ಸಿನಿಮಾ ಬಿಟ್ಟು ಹೂವಿನ ವ್ಯಾಪಾರ ಶುರು ಮಾಡಿದ್ದೀರಾ?: ಲಾರಾ ದತ್ತಾಗೆ ನೆಟ್ಟಿಗನ ಪ್ರಶ್ನೆ

ಸಾಮಾಜಿಕ ಜಾಲತಾಣ 'ಕೂ' ವಿನಲ್ಲಿ ನಟಿ ಲಾರಾ ದತ್ತಾ ಹೂವು ಮತ್ತು ಗಿಡಗಳ ನಡುವೆ ಇರುವ ಫೋಟೋವನ್ನು ಹಂಚಿಕೊಂಡಿದ್ದು, ಇದಕ್ಕೆ ನೆಟ್ಟಿಗನೊಬ್ಬ ಸಿನಿಮಾ ಬಿಟ್ಟು ಹೂವಿನ ವ್ಯಾಪಾರ ಶುರು ಮಾಡಿದ್ದೀರಾ ಎಂದು ಪ್ರಶ್ನಿಸಿದ್ದಾರೆ.
ಲಾರಾ ದತ್ತಾ
ಲಾರಾ ದತ್ತಾ

ಬೆಂಗಳೂರು: ಸಾಮಾಜಿಕ ಜಾಲತಾಣ 'ಕೂ' ವಿನಲ್ಲಿ ನಟಿ ಲಾರಾ ದತ್ತಾ ಹೂವು ಮತ್ತು ಗಿಡಗಳ ನಡುವೆ ಇರುವ ಫೋಟೋವನ್ನು ಹಂಚಿಕೊಂಡಿದ್ದು, ಇದಕ್ಕೆ ನೆಟ್ಟಿಗನೊಬ್ಬ ಸಿನಿಮಾ ಬಿಟ್ಟು ಹೂವಿನ ವ್ಯಾಪಾರ ಶುರು ಮಾಡಿದ್ದೀರಾ ಎಂದು ಪ್ರಶ್ನಿಸಿದ್ದಾರೆ.

ಕುಟುಂಬದ ಜೊತೆ ಪ್ರವಾಸ ಕೈಕೊಂಡಿರುವ ನಟಿ ಲಾರಾ ದತ್ತಾ, 'ಹೊಂಬಿಸಿಲಿನ ತಾಣ ಮತ್ತು ಸ್ತಬ್ದವಾಗುವ ಒಂದಿಷ್ಟು ಸ್ವತಂತ್ರ ಕೆಲ ಸಮಯ ನಮಗೆಲ್ಲರಿಗೂ ಬೇಕಾಗುತ್ತದೆ' ಎಂಬ ಅಡಿ ಬರಹದಲ್ಲಿ ಕುಟುಂಬದ ಜೊತೆ ಕಾಲ ಕಳೆಯುತ್ತಿರುವ ಫೋಟೊವನ್ನು ಮೈಕ್ರೋ ಬ್ಲಾಗಿಂಗ್ ಪ್ಲ್ಯಾಟ್ ಫಾರ್ಮ್ ಕೂ ನಲ್ಲಿ ಹಂಚಿಕೊಂಡಿದ್ದಾರೆ.

ಲಾರಾ ದತ್ತಾ ಅವರ ಈ ಪೋಸ್ಟ್ ಗೆ ಸಾಕಷ್ಟು ಜನ ವಿಚಿತ್ರ ಕಾಮೆಂಟ್ ಗಳನ್ನು ಮಾಡಿದ್ದಾರೆ. ಅದರಲ್ಲಿ ಒಬ್ಬರು, ಹೂವುಗಳೊಂದಿಗೆ ನಿಮ್ಮನ್ನು ನೋಡಲು ಖುಷಿಯಾಗುತ್ತದೆ. ನೀವೇನಾದರೂ ಸಿನಿಮಾ ಬಿಟ್ಟು ಹೂವಿನ ವ್ಯಾಪಾರ ಶುರು ಮಾಡಿಕೊಂಡಿದ್ದೀರಾ ಎಂದು ಕಾಮೆಂಟ್ ಮಾಡಿದ್ದಾರೆ. 

'ಈಗಾಗಲೇ ನಿಮ್ಮ ಬಳಿ ಸ್ವತಂತ್ರ ಇದೆ. ಇನ್ನು ಸೂರ್ಯ ಬಿಸಿಲಿನ ಆನಂದವನ್ನು ಪಡೆಯಲು ಉತ್ತಮ ಜಾಗ ಎಂದರೆ ಅದು ನಿಮ್ಮ ಮನೆಯ ಮಹಡಿ ಎಂದು' ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.

ಲಾರಾ ದತ್ತ ಅವರು 'ಬೆಲ್ ಬಾಟಂ' ಸಿನಿಮಾಕ್ಕಾಗಿ ಇಂದಿರಾ ಗಾಂಧಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇತೀಚೆಗಷ್ಟೇ ಸೋಶಿಯಲ್ ಮೀಡಿಯಾದಲ್ಲಿ ಅವರ ಇಂದಿರಾ ಗಾಂಧಿ ಗೆಟಪ್‌ಗೋಸ್ಕರ ಮಾಡಿದ ಮೇಕಪ್ ವಿಡಿಯೋ ವೈರಲ್ ಆಗಿತ್ತು. ಲಾರಾ ದತ್ತ ಹೊಸ ಲುಕ್ ನೋಡಿ ಅವರ ಪತಿ, ಮಗಳೇ ತಬ್ಬಿಬ್ಬಾಗಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com