ಬಾಲಿವುಡ್ ಖ್ಯಾತ ನೃತ್ಯ ಸಂಯೋಜಕಿ ಸರೋಜ್ ಖಾನ್ ಇನ್ನಿಲ್ಲ

ಬಾಲಿವುಡ್ ಹಿರಿಯ ನೃತ್ಯ ಸಂಯೋಜಕಿ ಸರೋಜ್ ಖಾನ್ ಹೃದಯಾಘಾತದಿಂದ ದಿಂದ ಶುಕ್ರವಾರ ಮುಂಜಾನೆ ನಿಧನ ಹೊಂದಿದ್ದಾರೆ.

Published: 03rd July 2020 07:40 AM  |   Last Updated: 03rd July 2020 12:24 PM   |  A+A-


saroj khan

ಸರೋಜ್ ಖಾನ್

Posted By : Manjula VN
Source : Online Desk

ಮುಂಬೈ: ಬಾಲಿವುಡ್ ಹಿರಿಯ ನೃತ್ಯ ಸಂಯೋಜಕಿ ಸರೋಜ್ ಖಾನ್ ಹೃದಯಾಘಾತದಿಂದ ದಿಂದ ಶುಕ್ರವಾರ ಮುಂಜಾನೆ ನಿಧನ ಹೊಂದಿದ್ದಾರೆ. 

ಅವರಿಗೆ 71 ವರ್ಷ ವಯಸ್ಸಾಗಿತ್ತು. ಸರೋಜ್ ಖಾನ್ ಪತಿ, ಪುತ್ರ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

ಉಸಿರಾಟದ ಸಮಸ್ಯೆ ಕಾಣಿಸಿಕೊಂಡ ನಂತರ ಕಳೆದ ತಿಂಗಳು ಮುಂಬೈನ ಗುರು ನಾನಕ್ ಆಸ್ಪತ್ರೆಗೆ ಅವರನ್ನು ದಾಖಲಿಸಲಾಗಿತ್ತು. ಹೃದಯಾಘಾತದಿಂದ ಶುಕ್ರವಾರ ಇಂದು ಬೆಳಗಿನ ಜಾವ ಮೃತಪಟ್ಟಿದ್ದಾರೆ ಎಂದು ಆಸ್ಪತ್ರೆ ಮೂಲಗಳು ಹೇಳಿವೆ.

ಬಾಲಿವುಡ್ ಹಿರಿಯ ನೃತ್ಯ ಸಂಯೋಜಕಿಯಾಗಿದ್ದ ಸರೋಜ್ ಖಾನ್ ತಮ್ಮ ವೃತ್ತಿ ಜೀವನದಲ್ಲಿ 2 ಸಾವಿರಕ್ಕೂ ಹಿಂದಿ ಸಿನಿಮಾ ಹಾಡುಗಳಿಗೆ ನೃತ್ಯ ಸಂಯೋಜನೆ ಮಾಡಿದ್ದರು.

ವಿಶೇಷವಾಗಿ ಬಾಲಿವುಡ್ ನಟಿಯರಾದ ಮಾಧರಿ ದೀಕ್ಷಿತ್ ಹಾಗೂ ಶ್ರೀದೇವಿ ಅವರಿಗೆ ಮಾಡಿದ್ದ ನೃತ್ಯ ಸಂಯೋಜನೆ ಬಾಲಿವುಡ್ ನಲ್ಲಿ ಭಾರಿ ಜನಪ್ರಿಯತೆ ಗಳಿಸಿತ್ತು.

ಉಸಿರಾಟದ ತೊಂದರೆ ಕಾಣಿಸಿಕೊಂಡ ನಂತರ ಜೂನ್ 17 ರಂದು ಸರೋಜ್ ಖಾನ್ ಅವರನ್ನು ಆಸ್ಪತ್ರೆಗೆ ದಾಖಲಾಸಿಲಾಗಿತ್ತು, ಆದರೆ ಅವರಿಗೆ ನಡೆಸಲಾದ ಕೋವಿಡ್ ಪರೀಕ್ಷೆಯಲ್ಲಿ ನೆಗಟಿವ್ ವರದಿ ಬಂದಿತ್ತು.

ಸರೋಜ್ ಖಾನ್ ಅವರ ನಿಧನಕ್ಕೆ ಬಾಲಿವುಡ್ ನಟ ಅಕ್ಷಯ್ ಕುಮಾರ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ನೃತ್ಯ ಸಂಯೋಜನೆಯ ದಂತಕತೆಯಾಗಿದ್ದ ಸರೋಜ್ ಖಾನ್ ಅವರ ನಿಧನ ಚಿತ್ರರಂಗಕ್ಕೆ ಉಂಟಾದ ಅತಿ ದೊಡ್ಡ ನಷ್ಟ ಎಂದು ಸಂತಾಪ ಸೂಚಿಸಿದ್ದಾರೆ. 

