಾನು ಸತ್ತ ನಂತರ  ಏನಾಗುತ್ತದೆ ಎಂಬ ಪ್ರಶ್ನೆ ಸದಾ ಕಾಡಿತ್ತು' ಎಂದು ಸನಾ ಖಾನ್ ಹೇಳಿದ್ದಾರೆ.

ಈ ಜೀವನ ಯಾಕೆ ಬೇಕು?
'ಈ ಜೀವನವು ಮರಣಾನಂತರದ ಜೀವನದ ಸುಧಾರಣೆಗಾಗಿ ಆಗಿದೆ. ಸೃಷ್ಟಿಕರ್ತ ಹೇಳಿದಂತೆ ಗುಲಾಮ ಕೇಳಿದರೆ ಉತ್ತಮ. ಹೆಸರು, ಹಣಕ್ಕೋಸ್ಕರ ಇಡೀ ಜೀವನವನ್ನು ಕಳೆಯುವುದಲ್ಲ. ಹೀಗಾಗಿ ನಾನು ಬಣ್ಣದಲೋಕದಿಂದ ದೂರ ಹೋಗುವೆ. ನನ್ನ ಪಶ್ಚಾತ್ತಾಪವನ್ನು ಅಲ್ಲಾ ಮನ್ನಿಸಿ, ಸೃಷ್ಟಿಕರ್ತ ತಿಳಿಸಿದಂತೆ  ಅವನ ನಿರ್ಣಯದಂತೆ ಮಾನವೀಯತೆ ಮೇಲೆ ನಿಜವಾದ ಜೀವನ ಕಳೆಯಲು ಅನುವು ಮಾಡಿಕೊಡುವಂತೆ ಸಹೋದರ-ಸಹೋದರಿಯರೇ ನನಗಾಗಿ ಪ್ರಾರ್ಥಿಸಿ' ಎಂದು ಸನಾ ಖಾನ್ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com