

ಮುಂಬೈ: ಬಾಲಿವುಡ್ ಖ್ಯಾತ ಹಿರಿಯ ನಟ ಧರ್ಮೇಂದ್ರ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.
ಮೂಲಗಳ ಪ್ರಕಾರ 89 ವರ್ಷದ ನಟ ಧರ್ಮೇಂದ್ರ ಅವರನ್ನು ಮುಂಬೈನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಕುಟುಂಬದ ಮೂಲಗಳು ಶನಿವಾರ ತಿಳಿಸಿವೆ. ಈ ವಾರದ ಆರಂಭದಲ್ಲಿ ದಕ್ಷಿಣ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಒಂದೇ ವಾರದ ಅಂತರದಲ್ಲಿ ಮತ್ತೆ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಹೇಳಲಾಗಿದೆ.
ಈ ಹಿಂದಿನ ವೈದ್ಯಕೀಯ ಪರೀಕ್ಷಾ ವರದಿಗಳು ತಡವಾದ್ದರಿಂದ ಎಲ್ಲಾ ದಿನನಿತ್ಯದ ತಪಾಸಣೆಗಳು ಸರಿಯಾಗಿ ನಡೆಯುವವರೆಗೆ ಅವರು ಅಲ್ಲಿಯೇ ಇರುವುದು ಉತ್ತಮ ಎಂದು ಕುಟುಂಬ ನಿರ್ಧರಿಸಿದೆ. ಅವರಿಗೆ ವಯಸ್ಸಾಗಿದ್ದು, ವೈದ್ಯರಿಂದ ಸರಿಯಾದ ಗಮನದ ಅಗತ್ಯವಿದೆ. ಚಿಂತಿಸಲು ಏನೂ ಇಲ್ಲ" ಎಂದು ಕೌಟುಂಬಿಕ ಮೂಲಗಳು ತಿಳಿಸಿವೆ.
ಈ ವರ್ಷದ ಏಪ್ರಿಲ್‌ನಲ್ಲಿ, ಧರ್ಮೇಂದ್ರ ಕಣ್ಣಿನ ಕಸಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಆ ಸಮಯದಲ್ಲಿ, ಮುಂಬೈ ಆಸ್ಪತ್ರೆಯಿಂದ ಹೊರಬರುವಾಗ ಅವರ ಬಲಗಣ್ಣಿನ ಮೇಲೆ ಬ್ಯಾಂಡೇಜ್‌ನೊಂದಿಗೆ ಕಾಣಿಸಿಕೊಂಡಿದ್ದರು. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಧರ್ಮೇಂದ್ರ ನಾನು ಈಗಲೂ ಬಲಿಷ್ಠವಾಗಿದ್ದೇನೆ ಎಂದು ಹೇಳಿದ್ದರು.
"ನಾನು ಇನ್ನೂ ತುಂಬಾ ಬಲಶಾಲಿ ಮತ್ತು ಜೀವ ತುಂಬಿದ್ದೇನೆ. ನಾನು ಕಣ್ಣಿನ ಕಸಿ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದೇನೆ. ಲವ್ ಯೂ ಪ್ರೇಕ್ಷಕರೇ. ನಾನು ಸ್ಟ್ರಾಂಗ್" ಎಂದು ಧರ್ಮೇಂದ್ರ ಹೇಳಿದ್ದರು.
Advertisement