ಮುಂಬೈ: ದಕ್ಷಿಣಭಾರತದ ನಟ ಆರ್. ಮಾಧವನ್ ಇದೇ ಮೊದಲ ಬಾರಿಗೆ ನಿರ್ದೇಶನ ಜವಾಬ್ದಾರಿ ಹೊತ್ತಿರುವ ಸಿನಿಮಾ 'ರಾಕೆಟ್ರಿ: ದಿ ನಂಬಿ ಎಫೆಕ್ಟ್' ಎಪ್ರಿಲ್ 1, 2022ರಂದು ತೆರೆಕಾಣಲಿದೆ ಎಂಡು ಚಿತ್ರತಂಡ ಬಹಿರಂಗಪಡಿಸಿದೆ.
ಇದನ್ನೂ ಓದಿ: ಇಸ್ರೋ ಬೇಹುಗಾರಿಕೆ ಪ್ರಕರಣದಲ್ಲಿ ನಂಬಿ ನಾರಾಯಣನ್ ಬಂಧಿಸುವಂತೆ ಐಬಿಯಿಂದ ಒತ್ತಡವಿತ್ತು: ಮಾಜಿ ಡಿಜಿಪಿ
ಸಿನಿಮಾದ ಪ್ರಮುಖ ಪಾತ್ರದಲ್ಲಿ ಮಾಧವನ್ ಅವರೇ ಬಣ್ನ ಹಚ್ಚಿದ್ದು, ಸಿನಿಮಾದ ಸ್ಟಿಲ್ ಗಳು ಪ್ರೇಕ್ಷಕರಲ್ಲಿ ಕುತೂಹಲ ಹುಟ್ಟಿಸಿವೆ. ರಾಕೆಟ್ರಿ ಸಿನಿಮಾ ಇಸ್ರೊ ವಿಜ್ಞಾನಿ ನಂಬಿ ನಾರಾಯಣನ್ ಅವರ ಜೀವನವನ್ನು ಆಧರಿಸಿದೆ.
ಇಸ್ರೊ ವಿಜ್ಞಾನಿಯಾಗಿದ್ದ ನಂಬಿ ನಾರಾಯಣನ್ ಅವರ ಮೇಲೆ ಸುಳ್ಳು ಗೂಢಚರ್ಯೆ ಆರೋಪ ಹೊರಿಸಲಾಗಿತ್ತು. ಭಾರತದ ತಂತ್ರಜ್ಞಾನವನ್ನು ಅವರು ವಿದೇಶಿ ಶಕ್ತಿಗಳಿಗೆ ಮಾರಾಟ ಮಾಡಿದ್ದಾಗಿ ಅವರ ಮೇಲೆ ದೂರಲಾಗಿತ್ತು.
ಇದನ್ನೂ ಓದಿ: ನಂಬಿ ನಾರಾಯಣನ್ ಬಂಧನದಿಂದಾಗಿ ಭಾರತದಲ್ಲಿ ಕ್ರಯೋಜೆನಿಕ್ ತಂತ್ರಜ್ಞಾನ ಅಭಿವೃದ್ಧಿ ವಿಳಂಬ: ಕೇರಳ ಹೈಕೋರ್ಟ್ ಗೆ ಸಿಬಿಐ
ನ್ಯಾಯಾಲಯದಲ್ಲಿ ಈ ಪ್ರಕರಣದ ವಿಚಾರಣೆ ನಡೆದು ನಾರಾಯಣನ್ ಮೇಲಿನ ಆರೋಪ ಸುಳ್ಳು ಎಂದು ಸಾಬೀತಾಗಿ ಅವರು ಅರೋಪ ಮುಕ್ತರಾಗಿದ್ದರು. ಇದೀಗ ಅವರ ಮೇಲೆ ಸುಳ್ಳು ಆರೋಪ ಹೊರಿಸಿದ್ದಾರೆ ಎನ್ನಲಾದ ಆರೋಪಿ ಪೊಲೀಸ್ ಅಧಿಕಾರಿಗಳ ವಿರುದ್ಧ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ.
ಇದನ್ನೂ ಓದಿ: ಇಸ್ರೋ ಬೇಹುಗಾರಿಕೆ ಪ್ರಕರಣ: ನಂಬಿ ನಾರಾಯಣನ್ ಅಕ್ರಮ ಬಂಧನ ಕುರಿತು ಸುಪ್ರೀಂಗೆ ವರದಿ ಸಲ್ಲಿಕೆ