ಕೊರೋನಾ ಗೆದ್ದು, ಕೆಬಿಸಿ ಶೂಟ್ ನಲ್ಲಿ ಬ್ಯುಸಿಯಾದ ಬಾಲಿವುಡ್ ದಿಗ್ಗಜ ಅಮಿತಾಭ್ ಬಚ್ಚನ್

ಮಹಾಮಾರಿ ಕೊರೋನಾ ಸೋಂಕಿನಿಂದ ಸಂಪೂರ್ಣವಾಗಿ ಗುಣಮುಖರಾಗಿರುವ ಬಾಲಿವುಡ್ ದಿಗ್ಗಜ ಅಮಿತಾಭ್ ಬಚ್ಚನ್ ಅವರು ಮತ್ತೆ ಚಿತ್ರೀಕರಣದಲ್ಲಿ ಭಾಗಿಯಾಗಿದ್ದು, ಪ್ರೋಮೋ ಶೂಟಿಂಗ್ ಪೋಟೋಗಳನ್ನು ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಅಪ್ಡೇಟ್ ಮಾಡಿ ಸುರಕ್ಷಿತವಾಗಿರಿ, ಜಾಗ್ರತೆ ವಹಿಸಿ ಎಂದು ಅಭಿಮಾನಿಗಳಿಗೆ ತಿಳಿಸಿದ್ದಾರೆ. 
ಅಮಿತಾಭ್ ಬಚ್ಚನ್
ಅಮಿತಾಭ್ ಬಚ್ಚನ್
Updated on: 

ನವದೆಹಲಿ: ಮಹಾಮಾರಿ ಕೊರೋನಾ ಸೋಂಕಿನಿಂದ ಸಂಪೂರ್ಣವಾಗಿ ಗುಣಮುಖರಾಗಿರುವ ಬಾಲಿವುಡ್ ದಿಗ್ಗಜ ಅಮಿತಾಭ್ ಬಚ್ಚನ್ ಅವರು ಮತ್ತೆ ಚಿತ್ರೀಕರಣದಲ್ಲಿ ಭಾಗಿಯಾಗಿದ್ದು, ಪ್ರೋಮೋ ಶೂಟಿಂಗ್ ಪೋಟೋಗಳನ್ನು ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಅಪ್ಡೇಟ್ ಮಾಡಿ ಸುರಕ್ಷಿತವಾಗಿರಿ, ಜಾಗ್ರತೆ ವಹಿಸಿ ಎಂದು ಅಭಿಮಾನಿಗಳಿಗೆ ತಿಳಿಸಿದ್ದಾರೆ. 

ಸಾಕಷ್ಟು ಮುನ್ನೆಚ್ಚರಿಕೆಗಳೊಂದಿಗೆ ಜನಪ್ರಿಯ ರಿಯಾಲಿಟಿ ಶೋ "ಕೌನ್ ಬನೇಗಾ ಕರೋಡ್ ಪತಿ" (ಕೆಬಿಸಿ) ಯ ಹನ್ನೆರಡನೇ ಸೀಸನ್ ಚಿತ್ರೀಕರಣದಲ್ಲಿ ಭಾಗಿಯಾಗಿರುವ ಚಿತ್ರಗಳನ್ನು ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ಅವರು ಹಂಚಿಕೊಂಡಿದ್ದಾರೆ. 

ಫೋಟೋದಲ್ಲಿ ಶೂಟಿಂಗ್ ನಲ್ಲಿರುವ ಸಿಬ್ಬಂದಿಗಳು ಪಿಪಿಇ ಕಿಟ್, ಮಾಸ್ಕ್, ಗ್ಲೌಸ್ ಹಾಗೂ ಶೀಲ್ಡ್ ಗಳನ್ನು ಧರಿಸಿರುವುದು ಕಂಡು ಬಂದಿದೆ.

ಈ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಅಭಿಮಾನಿಗಳಿಗೆ "ಕೆಲಸದಲ್ಲಿ ಸುರಕ್ಷಿತವಾಗಿರಿ.. ಮುನ್ನೆಚ್ಚರಿಕೆವಹಿಸಿ... ಮತ್ತು ಎಚ್ಚರಿಕೆಯಿಂದಿರಿ ಎಂದು ಹೇಳಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com