ವಿಶ್ವಾದ್ಯಂತ ಅನಿಮಲ್ ಚಿತ್ರದ ಬಾಕ್ಸಾಫೀಸ್ ಗಳಿಕೆ 500 ಕೋಟಿ ರೂ.

ಬಾಲಿವುಡ್ ನಟ ರಣಬೀರ್ ಕಪೂರ್ ಅಭಿನಯದ 'ಅನಿಮಲ್' ಚಿತ್ರದ ಬಾಕ್ಸಾಫೀಸ್ ಗಳಿಕೆ ಮುಂದುವರೆದಿದ್ದು, 5 ದಿನಕ್ಕೆ ಚಿತ್ರ ವಿಶ್ವದಾದ್ಯಂತ 500 ಕೋಟಿ ರೂ ಅತ್ತ ದಾಪುಗಾರಿಸಿದೆ.
ಅನಿಮಲ್ ಚಿತ್ರ
ಅನಿಮಲ್ ಚಿತ್ರ

ಮುಂಬೈ: ಬಾಲಿವುಡ್ ನಟ ರಣಬೀರ್ ಕಪೂರ್ ಅಭಿನಯದ 'ಅನಿಮಲ್' ಚಿತ್ರದ ಬಾಕ್ಸಾಫೀಸ್ ಗಳಿಕೆ ಮುಂದುವರೆದಿದ್ದು, 5 ದಿನಕ್ಕೆ ಚಿತ್ರ ವಿಶ್ವದಾದ್ಯಂತ 500 ಕೋಟಿ ರೂ ಅತ್ತ ದಾಪುಗಾರಿಸಿದೆ.

ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ರಣಬೀರ್ ಕಪೂರ್ ಅವರ ಇತ್ತೀಚೆಗೆ ಬಿಡುಗಡೆಯಾದ ಚಿತ್ರ ಅನಿಮಲ್ ಬಿಡುಗಡೆಯಾದ ಕೇವಲ ಐದು ದಿನಗಳಲ್ಲಿ ವಿಶ್ವದಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ 481 ಕೋಟಿ ರೂ. ಗಳಿಕೆ ಕಂಡಿದ್ದು, ಈ ಚಿತ್ರ ಬಿಡುಗಡೆಯಾದ ಮೊದಲ ದಿನವೇ ಚಿತ್ರ 116 ಕೋಟಿ ಕಲೆಕ್ಷನ್ ಮಾಡಿದೆ.

ಅನಿಮಲ್ ಸೋಮವಾರದ ಕಲೆಕ್ಷನ್ - 40.06 ಕೋಟಿ ರೂ ಆಗಿದ್ದು, ಶಾರುಖ್ ಖಾನ್ ಅವರ ಜವಾನ್ (ರೂ. 32.92 ಕೋಟಿ), ಪಠಾಣ್ (ರೂ. 26.50 ಕೋಟಿ) ಮತ್ತು ಸನ್ನಿ ಡಿಯೋಲ್ ಅವರ ಗದರ್ 2 (ರೂ. 38.70 ಕೋಟಿ) ಗಿಂತ ಹೆಚ್ಚು ಎನ್ನಲಾಗಿದೆ.

ಅನಿಮಲ್ ಚಿತ್ರದಲ್ಲಿ ರಣಬೀರ್ ಅಲ್ಲದೆ, ಚಿತ್ರದಲ್ಲಿ ಅನಿಲ್ ಕಪೂರ್, ಬಾಬಿ ಡಿಯೋಲ್, ರಶ್ಮಿಕಾ ಮಂದಣ್ಣ ಮತ್ತು ಟ್ರಿಪ್ಟಿ ಡಿಮ್ರಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಅನಿಮಲ್ ಚಿತ್ರದ ಬಗ್ಗೆ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆಯ ಹೊರತಾಗಿಯೂ ಚಿತ್ರದ ಬಾಕ್ಸಾಫೀಸ್ ಗಳಿಕೆ ಯಥಾ ಪ್ರಕಾರ ಮುಂದುವರೆದಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com