ರಣವೀರ್ ಸಿಂಗ್ ಜೊತೆಗಿನ ದಾಂಪತ್ಯದಲ್ಲಿ ಬಿರುಕು; ವದಂತಿಗಳ ಬಗ್ಗೆ ಮೌನ ಮುರಿದ ನಟಿ ದೀಪಿಕಾ ಪಡುಕೋಣೆ

ಬಾಲಿವುಡ್‌ನ ತಾರಾ ಜೋಡಿ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ನಡುವೆ ಎಲ್ಲವೂ ಸರಿಯಿಲ್ಲ ಎನ್ನುವ ಮಾತುಗಳು ಕೆಲ ದಿನಗಳಿಂದ ಕೇಳಿಬರುತ್ತಿದ್ದವು. ರಣವೀರ್ ಮತ್ತು ದೀಪಿಕಾ ಅವರು ಸಾಮಾಜಿಕ ಮಾಧ್ಯಮಗಳಲ್ಲಿ ತಮ್ಮ ವಿಚ್ಛೇದನದ ಊಹಾಪೋಹಗಳನ್ನು ತಳ್ಳಿಹಾಕಿದ್ದರು.
ದೀಪಿಕಾ ಪಡುಕೋಣೆ
ದೀಪಿಕಾ ಪಡುಕೋಣೆ
Updated on

ಬಾಲಿವುಡ್‌ನ ತಾರಾ ಜೋಡಿ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ನಡುವೆ ಎಲ್ಲವೂ ಸರಿಯಿಲ್ಲ ಎನ್ನುವ ಮಾತುಗಳು ಕೆಲ ದಿನಗಳಿಂದ ಕೇಳಿಬರುತ್ತಿದ್ದವು. ರಣವೀರ್ ಮತ್ತು ದೀಪಿಕಾ ಅವರು ಸಾಮಾಜಿಕ ಮಾಧ್ಯಮಗಳಲ್ಲಿ ತಮ್ಮ ವಿಚ್ಛೇದನದ ಊಹಾಪೋಹಗಳನ್ನು ತಳ್ಳಿಹಾಕಿದ್ದರು. ಈ ಬಗ್ಗೆ ರಣವೀರ್ ಸಿಂಗ್ ಸ್ಪಷ್ಟನೆ ಕೊಟ್ಟಿದ್ದರು. ಆದರೆ, ದೀಪಿಕಾ ಪಡುಕೋಣೆ ಇದೀಗ ತಮ್ಮ ಮೌನ ಮುರಿದಿದ್ದು, ನಮ್ಮ ನಡುವೆ ಎಲ್ಲವೂ ಸರಿಯಿದೆ ಎಂದಿದ್ದಾರೆ.

ದೀಪಿಕಾ ಇತ್ತೀಚೆಗೆ ಹಾಲಿವುಡ್ ನಟಿ ಮೇಘನ್ ಮಾರ್ಕೆಲ್ ಅವರ ಪಾಡ್‌ಕ್ಯಾಸ್ಟ್‌ನಲ್ಲಿ ಕಾಣಿಸಿಕೊಂಡಿದ್ದರು. ಈ ವೇಳೆ ತಾನು ತನ್ನ ಪತಿಯೊಂದಿಗೆ ಸಂತಸದಿಂದಿರುವುದಾಗಿ ತಿಳಿಸಿದ್ದಾರೆ. ನನ್ನ ಪತಿ ಒಂದು ವಾರ ಸಂಗೀತ ಉತ್ಸವದಲ್ಲಿದ್ದರು ಮತ್ತು ಅವರು ಈಗ ಹಿಂತಿರುಗಿದ್ದಾರೆ. ಹಾಗಾಗಿ, ಅವರು ನನ್ನ ಮುಖವನ್ನು ನೋಡಲು ಸಂತೋಷಪಡುತ್ತಾರೆ' ಎಂದು ಮೇಘನಾ ಅವರಿಗೆ ತಿಳಿಸಿದ್ದಾರೆ.

ಇದಕ್ಕೂ ಮುನ್ನ ಪ್ರತಿಕ್ರಿಯಿಸಿದ್ದ ರಣವೀರ್ ಸಿಂಗ್, 'ದೀಪಿಕಾ ಜೊತೆಗೆ 2012ರಲ್ಲಿ ಡೇಟಿಂಗ್ ಆರಂಭಿಸಿ 6 ವರ್ಷಗಳ ನಂತರ 2018 ರಲ್ಲಿ ವಿವಾಹವಾದೆವು. ನನಗೆ ಆಕೆ ಬಗ್ಗೆ ಅತ್ಯಂತ ಗೌರವವನ್ನು ಹೊರತುಪಡಿಸಿ ಬೇರೇನೂ ಇಲ್ಲ. ನಾನು ಆಕೆಯನ್ನು ತುಂಬಾ ಇಷ್ಟಪಡುತ್ತೇನೆ. ಆಕೆಯಿಂದ ನನ್ನ ವೈಯಕ್ತಿಕ ನಾನು ಬಹಳಷ್ಟು ಕಲಿತಿದ್ದೇನೆ ಎಂದು ಹೇಳುವ ಮೂಲಕ ವದಂತಿಗಳಿಗೆ ತೆರೆ ಎಳೆದಿದ್ದರು.

ದೀಪಿಕಾ ಹಾಗೂ ರಣವೀರ್‌ 2018ರಲ್ಲಿ ಮದುವೆಯಾಗಿದ್ದರು. ಆದರೆ ಇತ್ತೀಚೆಗೆ ಅವರ ದಾಂಪತ್ಯದಲ್ಲಿ ಬಿರುಕು ಮೂಡಿದೆ ಎಂಬ ವದಂತಿಗಳು ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್‌ ಆಗಿದ್ದವು. ಉಮರ್‌ ಸಂಧು ಎಂಬ ಬಾಲಿವುಡ್‌ ಸಿನಿಮಾ ವಿಮರ್ಶಕರೊಬ್ಬರು ಈ ಬಗ್ಗೆ ಟ್ವೀಟ್‌ ಮಾಡಿದ್ದು ದೀಪಿಕಾ–ರಣವೀರ್‌ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿತ್ತು.

ಸದ್ಯ ರಣವೀರ್, ಕರಣ್ ಜೋಹರ್ ಅವರ 'ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ' ಮತ್ತು ರೋಹಿತ್ ಶೆಟ್ಟಿ ಅವರ 'ಸರ್ಕಸ್' ನಲ್ಲಿ ನಟಿಸುತ್ತಿದ್ದಾರೆ. ದೀಪಿಕಾ ಅವರು 'ಪಠಾನ್', 'ದಿ ಇಂಟರ್ನ್', 'ಪ್ರಾಜೆಕ್ಟ್ ಕೆ' ಮತ್ತು 'ಫೈಟರ್' ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com