ರಣಬೀರ್ ಕಪೂರ್ ಜೊತೆಗಿನ ದಾಂಪತ್ಯ ಜೀವನ ಚೆನ್ನಾಗಿಲ್ಲ? ಗಾಸಿಪ್ ಬಗ್ಗೆ ಮೌನ ಮುರಿದ ಆಲಿಯಾ ಭಟ್, ಟ್ರೋಲಿಗರಿಗೆ ತಿರುಗೇಟು!

2022ರಲ್ಲಿ ಸರಳವಾಗಿ ವಿವಾಹವಾದ ಈ ಜೋಡಿಗೆ ಜೋಡಿಗೆ ರಾಹಾ ಎಂಬ ಮಗಳಿದ್ದಾಳೆ. ಆದಾಗ್ಯೂ, ಇವರ ಸಂಬಂಧದಲ್ಲಿ ಸಮಾನತೆಯಿಲ್ಲ ಮತ್ತು ಆಲಿಯಾ ಈ ಮದುವೆಯಿಂದ ನೊಂದಿದ್ದಾರೆ ಎಂಬ ಕಟ್ಟುಕಥೆಗಳನ್ನು ನೆಟ್ಟಿಗರು ಸೃಷ್ಟಿಸುತ್ತಿದ್ದರು.
Ranbir Kapoor, Alia Bhatt
ರಣಬೀರ್ ಕಪೂರ್, ಆಲಿಯಾ ಭಟ್
Updated on: 

ಬಾಲಿವುಡ್ ನಟಿ ಆಲಿಯಾ ಭಟ್ ಮತ್ತು ನಟ ರಣಬೀರ್ ಕಪೂರ್ ಅವರ ದಾಂಪತ್ಯ ಜೀವನದ ಬಗ್ಗೆ ಆಗಾಗ್ಗೆ ಗಾಸಿಪ್ ಕೇಳಿಬರುತ್ತಲೇ ಇದೆ. ಇವರಿಬ್ಬರ ವೈವಾಹಿಕ ಸಂಬಂಧದ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗಳು ನಡೆಯುತ್ತಲೇ ಇವೆ.

2022ರಲ್ಲಿ ಸರಳವಾಗಿ ವಿವಾಹವಾದ ಈ ಜೋಡಿಗೆ ಜೋಡಿಗೆ ರಾಹಾ ಎಂಬ ಮಗಳಿದ್ದಾಳೆ. ಆದಾಗ್ಯೂ, ಇವರ ಸಂಬಂಧದಲ್ಲಿ ಸಮಾನತೆಯಿಲ್ಲ ಮತ್ತು ಆಲಿಯಾ ಈ ಮದುವೆಯಿಂದ ನೊಂದಿದ್ದಾರೆ ಎಂಬ ಕಟ್ಟುಕಥೆಗಳನ್ನು ನೆಟ್ಟಿಗರು ಸೃಷ್ಟಿಸುತ್ತಿದ್ದರು. ಇಂತಹ ಚರ್ಚೆಗಳಿಗೆ ಇದೀಗ ಆಲಿಯಾ ಭಟ್ ಪ್ರತಿಕ್ರಿಯಿಸಿದ್ದು, ಗಾಸಿಪ್ ಮಾಡುವವರ ವಿರುದ್ಧ ಕಿಡಿಕಾರಿದ್ದಾರೆ.

ತಮ್ಮದು ಅಸಮಾನ ದಾಂಪತ್ಯ (Unequal Marriage) ಎಂಬ ಅಭಿಪ್ರಾಯವನ್ನು ತಳ್ಳಿಹಾಕಿರುವ ಅವರು, ಇಂತಹ ಊಹಾಪೋಹಗಳು ಆಕ್ಷೇಪಾರ್ಹ ಮತ್ತು ನೋವುಂಟುಮಾಡುವಂಥವು ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಟೈಮ್ ನಿಯತಕಾಲಿಕಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಆಲಿಯಾ, ತಮ್ಮ ವೈವಾಹಿಕ ಸಂಬಂಧದ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಚರ್ಚೆಗಳಿಗೆ ಪ್ರತಿಕ್ರಿಯಿಸಿದ್ದಾರೆ. ರಣಬೀರ್ ಜೊತೆಗಿನ ಸಂಬಂಧದಲ್ಲಿ ತಮಗೆ ಸ್ವಂತ ನಿರ್ಧಾರ ತೆಗೆದುಕೊಳ್ಳುವ ಸ್ವಾತಂತ್ರ್ಯವಿಲ್ಲ ಅಥವಾ ತಾವು ಅಸಹಾಯಕ ಸ್ಥಿತಿಯಲ್ಲಿದ್ದೇನೆ ಎಂಬ ರೀತಿಯ ಅಭಿಪ್ರಾಯಗಳನ್ನು ಅವರು ಸಾರಾಸಗಟಾಗಿ ತಿರಸ್ಕರಿಸಿದ್ದಾರೆ.

