

ಲಂಡನ್: ಪಲ್ಪ್ ಫಿಕ್ಷನ್ ಮತ್ತು ದಿ ಮಾಸ್ಕ್ ನಂತಹ ಚಲನಚಿತ್ರಗಳಲ್ಲಿ ಖಳನಾಯಕ ಪಾತ್ರಗಳಿಗೆ ಹೆಸರುವಾಸಿಯಾದ ಹಾಲಿವುಡ್ ಖ್ಯಾತ ನಟ ಪೀಟರ್ ಗ್ರೀನ್ ನಿಧನರಾಗಿದ್ದಾರೆ.
60 ವರ್ಷದ ಪೀಟರ್ ಗ್ರೀನ್ ಡಿಸೆಂಬರ್ 12 ರಂದು ನ್ಯೂಯಾರ್ಕ್ ನಗರದ ತಮ್ಮ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ ಎಂದು ಅವರ ಮ್ಯಾನೇಜರ್ ಗ್ರೆಗ್ ಎಡ್ವರ್ಡ್ಸ್ NBC ನ್ಯೂಸ್‌ಗೆ ನೀಡಿದ ಹೇಳಿಕೆಯಲ್ಲಿ ದೃಢಪಡಿಸಿದರು.
ಪೀಟರ್ ಗ್ರೀನ್ ಅವರ ಸಾವಿಗೆ ಕಾರಣವನ್ನು ಬಹಿರಂಗಪಡಿಸಲಾಗಿಲ್ಲವಾದರೂ, ಗ್ರೀನ್ ಅವರ ಫ್ಲಾಟ್‌ನಿಂದ 24 ಗಂಟೆಗಳಿಗೂ ಹೆಚ್ಚು ಕಾಲ ಸಂಗೀತ ನುಡಿಸುತ್ತಿದ್ದ ನಂತರ ನಡೆಸಲಾದ ಕ್ಷೇಮ ತಪಾಸಣೆಯ ಸಮಯದಲ್ಲಿ ನಟ ಗ್ರೀನ್ ತಮ್ಮ ಲೋವರ್ ಈಸ್ಟ್ ಸೈಡ್ ಅಪಾರ್ಟ್‌ಮೆಂಟ್‌ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ ಎಂದು ಎಡ್ವರ್ಡ್ಸ್ ಬಹಿರಂಗಪಡಿಸಿದರು.
ಆ ವಾರದ ಆರಂಭದಲ್ಲಿ ಅವರು ಗ್ರೀನ್ ನೊಂದಿಗೆ ಮಾತನಾಡಿದ್ದರು ಎಂದು ಎಡ್ವರ್ಡ್ಸ್ ಬಹಿರಂಗಪಡಿಸಿದ್ದಾರೆ.
ಪೀಟರ್ ಗ್ರೀನ್ ಅವರ ವೃತ್ತಿಜೀವನ
ಗ್ರೀನ್ ಮೊದಲು 1990 ರಲ್ಲಿ NBC ಯ ಅಪರಾಧ ನಾಟಕ ಹಾರ್ಡ್‌ಬಾಲ್‌ನ ಕಂತಿನಲ್ಲಿ ಕಾಣಿಸಿಕೊಂಡಿದ್ದರು. ಎರಡು ವರ್ಷಗಳ ನಂತರ ಅವರು ದಿ ಲಾಸ್ ಆಫ್ ಗ್ರಾವಿಟಿಯಲ್ಲಿ ಎಡಿ ಫಾಲ್ಕೊ ಎದುರು ನಟಿಸುವ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು.
ಬಳಿಕ ಅವರು ದಿ ಮಾಸ್ಕ್ (1994) ಚಿತ್ರದಲ್ಲಿ ಖಳನಾಯಕ ಡೋರಿಯನ್ ಟೈರೆಲ್ ಪಾತ್ರದೊಂದಿಗೆ ಅವರು ಹಾಲಿವುಡ್‌ನಲ್ಲಿ ಮೊದಲ ಬ್ರೇಕ್ ಪಡೆದಿದ್ದರು. ಇದರಲ್ಲಿ ಅವರು ಕ್ಯಾಮರೂನ್ ಡಯಾಜ್ ಮತ್ತು ಜಿಮ್ ಕ್ಯಾರಿ ಅವರೊಂದಿಗೆ ನಟಿಸಿದರು. 1990 ರ ದಶಕದ ಆರಂಭದಲ್ಲಿ ಅವರು ಜಾನ್ ಟ್ರಾವೋಲ್ಟಾ-ನಟಿಸಿದ ಪಲ್ಪ್ ಫಿಕ್ಷನ್ (1994) ಮತ್ತು ಲಾಡ್ಜ್ ಕೆರಿಗನ್ ಅವರ ಕ್ಲೀನ್, ಶೇವನ್ (1993) ಸೇರಿದಂತೆ ಹಲವಾರು ಇತರ ಹಿಟ್ ಚಿತ್ರಗಳಲ್ಲಿ ಕಾಣಿಸಿಕೊಂಡರು.
Advertisement