1948ರಲ್ಲಿ ಮುಂಬೈನಲ್ಲಿ ಜನಿಸಿದ್ದ ಸರೋಜ್ ಖಾನ್, ಮೂರು ವರ್ಷದ ಮಗುವಾಗಿದ್ದಾಲೇ ಬಾಲ ನಟಿಯಾಗಿ ಸಿನಿಮಾ ರಂಗ ಪ್ರವೇಶಿಸಿದ್ದರು. 

ಆಕೆಗೆ 71 ವರ್ಷ. ಅವರ ನಿಜವಾದ ಹೆಸರು ನಿರ್ಮಲಾ ನಾಗ್ಪಾಲ್. ಅವರು 200ಕ್ಕೂ ಹೆಚ್ಚು ಚಿತ್ರಗಳಿಗೆ ನೃತ್ಯ ಸಂಯೋಜನೆ ಮಾಡಿದ್ದಾರೆ. ಸರೋಜ್ ಮೊದಲು ಸಹಾಯಕ ನೃತ್ಯ ಸಂಯೋಜಕರಾಗಿದ್ದರು. ಆದರೆ ಅವರು 1947ರ ಗೀತಾ ಮೇರಾ ನಾಮ್ ಚಿತ್ರದೊಂದಿಗೆ ನೃತ್ಯ ಸಂಯೋಜಕರಾದರು.

'ನಿಂಬುಡಾ-ನಿಂಬುಡಾ', 'ಏಕ್ ದೋ ತೀನ್', 'ಡೋಲಾ ರೆ ಡೋಲಾ', 'ಕಟ್ಟೆ ನಹಿ ಕಡ್ತೆ' ಸೇರಿದಂತೆ ಸಾವಿರಾರು ಹಿಂದಿ ಚಿತ್ರ ಗೀತೆಗಳಿಗೆ ಸರೋಜ್ ಖಾನ್ ನೃತ್ಯ ಸಂಯೋಜನೆ ಮಾಡಿದ್ದಾರೆ. 'ಹವಾ-ಹವಾಯಿ', 'ನಾ ಜಾನೆ ಕಹನ್ ಸೆ ಸೆ ಆಯಿ ಹೈ', 'ದಿಲ್ ಛಾಕ್-ಛಾಕ್ ಕರ್ ಲಗಾ', 'ಹಮ್ ಆಜ್ ಆಜ್ ಹೈ ಕಾಯುವಿಕೆ', 'ಚೋಲಿ ಕೆ ಪ್ಯಾರ್' ಮುಂತಾದ ಅನೇಕ ಸೂಪರ್ ಹಿಟ್ ಹಾಡುಗಳಿಗೆ ನೃತ್ಯ ಸಂಯೋಜನೆ ಮಾಡಿದ್ದಾರೆ.

ಸರೋಜ್ ಖಾನ್ ತೇಜಾಬ್ , ಖಳನಾಯಕ್, ಮಿಸ್ಟರ್ ಇಂಡಿಯಾ, ನಾಗಿನಾ, ಚಾಂದನಿ, ಹಮ್ ದಿಲ್ ದೇ ಚುಕೆ ಸನಮ್, ದೇವದಾಸ್ , ಚಿತ್ರ ಹಾಡುಗಳಿಗೆ ಮಾಡಿದ್ದ ನೃತ್ಯ ಸಂಯೋಜನೆ ರಸಿಕರ ಮನ ಸೂರೆಗೊಂಡಿದ್ದವು. 

Stay up to date on all the latest ಬಾಲಿವುಡ್ news
Poll
Second phase election for urban local bodies on May 29

ಪುದುಚೇರಿ ಮತ್ತು ಮಧ್ಯಪ್ರದೇಶದಲ್ಲಿ ಚುನಾಯಿತ ಸರ್ಕಾರಗಳು ಪತನಗೊಂಡ ಉದಾಹರಣೆ ನೋಡಿದರೆ, ಚುನಾವಣೆಗಳು ಕೇವಲ ಹಳೇಯ ಪ್ರಜಾಪ್ರಭುತ್ವದ ಸಂಕೇತಗಳಾಗಿವೆಯೇ?


Result
ಹೌದು
ಇಲ್ಲ
flipboard facebook twitter whatsapp