ನನ್ನ ತಾಯಿಯ ಕನಸು ನನಸಾಯಿತು: ಒಟಿಟಿ ಬಿಗ್ ಬಾಸ್ ಕರಣ್ ಜೋಹರ್ ನಿರೂಪಣೆ!
ಹಿಂದಿ ಕಿರುತೆರೆಯ ಬಹು ಜನಪ್ರಿಯ ರಿಯಾಲಿಟಿ ಶೋ ‘ಬಿಗ್ ಬಾಸ್' ಒಟಿಟಿಯಲ್ಲಿ ಪ್ರಸಾರಗೊಳ್ಳಲಿದೆ. ಬಾಲಿವುಡ್‌ನ ಖ್ಯಾತ ನಿರ್ದೇಶಕ ಕರಣ್ ಜೋಹರ್ ಅವರು ಒಟಿಟಿಯಲ್ಲಿ ಪ್ರಸಾರಗೊಳ್ಳುವ ಬಿಗ್ ಬಾಸ್ ಶೋ ನಡೆಸಿಕೊಡಲಿದ್ದಾರೆ.
Published: 25th July 2021 01:46 PM | Last Updated: 25th July 2021 01:46 PM | A+A A-

ಕರಣ್ ಜೋಹರ್
ಹಿಂದಿ ಕಿರುತೆರೆಯ ಬಹು ಜನಪ್ರಿಯ ರಿಯಾಲಿಟಿ ಶೋ ‘ಬಿಗ್ ಬಾಸ್' ಒಟಿಟಿಯಲ್ಲಿ ಪ್ರಸಾರಗೊಳ್ಳಲಿದೆ. ಬಾಲಿವುಡ್‌ನ ಖ್ಯಾತ ನಿರ್ದೇಶಕ ಕರಣ್ ಜೋಹರ್ ಅವರು ಒಟಿಟಿಯಲ್ಲಿ ಪ್ರಸಾರಗೊಳ್ಳುವ ಬಿಗ್ ಬಾಸ್ ಶೋ ನಡೆಸಿಕೊಡಲಿದ್ದಾರೆ.
ಹಿಂದಿ ಬಿಗ್ ಬಾಸ್ ಸೀಸನ್ 15’ ಆಗಸ್ಟ್ 8ರಿಂದ ಆರಂಭಗೊಳ್ಳುತ್ತಿದೆ. ವೂಟ್ ಆ್ಯಪ್ಗೆ ಈ ಬಾರಿ ಹೆಚ್ಚು ಪ್ರಾಮುಖ್ಯತೆ ನೀಡಲಾಗುತ್ತಿದೆ. ಹೀಗಾಗಿ, ಬಿಗ್ ಬಾಸ್ ಒಟಿಟಿಯನ್ನು ವೂಟ್ ಪರಿಚಯಿಸಿದೆ.
ಮೊದಲು ಆರು ವಾರದ ಎಪಿಸೋಡ್ಗಳು ವೂಟ್ನಲ್ಲಿ ಮಾತ್ರ ಪ್ರಸಾರವಾಗಲಿದ್ದು ನಂತರ ಟಿವಿಗೆ ಶಿಫ್ಟ್ ಆಗಲಿದೆ. ಒಟಿಟಿ ಶೋಅನ್ನು ನಡೆಸಿಕೊಡೋಕೆ ಖ್ಯಾತ ಬಾಲಿವುಡ್ ನಿರ್ಮಾಪಕ ಕರಣ್ ಜೋಹರ್ ಆಗಮಿಸಿದ್ದಾರೆ. ಟಿವಿಯಲ್ಲಿ ಪ್ರಸಾರವಾಗುವ ಶೋ ನ್ನು ಸಲ್ಮಾನ್ ಖಾನ್ ನಡೆಸಿಕೊಡಲಿದ್ದಾರೆ.
ಸಾಮಾನ್ಯವಾಗಿ ಬಿಗ್ ಬಾಸ್ ಪ್ರತೀ ಸೀಸನ್ 100ರಿಂದ 120 ದಿನಗಳ ಕಾಲ ನಡೆಯುತ್ತದೆ. ಅಂದರೆ ನಾಲ್ಕು ತಿಂಗಳಿಗೆ ಬಿಗ್ ಬಾಸ್ ಪೂರ್ಣಗೊಳ್ಳುತ್ತದೆ. ಆದರೆ, ಈಗ ಇದನ್ನು ಎರಡು ತಿಂಗಳು ಹೆಚ್ಚುವರಿಯಾಗಿ ನಡೆಸೋಕೆ ವಾಹಿನಿ ನಿರ್ಧರಿಸಿದೆ. ಇದು ತುಂಬಾನೇ ದೀರ್ಘ ಎನಿಸಿರುವುದರಿಂದ ಮೊದಲ ಆರು ವಾರ ಈ ಶೋ ಅನ್ನು ಒಟಿಟಿಯಲ್ಲಿ ಪ್ರಸಾರ ಮಾಡುವ ನಿರ್ಧಾರಕ್ಕೆ ಬರಲಾಗಿದೆ. ಈಗ ಈ ಶೋ ಅನ್ನು ಕರಣ್ ನಡೆಸಿಕೊಡಲಿದ್ದಾರೆ.
ಕರಣ್ ಅವರನ್ನು ಈ ಶೋಗೆ ಆಯ್ಕೆ ಮಾಡಿಕೊಳ್ಳೋಕೂ ಒಂದು ಕಾರಣವಿದೆ. ಕರಣ್ ಜೋಹರ್ ಈಗಾಗಲೇ ಸಾಕಷ್ಟು ಶೋಗಳನ್ನು ಅದ್ಭುತವಾಗಿ ನಡೆಸಿಕೊಟ್ಟಿದ್ದಾರೆ. ಕಾಫಿ ವಿತ್ ಕರಣ್ಗೆ ದೊಡ್ಡ ಮಟ್ಟದ ವೀಕ್ಷಕರ ವಲಯ ಇದೆ. ಹೀಗಾಗಿ, ಬಿಗ್ ಬಾಸ್ ಒಟಿಟಿಯನ್ನು ಅವರು ನಡೆಸಿಕೊಟ್ಟರೆ ವೀಕ್ಷಕರನ್ನು ಸೆಳೆದುಕೊಳ್ಳಬಹುದು ಎಂಬುದು ವಾಹಿನಿಯ ಲೆಕ್ಕಾಚಾರವಾಗಿದೆ.