
ಮುಂಬೈ: ಮೂರನೇ ಮದುವೆಯಾಗುವ ಮಹದಾಸೆಯಿಂದ ಪಾಕಿಸ್ತಾನಕ್ಕೆ ಹಾರಿದ್ದ ಬಾಲಿವುಡ್ ನಟಿ ರಾಖಿ ಸಾವಂತ್ ಗೆ ಮತ್ತೆ 'ಹಾರ್ಟ್ ಬ್ರೇಕ್' ಆಗಿದ್ದು, ರಾಖಿ ಮದುವೆಯಾಗಬೇಕು ಎಂದಿದ್ದ ಪಾಕ್ ನಟ ದೋಡಿ ಖಾನ್ ಮದುವೆಯಾಗಲ್ಲ ಎಂದು ಹೇಳಿದ್ದಾನೆ.
ಬಾಲಿವುಡ್ ನಟಿ ರಾಖಿ ಸಾವಂತ್ ಈಗಾಗಲೇ ಎರಡು ಮದುವೆ ಮಾಡಿಕೊಂಡು, ಇಬ್ಬರಿಗೂ ವಿಚ್ಛೇದನ ನೀಡಿ ಮೂರನೇ ಮದುವೆಗೆ ಸಜ್ಜಾಗಿದ್ದರು. ಪಾಕಿಸ್ತಾನ ಮೂಲದ ನಟ ದೋಡಿ ಖಾನ್ ಮದುವೆಯಾಗುವುದಾಗಿ ಹೇಳಿ ಪಾಕಿಸ್ತಾನಕ್ಕೂ ಹಾರಿದ್ದರು. ಪಾಕಿಸ್ತಾನದ ವಿಮಾನ ನಿಲ್ದಾಣದಲ್ಲಿ ಲಗೇಜ್ ಸಮೇತ್ ವಿಡಿಯೋ ಮಾಡಿದ್ದ ರಾಖಿ ತನ್ನನ್ನು ರಿಸೀವ್ ಮಾಡಿಕೊಳ್ಳಲು ಯಾರೂ ಬಂದಿಲ್ಲ ಎಂದು ವಿಡಿಯೋ ಮಾಡಿದ್ದರು. ಆದರೆ ಈ ವಿಡಿಯೋ ವೈರಲ್ ಆಗುವ ಹೊತ್ತಿಗೆ ರಾಖಿ ಸಾವಂತ್ ರ ಮದುವೆ ಮುರಿದುಬಿದ್ದ ಸುದ್ದಿ ವೈರಲ್ ಆಗುತ್ತಿದೆ.
ರಾಖಿ ಜೊತೆ ಮದುವೆ ಆಗುತ್ತೇನೆ ಎಂದು ಹೇಳಿ ಪ್ರೇಮ ನಿವೇದನೆ ಮಾಡಿದ್ದ ಪಾಕಿಸ್ತಾನಿ ನಟ ದೋಡಿ ಖಾನ್ ಈಗ ಯೂಟರ್ನ್ ಹೊಡೆದಿದ್ದಾನೆ. ಈ ಕುರಿತು ಸ್ವತಃ ದೋಡಿ ಖಾನ್ ತನ್ನ ಟ್ವಿಟರ್ ಖಾತೆಯಲ್ಲಿ ವಿಡಿಯೋ ಹರಿ ಬಿಟ್ಟಿದ್ದು, ರಾಖಿ ಮದುವೆ ಪ್ರಪೋಸಲ್ ರಿಜೆಕ್ಟ್ ಮಾಡಿ, ಫ್ರೆಂಡ್‌ಜೋನ್ (ನಾವಿಬ್ಬರೂ ಸ್ನೇಹಿತರಾಗಿರೋಣ) ಎಂದು ಪೋಸ್ಟ್ ಶೇರ್ ಮಾಡಿದ್ದಾನೆ.
'ಬಾಲಿವುಡ್ ನಟಿ ರಾಖಿ ಜೊತೆ ನಾನು ಮದುವೆ ಆಗಲ್ಲ. ರಾಖಿ ಸಾವಂತ್ ತಮ್ಮ ಒಳ್ಳೆ ಗೆಳತಿ. ನಾನು ರಾಖಿ ಮದುವೆ ಮಾಡಿಕೊಳ್ಳುವುದು ಜನರಿಗೆ ಇದು ಸರಿ ಅನ್ಸಿಲ್ಲ. ನನಗೆ ಬಂದಿರೋ ಮೆಸೇಜ್, ವಿಡಿಯೋ ನೋಡಿ ನಾನು ತಡ್ಕೊಳ್ಳೋಕೆ ಆಗ್ತಿಲ್ಲ. ರಾಖಿ ನೀವು ನನ್ನ ಒಳ್ಳೆ ಫ್ರೆಂಡ್, ಯಾವಾಗ್ಲೂ ಹಾಗೆ ಇರ್ತೀರಿ. ನೀವು ಡೋಡಿ ಖಾನ್ ಹೆಂಡತಿ ಆಗೋಕೆ ಆಗಿಲ್ಲ, ಆದರೆ ಪಾಕಿಸ್ತಾನದ ಸೊಸೆ ಮಾತ್ರ ಆಗ್ತೀರಿ. ನಾನೇ ನಿಮ್ಮ ಮದುವೆ ಮಾಡ್ತೀನಿ, ಪಾಕಿಸ್ತಾನದಲ್ಲಿ ನನ್ನ ಯಾವುದಾದ್ರೂ ಗೆಳೆಯನ ಜೊತೆ ಮದುವೆ ಮಾಡ್ತೀನಿ' ಅಂತ ಹೇಳಿದ್ದಾರೆ.
Advertisement