ಬಾಯ್ ಫ್ರೆಂಡ್ ಅರ್ಜುನ್ ಕಪೂರ್ ಬರ್ತ್ ಡೇ ಗೆ ಮಲೈಕಾ ಆರೋರಾ ವಿಶ್ ಮಾಡಿದ್ದೇಗೆ?

ತನ್ನ ಗೆಳೆಯ ಅರ್ಜುನ್ ಕಪೂರ್ ಗೆ ನಟಿ ಮಲೈಕಾ ಅರೋರ ಅವರು ಭಾನುವಾರ ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದಾರೆ. ಸದ್ಯಕ್ಕೆ ಪ್ಯಾರಿಸ್‌ನಲ್ಲಿ ಗೆಳೆಯ ಅರ್ಜುನ್ ಕಪೂರ್ ಜೊತೆ ವಿಹಾರದಲ್ಲಿರುವ ನಟಿ ತನ್ನ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ ಹುಟ್ಟುಹಬ್ಬದ ಆಚರಣೆಯ...
ಅರ್ಜುನ್ ಕಪೂರ್
ಅರ್ಜುನ್ ಕಪೂರ್

ಪ್ಯಾರಿಸ್: ತನ್ನ ಗೆಳೆಯ ಅರ್ಜುನ್ ಕಪೂರ್ ಗೆ ನಟಿ ಮಲೈಕಾ ಅರೋರ ಅವರು ಭಾನುವಾರ ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದಾರೆ. ಸದ್ಯಕ್ಕೆ ಪ್ಯಾರಿಸ್‌ನಲ್ಲಿ ಗೆಳೆಯ ಅರ್ಜುನ್ ಕಪೂರ್ ಜೊತೆ ವಿಹಾರದಲ್ಲಿರುವ ನಟಿ ತನ್ನ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ ಹುಟ್ಟುಹಬ್ಬದ ಆಚರಣೆಯ ಫೋಟೋ ಹಾಕಿದ್ದಾರೆ. ” ನನ್ನ ಪ್ರೀತಿಗೆ ಶುಭಾಶಯಗಳು… ನಿಮ್ಮ ಎಲ್ಲಾ ಆಸೆಗಳು ಮತ್ತು ಕನಸುಗಳು ನನಸಾಗಲಿ.. ಜನ್ಮದಿನದ ಶುಭಾಶಯಗಳು” ಎಂದು ಫೋಟೋಗೆ ಶೀರ್ಷಿಕೆ ನೀಡಿದ್ದಾರೆ.

ಮಲೈಕಾ ಪೋಸ್ಟ್ ಅನ್ನು ಹಂಚಿಕೊಂಡ ಕೂಡಲೇ, ಅವರ ಉದ್ಯಮದ ಸ್ನೇಹಿತರು ಅರ್ಜುನ್ ಕಪೂರ್‌ಗೆ ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ.

ಮಲೈಕಾ ಅರೋರಾ ಮತ್ತು ಅರ್ಜುನ್ ಕಪೂರ್ 2016 ರಿಂದ ಡೇಟಿಂಗ್ ಮಾಡುತ್ತಿದ್ದರು. ಆದರೆ ಅವರು 2019 ರಲ್ಲಿ ತಮ್ಮ ಸಂಬಂಧವನ್ನು ಅಧಿಕೃತಗೊಳಿಸಿದರು. ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ಮಲೈಕಾ ಅವರು ಅರ್ಜುನ್ ಕಪೂರ್ ಅವರೊಂದಿಗೆ ಜೀವನ ಕಳೆಯಲು ಬಯಸುತ್ತೇನೆ ಎಂದು ಬಹಿರಂಗಪಡಿಸಿದರು. ಅವರಿಬ್ಬರೂ ತಮ್ಮ ಸಂಬಂಧದಲ್ಲಿ ಮುಂದಿನದರ ಬಗ್ಗೆ ಯೋಚಿಸುತ್ತಿರುವುದಾಗಿ ಹೇಳಿದರು. ಪ್ರತಿಯೊಂದು ಸಂಬಂಧವು ಅದರ ಪ್ರಕ್ರಿಯೆ, ಯೋಜನೆಗಳನ್ನು ಹೊಂದಿದೆ. ನಾವು ಒಟ್ಟಿಗೆ ಭವಿಷ್ಯವನ್ನು ಬಯಸುತ್ತೇವೆ ಎಂದು ಹೇಳಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com