ಮಾಜಿ ಪತ್ನಿಯರು, Girlfriend ಗೌರಿ ಜೊತೆ ಒಂದೇ ಕಾರಿನಲ್ಲಿ ತೆರಳಿದ Aamir Khan: Video Viral

ಕಾರ್ಯಕ್ರಮ ಮುಗಿದ ಬಳಿಕ ಆಮೀರ್ ಖಾನ್, ರೀನಾ ದತ್ತಾ, ಕಿರಣ್ ರಾವ್ ಹಾಗೂ ಗೌರಿ ಸ್ಪ್ರಾಟ್ ಒಂದೇ ಕಾರಿನಲ್ಲಿ ಸ್ಥಳದಿಂದ ತೆರಳಿದ್ದಾರೆ. ಈ ಕುರಿತ ವಿಡಿಯೊ ವೈರಲ್ ಆಗಿದ್ದು, ನೆಟ್ಟಿಗರು ಆಮೀರ್ ಅವರ ಕುಟುಂಬದ ಬಾಂಧವ್ಯ ಮತ್ತು ಪರಸ್ಪರ ಗೌರವವನ್ನು ಮೆಚ್ಚಿಕೊಂಡಿದ್ದಾರೆ.
File photo
ಸಂಗ್ರಹ ಚಿತ್ರ
Updated on

ಬಾಲಿವುಡ್ ನಟ ಆಮೀರ್ ಖಾನ್ ಅಭಿನಯದ ಐತಿಹಾಸಿಕ ಸಿನಿಮಾ ಲಗಾನ್ ಬಿಡುಗಡೆಯಾಗಿ 25 ವರ್ಷ ಪೂರೈಸಿದ ಸಂಭ್ರಮಾಚರಣೆಯಲ್ಲಿ ವಿಶೇಷ ಕ್ಷಣವೊಂದು ಎಲ್ಲರ ಗಮನ ಸೆಳೆದಿದೆ.

ಈ ಕಾರ್ಯಕ್ರಮದಲ್ಲಿ ಆಮೀರ್ ಖಾನ್ ತಮ್ಮ ಮಾಜಿ ಪತ್ನಿಯರಾದ ರೀನಾ ದತ್ತಾ ಮತ್ತು ಕಿರಣ್ ರಾವ್ ಜೊತೆಗೆ ಪ್ರಸ್ತುತ ಗೆಳತಿ ಗೌರಿ ಸ್ಪ್ರಾಟ್ ಅವರೊಂದಿಗೆ ಕಾಣಿಸಿಕೊಂಡಿದ್ದು, ಇದೀಗ ಈ ಕುರಿತ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಕಾರ್ಯಕ್ರಮ ಮುಗಿದ ಬಳಿಕ ಆಮೀರ್ ಖಾನ್, ರೀನಾ ದತ್ತಾ, ಕಿರಣ್ ರಾವ್ ಹಾಗೂ ಗೌರಿ ಸ್ಪ್ರಾಟ್ ಒಂದೇ ಕಾರಿನಲ್ಲಿ ಸ್ಥಳದಿಂದ ತೆರಳಿದ್ದಾರೆ. ಈ ಕುರಿತ ವಿಡಿಯೊ ವೈರಲ್ ಆಗಿದ್ದು, ನೆಟ್ಟಿಗರು ಆಮೀರ್ ಅವರ ಕುಟುಂಬದ ಬಾಂಧವ್ಯ ಮತ್ತು ಪರಸ್ಪರ ಗೌರವವನ್ನು ಮೆಚ್ಚಿಕೊಂಡಿದ್ದಾರೆ.

ನೆಟ್ಟಿಗನೊಬ್ಬ, "ಇದು ನಿಜಕ್ಕೂ ಕುಟುಂಬದ ವಾತಾವರಣದಂತಿದೆ" ಎಂದು ಪ್ರತಿಕ್ರಿಯಿಸಿದರೆ, ಮತ್ತೊಬ್ಬರು "ಅವರಿಗೆ ಮಕ್ಕಳಿದ್ದಾರೆ, ಹೀಗಾಗಿ ಉತ್ತಮ ಸಂಬಂಧ ಉಳಿಸಿಕೊಂಡಿರುವುದು ಸಹಜ" ಎಂದು ಕಾಮೆಂಟ್ ಮಾಡಿದ್ದಾರೆ.

ಆಮೀರ್ ಖಾನ್ 1986ರಲ್ಲಿ ರೀನಾ ದತ್ತಾ ಅವರನ್ನು ವಿವಾಹವಾಗಿದ್ದರು. ಈ ದಂಪತಿಗೆ ಜುನೈದ್ ಖಾನ್ ಮತ್ತು ಇರಾ ಖಾನ್ ಎಂಬ ಇಬ್ಬರು ಮಕ್ಕಳಿದ್ದಾರೆ. 2002ರಲ್ಲಿ ಇಬ್ಬರೂ ವಿಚ್ಛೇದನ ಪಡೆದರು.

