ಭಾರತ ತೊರೆದು ಲಂಡನ್‌ನಲ್ಲಿ ನೆಲೆಸಲು ವಿರಾಟ್ ಕೊಹ್ಲಿ- ಅನುಷ್ಕಾ ಶರ್ಮಾ ಚಿಂತನೆ; ನಟಿ ಮಾಧುರಿ ದೀಕ್ಷಿತ್ ಪತಿ ಹೇಳಿದ್ದೇನು?

2024ರ ಫೆಬ್ರುವರಿಯಲ್ಲಿ ತಮ್ಮ ಎರಡನೇ ಮಗು ಅಕಾಯ್ ಜನಿಸಿದಾಗಿನಿಂದ, ಈ ಸೆಲೆಬ್ರಿಟಿ ದಂಪತಿ ಆಗಾಗ್ಗೆ ಲಂಡನ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ವಿರಾಟ್ ಕೊಹ್ಲಿ - ಅನುಷ್ಕಾ ಶರ್ಮಾ
ವಿರಾಟ್ ಕೊಹ್ಲಿ - ಅನುಷ್ಕಾ ಶರ್ಮಾ
Updated on

ಟೀಂ ಇಂಡಿಯಾ ಆಟಗಾರ ವಿರಾಟ್ ಕೊಹ್ಲಿ ಐಪಿಎಲ್ 2025ನೇ ಆವೃತ್ತಿಯಲ್ಲಿ ಉತ್ತಮ ಫಾರ್ಮ್‌ನಲ್ಲಿದ್ದು, ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಪರ ಭರ್ಜರಿ ಪ್ರದರ್ಶನ ನೀಡುತ್ತಿದ್ದಾರೆ. 33 ವರ್ಷದ ಕೊಹ್ಲಿ ಈಗಾಗಲೇ ಈ ಆವೃತ್ತಿಯಲ್ಲಿ 400 ರನ್‌ಗಳ ಗಡಿಯನ್ನು ತಲುಪಿದ್ದಾರೆ ಮತ್ತು ಆರೆಂಜ್ ಕ್ಯಾಪ್ ರೇಸ್‌ನಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಇದರ ಹೊರತಾಗಿ ಕೊಹ್ಲಿ ಮತ್ತೊಂದು ವಿಚಾರಕ್ಕೆ ಸುದ್ದಿಯಾಗಿದ್ದಾರೆ. ಕೊಹ್ಲಿ ಮತ್ತು ಮತ್ತು ಅನುಷ್ಕಾ ಶರ್ಮಾ ಲಂಡನ್‌ಗೆ ಸ್ಥಳಾಂತರಗೊಳ್ಳಲಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ.

2024ರ ಫೆಬ್ರುವರಿಯಲ್ಲಿ ತಮ್ಮ ಎರಡನೇ ಮಗು ಅಕಾಯ್ ಜನಿಸಿದಾಗಿನಿಂದ, ಈ ಸೆಲೆಬ್ರಿಟಿ ದಂಪತಿ ಆಗಾಗ್ಗೆ ಲಂಡನ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ವಿರಾಟ್ ಕೊಹ್ಲಿ ಅವರ ಬಾಲ್ಯದ ತರಬೇತುದಾರ ರಾಜ್‌ಕುಮಾರ್ ಶರ್ಮಾ ಇತ್ತೀಚೆಗೆ ಟೀಂ ಇಂಡಿಯಾದ ಮಾಜಿ ನಾಯಕ ಲಂಡನ್‌ಗೆ ತೆರಳಲು ಯೋಜಿಸುತ್ತಿದ್ದಾರೆ ಎಂದು ದೃಢಪಡಿಸಿದ್ದಾರೆ.

ಬಾಲಿವುಡ್ ನಟಿ ಮಾಧುರಿ ದೀಕ್ಷಿತ್ ಅವರ ಪತಿ ಡಾ. ಶ್ರೀರಾಮ್ ನೇನೆ, ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಅವರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ಲಂಡನ್‌ಗೆ ತೆರಳಿ ಮಕ್ಕಳನ್ನು ಸಾಮಾನ್ಯವಾಗಿ ಬೆಳೆಸುವ ಬಯಕೆಯ ಬಗ್ಗೆ ಅನುಷ್ಕಾ ತಮ್ಮೊಂದಿಗೆ ಮಾತನಾಡಿದ್ದನ್ನು ಬಹಿರಂಗಪಡಿಸಿದ್ದಾರೆ.

