'ದಿಲ್ ಔರ್ ಸಿಟಿಜನ್'ಶಿಪ್ ದೋನೋ ಹಿಂದೂಸ್ತಾನಿ': ಬಾಲಿವುಡ್ ನಟ ಅಕ್ಷಯ್​ ಕುಮಾರ್ ಗೆ ಭಾರತೀಯ ಪೌರತ್ವ!

ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರು ಭಾರತೀಯ ಪೌರತ್ವ ಪಡೆದಿದ್ದು, ಈ ಮೂಲಕ ಅಧಿಕೃತವಾಗಿ ಭಾರತೀಯ ಪ್ರಜೆಯಾಗಿದ್ದಾರೆ.
ನಟ ಅಕ್ಷಯ್ ಕುಮಾರ್
ನಟ ಅಕ್ಷಯ್ ಕುಮಾರ್
Updated on

ನವದೆಹಲಿ: ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರು ಭಾರತೀಯ ಪೌರತ್ವ ಪಡೆದಿದ್ದು, ಈ ಮೂಲಕ ಅಧಿಕೃತವಾಗಿ ಭಾರತೀಯ ಪ್ರಜೆಯಾಗಿದ್ದಾರೆ.

ಆಗಸ್ಟ್ 15 ಸ್ವಾತಂತ್ರ್ಯ ದಿನಾಚರಣೆಯಂದು ಭಾರತೀಯ ಪೌರತ್ವ ಸಿಕ್ಕಿರುವ ಬಗ್ಗೆ ನಟ ಅಕ್ಷಯ್ ಕುಮಾರ್ ಅವರು ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ಮನಸ್ಸು ಮತ್ತು ಪೌರತ್ವ ಎರಡೂ ಹಿಂದೂಸ್ತಾನಿ, ಸ್ವಾತಂತ್ರ್ಯ ದಿನದ ಶುಭಾಶಯಗಳು, ಜೈ ಹಿಂದ್​ ಎಂದು ಬರೆದುಕೊಂಡಿದ್ದಾರೆ.

ಕೆಲ ವರ್ಷಗಳ ಹಿಂದೆ ವೈಯಕ್ತಿಕ ಪರಿಸ್ಥಿತಿ ನಟನನ್ನು ಕೆನಡಾ ಪೌರತ್ವ ಆಯ್ದುಕೊಳ್ಳುವಂತೆ ಪ್ರೇರೇಪಿಸಿತು. ಕೆನಡಾ ಪೌರತ್ವ ಹೊಂದಿದ್ದ ವಿಷಯ ನಟನನ್ನು ಟೀಕೆಗೊಳಗಾಗುವಂತೆ ಮಾಡಿತ್ತು. ಇದೀಗ ಅಂತಿಮವಾಗಿ ನಟ ಭಾರತೀಯ ಪ್ರಜೆಯಾಗಿದ್ದಾರೆ.

ಅಕ್ಷಯ್​ ಕುಮಾರ್​ ಭಾರತೀಯ ಸಿನಿಮಾ ರಂಗದ ಅತ್ಯಂತ ಪ್ರಸಿದ್ಧ ನಟರಲ್ಲಿ ಓರ್ವರು. ಹಲವು ವರ್ಷಗಳಿಂದ ಬಾಲಿವುಡ್​ನಲ್ಲಿ ಗುರುತಿಸಿಕೊಂಡಿರುವ ಕಿಲಾಡಿ ನಟ ದೇಶಭಕ್ತಿ ಮತ್ತು ಭಾರತೀಯ ಸೇನೆಯನ್ನು ಬೆಂಬಲಿಸುವ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ನಟನನ್ನು ಗುಣಗಾನ ಮಾಡಲು ಹಲವು ಕಾರಣಗಳಿದ್ದರೆ, ಟ್ರೋಲ್​ ಮಾಡಲು ಪೌರತ್ವದ ವಿಷಯವಿತ್ತು. ಹೌದು, ಟ್ರೋಲರ್​ಗಳು ಅಕ್ಷಯ್ ಕುಮಾರ್ ಅವರನ್ನು ಕೆನಡಿಯನ್​​ ಕುಮಾರ್​ ಎಂದೇ ಗುರುತಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com