File photo
'3ನೇ ಮದುವೆಯಾಗುತ್ತಿರುವ ಆಮೀರ್ ಖಾನ್‌ಗೆ ತುಂಬಾ ಧೈರ್ಯವಿದೆ': ತಾವೇಕೆ ಇನ್ನೂ ಸಿಂಗಲ್ ಎಂಬುದನ್ನು ತಿಳಿಸಿದ ನಟಿ!

'ಲಗಾನ್' ಚಿತ್ರದ ನಿರ್ಮಾಪಕರಾಗಿದ್ದ ರೀನಾ ದತ್ತಾ ಅವರನ್ನು ಕಾರ್ಯಕ್ರಮದಲ್ಲಿ ಪುತ್ರಿ ಇರಾ ಖಾನ್ ವಿಶೇಷವಾಗಿ ಸ್ಮರಿಸಿ, “ನನ್ನ ಅಮ್ಮ ಅದ್ಭುತ ಸಿನಿಮಾ ನಿರ್ಮಿಸಿದ್ದಾರೆ” ಎಂದು ಭಾವುಕರಾಗಿ ಹೇಳಿಕೊಂಡರು.

ಇನ್ನು ನಿರ್ದೇಶಕಿ ಕಿರಣ್ ರಾವ್ ಅವರು 'ಲಗಾನ್' ಚಿತ್ರದ ವೇಳೆ ಸಹಾಯಕ ನಿರ್ದೇಶಕಿಯಾಗಿ ಕೆಲಸ ಮಾಡುತ್ತಿದ್ದಾಗ ಆಮೀರ್ ಅವರನ್ನು ಭೇಟಿಯಾಗಿದ್ದರು.

2005ರಲ್ಲಿ ಮದುವೆಯಾದ ಈ ದಂಪತಿಗೆ ಆಜಾದ್ ರಾವ್ ಖಾನ್ ಎಂಬ ಮಗನಿದ್ದಾನೆ. 2021ರಲ್ಲಿ ವಿಚ್ಛೇದನ ಘೋಷಿಸಿದರೂ, ಇಬ್ಬರೂ ಇಂದಿಗೂ ಉತ್ತಮ ಸ್ನೇಹಿತರಾಗಿದ್ದು, ಮಗನ ಪಾಲನೆ ಹಾಗೂ ವೃತ್ತಿಜೀವನದಲ್ಲಿ ಜೊತೆಯಾಗಿ ಕೆಲಸ ಮಾಡುತ್ತಿದ್ದಾರೆ.

ಕಾರ್ಯಕ್ರಮದಲ್ಲಿ ಆಮೀರ್ ಅವರ ಪ್ರಸ್ತುತ ಗೆಳತಿ ಗೌರಿ ಸ್ಪ್ರಾಟ್ ಕೂಡ ಭಾಗವಹಿಸಿದ್ದರು. ಇಬ್ಬರೂ ಕೈ ಹಿಡಿದು ಕಾರ್ಯಕ್ರಮಕ್ಕೆ ಆಗಮಿಸಿದ್ದು, ಅಭಿಮಾನಿಗಳ ಗಮನ ಸೆಳೆದಿತ್ತು.

2025ರಲ್ಲಿ ತಮ್ಮ 60ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ಗೌರಿ ಅವರನ್ನು ಮಾಧ್ಯಮಗಳಿಗೆ ಪರಿಚಯಿಸಿದ್ದ ಆಮೀರ್, ಸುಮಾರು 25 ವರ್ಷಗಳ ಪರಿಚಯದ ಬಳಿಕ ಇಬ್ಬರೂ ಮತ್ತೆ ಸಂಪರ್ಕ ಸಾಧಿಸಿ ಪ್ರೀತಿಯಲ್ಲಿ ಬಿದ್ದಿರುವುದಾಗಿ ತಿಳಿಸಿದ್ದರು.

ಅಮೀರ್ ಖಾನ್ ಮತ್ತು ಗೌರಿ ಸ್ಪ್ರಾಟ್ ಶೀಘ್ರದಲ್ಲೇ ವಿವಾಹವಾಗಲಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿದ್ದು, ಜುಲೈ 5ರಂದು ಮದುವೆ ನಡೆಯುವ ಸಾಧ್ಯತೆ ಇದೆ ಎನ್ನಲಾಗಿದೆ. ಆದರೆ, ಈ ಕುರಿತು ಇನ್ನೂ ಯಾವುದೇ ಅಧಿಕೃತ ಘೋಷಣೆ ಹೊರಬಂದಿಲ್ಲ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com