'ನನಗೆ ಅವರ (ವಿರಾಟ್ ಕೊಹ್ಲಿ) ಬಗ್ಗೆ ತುಂಬಾ ಗೌರವವಿದೆ. ನಾವು ಅವರನ್ನು ಹಲವು ಬಾರಿ ಭೇಟಿಯಾಗಿದ್ದೇವೆ; ಅವರು ಸಾಮಾನ್ಯರಂತೆ ಇದ್ದಾರೆ. ನಾವು ಒಂದು ದಿನ ಅನುಷ್ಕಾ ಅವರೊಂದಿಗೆ ಸಂಭಾಷಣೆ ನಡೆಸಿದ್ದೇವೆ ಮತ್ತು ಅದು ತುಂಬಾ ಆಸಕ್ತಿದಾಯಕವಾಗಿತ್ತು' ಎಂದು ಆರೋಗ್ಯ ಮತ್ತು ಕ್ಷೇಮ ಯೂಟ್ಯೂಬ್ ಚಾನೆಲ್ ನಡೆಸುತ್ತಿರುವ ಡಾ. ನೀನೆ, ರಣವೀರ್ ಅಲ್ಬಾಬಾದಿಯಾ ಅವರೊಂದಿಗಿನ ಸಂಭಾಷಣೆಯಲ್ಲಿ ಹೇಳಿದ್ದಾರೆ.

ವಿರಾಟ್ ಕೊಹ್ಲಿ - ಅನುಷ್ಕಾ ಶರ್ಮಾ
IPL 2025, RCB vs RR: 'ಚಿನ್ನಸ್ವಾಮಿಯ ಕಿಂಗ್!' ತವರಿನಲ್ಲಿ ಮತ್ತೊಂದು ದಾಖಲೆ ಬರೆದ ವಿರಾಟ್ ಕೊಹ್ಲಿ!

'ಅವರು ಲಂಡನ್‌ಗೆ ತೆರಳುವ ಬಗ್ಗೆ ಯೋಚಿಸುತ್ತಿದ್ದರು. ಏಕೆಂದರೆ, ಅವರು ಇಲ್ಲಿ ತಮ್ಮ ಯಶಸ್ಸನ್ನು ಆನಂದಿಸಲು ಸಾಧ್ಯಾಗುತ್ತಿಲ್ಲ. ಅವರು ಮಾಡುವ ಯಾವುದೇ ಕೆಲಸವು ಇಲ್ಲಿ ಇತರರ ಗಮನ ಸೆಳೆಯುತ್ತದೆ. ಹೀಗಾಗಿಯೇ, ಅನುಷ್ಕಾ ಮತ್ತು ವಿರಾಟ್ ತುಂಬಾ ಒಳ್ಳೆಯವರು ಮತ್ತು ಅವರು ತಮ್ಮ ಮಕ್ಕಳನ್ನು ಸಾಮಾನ್ಯವಾಗಿ ಬೆಳೆಸಲು ಬಯಸುತ್ತಾರೆ' ಎಂದಿದ್ದಾರೆ.

ವಿರಾಟ್ ಕೊಹ್ಲಿ ಅವರ ಬಾಲ್ಯದ ಕೋಚ್ ಹೇಳಿದ್ದೇನು?

ಇದಕ್ಕೂ ಮೊದಲು, ದೈನಿಕ್ ಜಾಗರಣ್ ಜೊತೆ ಮಾತನಾಡುವಾಗ ಕೊಹ್ಲಿ ಅವರ ಬಾಲ್ಯದ ಕೋಚ್ ರಾಜ್‌ಕುಮಾರ್ ಶರ್ಮಾ, 'ಹೌದು, ವಿರಾಟ್ ತಮ್ಮ ಮಕ್ಕಳು ಮತ್ತು ಪತ್ನಿ ಅನುಷ್ಕಾ ಶರ್ಮಾ ಅವರೊಂದಿಗೆ ಲಂಡನ್‌ಗೆ ತೆರಳಲು ಯೋಜಿಸಿದ್ದಾರೆ. ಅವರು ಶೀಘ್ರದಲ್ಲೇ ಭಾರತವನ್ನು ತೊರೆದು ಸ್ಥಳಾಂತರಗೊಳ್ಳಲಿದ್ದಾರೆ. ಆದಾಗ್ಯೂ, ಇದೀಗ, ಕೊಹ್ಲಿ ಕ್ರಿಕೆಟ್ ಹೊರತುಪಡಿಸಿ ತಮ್ಮ ಹೆಚ್ಚಿನ ಸಮಯವನ್ನು ತಮ್ಮ ಕುಟುಂಬದೊಂದಿಗೆ ಕಳೆಯುತ್ತಿದ್ದಾರೆ' ಎಂದು ಅವರು ಹೇಳಿದ್ದರು.

ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ 2017ರಲ್ಲಿ ಇಟಲಿಯಲ್ಲಿ ವಿವಾಹವಾದರು. ದಂಪತಿಗೆ ಮೊದಲ ಮಗಳು ವಮಿಕಾ 2021ರ ಜನವರಿಯಲ್ಲಿ ಜನಿಸಿದಳು. ನಂತರ 2024ರ ಫೆಬ್ರವರಿಯಲ್ಲಿ ಎರಡನೇ ಮಗು ಮಗ ಅಕಾಯ್‌ನನ್ನು ಸ್ವಾಗತಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com