‘ಮಹಾಭಾರತ’ ಖ್ಯಾತಿಯ ಹಿರಿಯ ನಟ ರಸಿಕ್ ದವೆ ನಿಧನ

ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ‘ಮಹಾಭಾರತ’ ಖ್ಯಾತಿಯ ಹಿರಿ ನಟ ರಸಿಕ್ ದವೆ ಅವರು ನಿಧನರಾಗಿದ್ದಾರೆ ಎಂದು ಅವರ ಕುಟುಂಬದ ಸದಸ್ಯರು ಶನಿವಾರ ತಿಳಿಸಿದ್ದಾರೆ.
ರಸಿಕ್ ದವೆ
ರಸಿಕ್ ದವೆ
Updated on

ಮುಂಬೈ: ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ‘ಮಹಾಭಾರತ’ ಖ್ಯಾತಿಯ ಹಿರಿ ನಟ ರಸಿಕ್ ದವೆ ಅವರು ನಿಧನರಾಗಿದ್ದಾರೆ ಎಂದು ಅವರ ಕುಟುಂಬದ ಸದಸ್ಯರು ಶನಿವಾರ ತಿಳಿಸಿದ್ದಾರೆ.

65 ವರ್ಷದ ರಸಿಕ್ ದವೆ ಅವರು ಕಳೆದ ನಾಲ್ಕು ವರ್ಷಗಳಿಂದ ಮೂತ್ರಪಿಂಡ ಕಾಯಿಲೆಯಿಂದ ಬಳಲುತ್ತಿದ್ದರು. ದವೆ ಅವರು ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ಸಂಜೆ ಕೊನೆಯುಸಿರೆಳೆದರು ಎಂದು ಅವರ ಅತ್ತೆ ಹಾಗೂ ಹಿರಿಯ ನಟಿ ಸರಿತಾ ಜೋಶಿ ತಿಳಿಸಿದ್ದಾರೆ. ರಸಿಕ್ ದಂಪತಿಗೆ ಓರ್ವ ಮಗಳು, ಓರ್ವ ಮಗ ಇದ್ದಾರೆ.

ಸಾಕಷ್ಟು ಗುಜರಾತಿ ನಾಟಕ, ಸಿನಿಮಾ, ಹಿಂದಿ ಧಾರಾವಾಹಿಗಳಲ್ಲಿ ಕಾಣಿಸಿಕೊಂಡಿದ್ದ ರಸಿಕ್ ಅವರು ವಿಧಿವಶರಾಗಿರೋದನ್ನು ತಿಳಿದು ಅವರ ಆಪ್ತರು, ಚಿತ್ರರಂಗದವರು ಸಂತಾಪ ಸೂಚಿಸುತ್ತಿದ್ದಾರೆ.

ಬಿಆರ್ ಚೋಪ್ರಾ ಅವರ ಜನಪ್ರಿಯ ಮಹಾಭಾರತ ಧಾರಾವಾಹಿಯಲ್ಲಿ ನಂದ ಪಾತ್ರದಲ್ಲಿ ರಸಿಕ್ ಕಾಣಿಸಿಕೊಂಡಿದ್ದು, 1980ರ ಸಮಯದಲ್ಲಿ ಈ ಧಾರಾವಾಹಿ ಪ್ರಸಾರವಾಗುತ್ತಿತ್ತು. 2006ರಲ್ಲಿ ಪತ್ನಿ ಕೇತಕಿ ಜೊತೆಗೆ ರಸಿಕ್ ಅವರು 'ನಚ್ ಬಲಿಯೇ' ಶೋನಲ್ಲಿಯೂ ಭಾಗವಹಿಸಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com