ಪುತ್ರನನ್ನು ಬಾಲಿವುಡ್ ನಲ್ಲಿ ಲಾಂಚ್ ಮಾಡಲು ನಿರ್ಮಾಪಕ ಆದಿತ್ಯ ಚೋಪ್ರಾಗೆ 20 ಕೋಟಿ ರೂ. ನೀಡಿದ್ದ ರಣ್ ವೀರ್ ಸಿಂಗ್ ತಂದೆ: ಕಮಲ್ ಖಾನ್ ಬಾಂಬ್
ಮುಂಬೈ: ಬಾಲಿವುಡ್ ಸೆಲಬ್ರಿಟಿಗಳ ವಿರುದ್ಧ ಒಂದಿಲ್ಲೊಂದು ವಿವಾದಾತ್ಮಕ ಹೇಳಿಕೆಗಳನ್ನು ನೀಡಿ ಸುದ್ದಿಯಲ್ಲಿರುವ ನಟ ಕಮಲ್ ಖಾನ್. ಇದೀಗ ಹೊಸ ವಿವಾದಾತ್ಮಕ ಹೇಳಿಕೆ ನೀಡಿ ಮತ್ತೆ ಸುದ್ದಿಯಲ್ಲಿದ್ದಾರೆ.
ಈ ಬಾರಿ ಅವರ ಮಾತಿನ ಬಾಣಕ್ಕೆ ತುತ್ತಾಗಿರುವವರು ನಾಯಕ ನಟ ರಣ್ ವೀರ್ ಸಿಂಗ್. ರಣ್ ವೀರ್ ಸಿಂಗ್ ಅವರು ಬ್ಯಾಂಡ್ ಬಾಜಾ ಬಾರಾತ್ ಸಿನಿಮಾ ಮೂಲಕ ಬಾಲಿವುಡ್ ಪ್ರವೇಶ ಮಾಡಿದ್ದರು. ಆ ಸಿನಿಮಾವನ್ನು ಖ್ಯಾತ ಯಶ್ ರಾಜ್ ಫಿಲಂಸ್ ಸಂಸ್ಥೆ ನಿರ್ಮಿಸಿತ್ತು.
ಆ ಸಿನಿಮಾ ಮೂಲಕ ನಾಯಕನಾಗಿ ತಮ್ಮ ಪುತ್ರನನ್ನು ಲಾಂಚ್ ಮಾಡಲು ರಣ್ ವೀರ್ ಸಿಂಗ್ ತಂದೆ ಯಶ್ ರಾಜ್ ಸಂಸ್ಥೆಯ ಮುಖ್ಯಸ್ಥ ಆದಿತ್ಯ ಚೋಪ್ರಾ ಅವರಿಗೆ 20 ಕೋಟಿ ರೂ. ಕೊಟ್ಟಿದ್ದರು ಎಂದು ಕಮಲ್ ಖಾನ್ ಬಾಂಬ್ ಸಿಡಿಸಿದ್ದಾರೆ.
Related Article
43ನೇ ಕೈರೋ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಎಆರ್ ರೆಹಮಾನ್ಗೆ ವಿಶೇಷ ಗೌರವ!
'ಜಿಹಾದಿ ರಾಷ್ಟ್ರ' ಹೇಳಿಕೆ: ತನ್ನ ವಿರುದ್ಧ ಎಫ್ಐಆರ್ಗೆ ಪ್ರತ್ಯುತ್ತರವಾಗಿ ಹಾಟ್ ಫೋಟೋ ಹಂಚಿಕೊಂಡ ಕಂಗನಾ ರನೌತ್
ಸಿಖ್ ಸಮುದಾಯದ ವಿರುದ್ಧ ವಿವಾದಾತ್ಮಕ ಹೇಳಿಕೆ ಆರೋಪ: ಕಂಗನಾ ನಿವಾಸಕ್ಕೆ ಪೊಲೀಸ್ ಭದ್ರತೆ
ಮಾಧವನ್ ಮತ್ತು ಸುರ್ವೀನ್ ಕ್ಷಣಮಾತ್ರದಲ್ಲಿ ಪಾತ್ರದೊಳಕ್ಕೆ ಪರಕಾಯ ಪ್ರವೇಶ ಮಾಡುವ ಅದ್ಭುತ ಕಲಾವಿದರು: ಮನು ಜೋಸೆಫ್
11 ವರ್ಷಗಳ ಗೆಳತಿ ಪತ್ರಲೇಖಾರನ್ನು ವರಿಸಿದ ನ್ಯೂಟನ್ ನಟ ರಾಜ್ ಕುಮಾರ್ ರಾವ್
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