Main Tera Hero: ರಿರಿಲೀಸ್; ಗರ್ಲ್ ಫ್ರೆಂಡ್ ಗಾಗಿ ಅಭಿಮಾನಿಯ ಡ್ಯಾನ್ಸ್ , ವಿಡಿಯೋ ವೈರಲ್, ವರುಣ್ ಧವನ್ ಹೇಳಿದ್ದೇನು?

ಯಾವುದೇ ಹಿಂಜರಿಕೆ ಇಲ್ಲದೆ ಥೇಟ್ ವರುಣ್ ಧವನ್ ರೀತಿಯಲ್ಲಿ ಡ್ಯಾನ್ಸ್ ಮಾಡಿದ್ದು, ಸುತ್ತಮುತ್ತ ಕುಳಿತ ಪ್ರೇಕ್ಷಕರು ಕೂಡಾ ಮೊಬೈಲ್ ನಲ್ಲಿ ಸೆರೆ ಹಿಡಿಯುವ ಮೂಲಕ ಎಂಜಾಯ್ ಮಾಡಿದ್ದಾರೆ.
Varun Dhavan
ವರುಣ್ ಧವನ್
Updated on

ವರುಣ್ ಧವನ್ ಅಭಿನಯದ ಸೂಪರ್‌ಹಿಟ್ ಕಾಮಿಡಿ ಸಿನಿಮಾ 'ಮೈ ತೇರಾ ಹೀರೋ' (2014) 12ನೇ ವರ್ಷದ ಸಂಭ್ರಮದ ಅಂಗವಾಗಿ ಮೇ 22, 2026 ರಂದು ದೇಶಾದ್ಯಂತ ಚಿತ್ರಮಂದಿರಗಳಲ್ಲಿ ಮರು ಬಿಡುಗಡೆಗೊಂಡಿದ್ದು, ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ಈ ಸಿನಿಮಾದ ಜನಪ್ರಿಯ "ಪಲಟ್" (Palat) ಹಾಡಿಗೆ ಅಭಿಮಾನಿಯೊಬ್ಬರು ಡ್ಯಾನ್ಸ್ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಯುವಕನೊಬ್ಬ ತನ್ನ ಗೆಳತಿಗಾಗಿ ಚಿತ್ರಮಂದಿರದೊಳಗೆ ನೃತ್ಯ ಮಾಡುತ್ತಿರುವುದನ್ನು ತೋರಿಸುತ್ತದೆ.

ಯಾವುದೇ ಹಿಂಜರಿಕೆ ಇಲ್ಲದೆ ಥೇಟ್ ವರುಣ್ ಧವನ್ ರೀತಿಯಲ್ಲಿ ಡ್ಯಾನ್ಸ್ ಮಾಡಿದ್ದು, ಸುತ್ತಮುತ್ತ ಕುಳಿತ ಪ್ರೇಕ್ಷಕರು ಕೂಡಾ ಮೊಬೈಲ್ ನಲ್ಲಿ ಸೆರೆ ಹಿಡಿಯುವ ಮೂಲಕ ಎಂಜಾಯ್ ಮಾಡಿದ್ದಾರೆ.

Varun Dhavan
ವರುಣ್ ಧವನ್ ಮಗಳಿಗೆ DDH ಕಾಯಿಲೆ: ಮಗುವಿನ ಸ್ಥಿತಿ ಬಗ್ಗೆ ವಿವರ; ಯಾರ ಸಹಾನುಭೂತಿಯೂ ಬೇಡ ಎಂದ ನಟ!

ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆಯೇ, ನಟ ವರುಣ್ ಧವನ್ ಕೂಡಾ ಪ್ರತಿಕ್ರಿಯಿಸಿದ್ದಾರೆ.

ಈ ವಿಡಿಯೋವನ್ನು ತನ್ನ ಇನ್ಸಾಟಾಗ್ರಾಮ್ ಸ್ಟೋರಿಸ್ ನಲ್ಲಿ ಹಂಚಿಕೊಂಡಿದ್ದು, "ಹೈ ಜವಾನಿ ತೋ ಇಷ್ಕ್ ಹೋನಾ ಹೈ ಜೂನ್ 5 ರಂದು ಬಿಡುಗಡೆಯಾಗುತ್ತಿದೆ. ಆದರೆ ನನ್ನ ಹೃದಯ ಇದರಿಂದ ತುಂಬಿದೆ ಏಕೆ. ತುಂಬಾ ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com