ಮಗನ ಸಲಹೆ; ಭಾರತ ಭೇಟಿಗೂ ಮುನ್ನ 'ಧುರಂಧರ್' ಚಿತ್ರ ವೀಕ್ಷಿಸಿದ ಫಿನ್ಲೆಂಡ್ ಅಧ್ಯಕ್ಷ ಅಲೆಕ್ಸಾಂಡರ್ ಸ್ಟಬ್!

ಧುರಂಧರ್: ದಿ ರಿವೆಂಜ್ ಚಿತ್ರದ ಮುಂಗಡ ಬುಕಿಂಗ್ ಶನಿವಾರ ಆರಂಭವಾಗಿದೆ. ಭಾರತದ ಎಲ್ಲ ಭಾಷೆಗಳಲ್ಲಿ ಮುಂಗಡ ಬುಕಿಂಗ್ ಮೂಲಕ ಸುಮಾರು ₹12.29 ಕೋಟಿ ಸಂಗ್ರಹಿಸಿದೆ.
Alexander Stubb - Dhurandhar Poster
ಅಲೆಕ್ಸಾಂಡರ್ ಸ್ಟಬ್ - ಧುರಂಧರ್ ಚಿತ್ರದ ಪೋಸ್ಟರ್
Updated on

ರಣವೀರ್ ಸಿಂಗ್ ನಟನೆಯ ಬ್ಲಾಕ್‌ಬಸ್ಟರ್ ಚಿತ್ರ 'ಧುರಂಧರ್‌'ನ ಬಹುನಿರೀಕ್ಷಿತ ಸೀಕ್ವೆಲ್ ಮಾರ್ಚ್ 19 ರಂದು ದೇಶದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಈ ಬೆನ್ನಲ್ಲೇ, ಭಾನುವಾರವಷ್ಟೇ ಭಾರತಕ್ಕೆ ಅಧಿಕೃತ ಭೇಟಿಯನ್ನು ಮುಗಿಸಿದ ಫಿನ್ಲೆಂಡ್ ಅಧ್ಯಕ್ಷ ಅಲೆಕ್ಸಾಂಡರ್ ಸ್ಟಬ್, ತಾವು ಧುರಂಧರ್ ಚಿತ್ರದ ಅಭಿಮಾನಿ ಎಂದು ಬಹಿರಂಗಪಡಿಸಿದ್ದಾರೆ.

ಸುದ್ದಿಸಂಸ್ಥೆ ANIಗೆ ನೀಡಿದ ಸಂದರ್ಶನದಲ್ಲಿ, ಸ್ಟಬ್ ತಮ್ಮ ಮಗ ಸೂಚಿಸಿದಂತೆ ಭಾರತಕ್ಕೆ ಬರುವ ಮೊದಲು ಧುರಂಧರ್ ಚಿತ್ರವನ್ನು ವೀಕ್ಷಿಸಿದ್ದೇನೆ ಎಂದು ಹೇಳಿದರು.

'ಕುತೂಹಲಕಾರಿಯಾಗಿ, ನಾನು ಭಾರತಕ್ಕೆ ಬರುವ ಮೊದಲು, ನನ್ನ ಮಗ "ಧುರಂಧರ್'' ಚಿತ್ರವನ್ನು ವೀಕ್ಷಿಸುವಂತೆ ಸೂಚಿಸಿದ. ಅದರಂತೆ, ನಾನು ಕೂಡ ಹಾಗೆ ಮಾಡಿದೆ. ಮತ್ತು ಸಹಜವಾಗಿ, ನಾನು ನಿರೂಪಣೆಯ ಒಂದು ಭಾಗವಾಗಿದ್ದೆ. ಭಯೋತ್ಪಾದನೆಯ ವಿರುದ್ಧ ಹೋರಾಡಲು ನನಗೆ ಸಂತೋಷವಾಗಿದೆ ಮತ್ತು ಮಾರ್ಚ್ 19 ರಂದು ಸೀಕ್ವೆಲ್ ಅನ್ನು ಎದುರು ನೋಡುತ್ತಿದ್ದೇನೆ' ಎಂದು ಸ್ಟಬ್ ತಿಳಿಸಿದರು.

ಧುರಂಧರ್: ದಿ ರಿವೆಂಜ್ ಚಿತ್ರದ ಮುಂಗಡ ಬುಕಿಂಗ್ ಶನಿವಾರ ಆರಂಭವಾಗಿದೆ. ಫಿಲ್ಮ್ ಟ್ರೇಡ್ ಪೋರ್ಟಲ್ Sacnilk ಪ್ರಕಾರ, ಧುರಂಧರ್: ದಿ ರಿವೆಂಜ್ ಭಾರತದ ಎಲ್ಲ ಭಾಷೆಗಳಲ್ಲಿ ಮುಂಗಡ ಬುಕಿಂಗ್ ಮೂಲಕ ಸುಮಾರು ₹12.29 ಕೋಟಿ ಸಂಗ್ರಹಿಸಿದೆ. ಬ್ಲಾಕ್ ಬುಕಿಂಗ್‌ಗಳು ಸೇರಿದಂತೆ ಈ ಸಂಖ್ಯೆ ಸುಮಾರು ₹18.1 ಕೋಟಿಗಳಿಗೆ ಏರುತ್ತದೆ.

ವರದಿಯ ಪ್ರಕಾರ, ಈ ಚಿತ್ರವು ವಿದೇಶಗಳಲ್ಲಿ, ವಿಶೇಷವಾಗಿ ಉತ್ತರ ಅಮೆರಿಕದಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿದೆ. ಯುಎಸ್ಎ ಪ್ರೀಮಿಯರ್ ಶೋಗಳಿಗಾಗಿಯೇ, 557 ಸ್ಥಳಗಳಲ್ಲಿ 38,500ಕ್ಕೂ ಹೆಚ್ಚು ಟಿಕೆಟ್‌ಗಳು ಮಾರಾಟವಾಗಿದ್ದು, ಸುಮಾರು $618,911 (ಸುಮಾರು ₹5.15 ಕೋಟಿ) ಗಳಿಸಿದೆ.

Alexander Stubb - Dhurandhar Poster
ಮತ್ತಷ್ಟು ಭೀಭತ್ಸ್ಯ 'ಧುರಂಧರ್ 2' ಚಿತ್ರದ ಟ್ರೈಲರ್

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com