ತಮ್ಮ ದಾಂಪತ್ಯದ ಬಗ್ಗೆ ಅಪರಿಚಿತರು ನೀಡುವ ತೀರ್ಪುಗಳ ಕುರಿತು ಆಲಿಯಾ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮಹಿಳೆಯರು ತಮ್ಮ ಮನಸ್ಸು ಮತ್ತು ಭಾವನೆಗಳನ್ನು ಅರ್ಥಮಾಡಿಕೊಂಡು, ತಮ್ಮದೇ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು ಎಂದು ನಾನು ಯಾವಾಗಲೂ ಪ್ರತಿಪಾದಿಸುತ್ತೇನೆ. ಹೀಗಿರುವಾಗ, ಕಲ್ಪಿತ ಸನ್ನಿವೇಶವೊಂದರಲ್ಲಿ ಕಷ್ಟ ಅನುಭವಿಸುತ್ತಿರುವ ಮಹಿಳೆಯಂತೆ ನನ್ನನ್ನು ಬಿಂಬಿಸುವುದು ಶಿಕ್ಷಾರ್ಹ ಅಪರಾಧ ಎಂದು ಆಲಿಯಾ ಹೇಳಿದ್ದಾರೆ.

ಜನರು ತಮ್ಮ ಸಂಬಂಧವನ್ನು ಯಾಕೆ ತಪ್ಪಾಗಿ ಅರ್ಥೈಸಿಕೊಳ್ಳುತ್ತಿದ್ದಾರೆ ಎಂಬುದಕ್ಕೂ ಆಲಿಯಾ ಸ್ಪಷ್ಟನೆ ನೀಡಿದ್ದಾರೆ. “ನಮ್ಮ ಸಂಬಂಧವು ಸಮಾಜದ ಹಳೆಯ ಅಥವಾ ಸಾಂಪ್ರದಾಯಿಕ ಮದುವೆಯ ಕಲ್ಪನೆಗಳಿಗೆ ಹೊಂದಿಕೆಯಾಗುವುದಿಲ್ಲ. ಬಹುಶಃ ಇದೇ ಕಾರಣಕ್ಕೆ ಜನರು ಇಂತಹ ಕಾಮೆಂಟ್‌ಗಳನ್ನು ಮಾಡುತ್ತಿರಬಹುದು. ಆದರೆ ಬೇರೆಯವರ ನಿರೀಕ್ಷೆಗೆ ತಕ್ಕಂತೆ ನಾವು ಬದುಕಲು ಸಾಧ್ಯವಿಲ್ಲ” ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಪತಿ ರಣಬೀರ್ ಕಪೂರ್ ಜೊತೆಗಿನ ಬಾಂಧವ್ಯ ಕುರಿತು ಆಲಿಯಾ ಮಾತನಾಡಿದ್ದು,“ಯಾವುದೇ ಕೃತಕ ಪ್ರಯತ್ನವಿಲ್ಲದೆ ಸಂಗಾತಿ ನಮ್ಮನ್ನು ಗುರುತಿಸುವುದು ಮತ್ತು ನಾವು ಏನನ್ನೂ ಹೇಳದಿದ್ದರೂ ನಮ್ಮ ಭಾವನೆಗಳನ್ನು ಅರ್ಥಮಾಡಿಕೊಳ್ಳುವುದೇ ಯಾವುದೇ ಸಂಬಂಧದ ನಿಜವಾದ ಅಡಿಪಾಯ. ನನ್ನ ಪಾಲಿಗೆ ರಣಬೀರ್ ಅಂತಹ ಸಂಗಾತಿ. ಇದೇ ನಮ್ಮ ಜೀವನದ ವಾಸ್ತವ” ಎನ್ನುವ ಮೂಲಕ, ತಮ್ಮ ದಾಂಪತ್ಯ ಸುಖಮಯವಾಗಿದೆ ಎಂಬ ಸಂದೇಶವನ್ನು ಟೀಕಾಕಾರರಿಗೆ ರವಾನಿಸಿದ್ದಾರೆ.

Ranbir Kapoor, Alia Bhatt
ನಿತೇಶ್ ತಿವಾರಿ ರಾಮಯಾಣದಲ್ಲಿ ದ್ವಿಪಾತ್ರದಲ್ಲಿ ರಣಬೀರ್ ಕಪೂರ್: ಇನ್ನೊಂದು ಪಾತ್ರ ಯಾವುದು?

ಮಾತೃತ್ವದ ಬಳಿಕ ಬದಲಾದ ಸಿನಿಮಾ ಆಯ್ಕೆ: ಮದುವೆ ಹಾಗೂ ತಾಯಿಯಾದ ಬಳಿಕ ಸಿನಿಮಾ ಆಯ್ಕೆ ಮಾಡುವ ವಿಧಾನದಲ್ಲಿ ಬದಲಾವಣೆಯಾಗಿದೆ ಎಂದಿರುವ ಅವರು, ಹೆಚ್ಚು ಸಿನಿಮಾಗಳಲ್ಲಿ ನಟಿಸುವುದಕ್ಕಿಂತ ಉತ್ತಮ ಗುಣಮಟ್ಟದ ಕಥೆಗಳಿಗೆ ಆದ್ಯತೆ ನೀಡುತ್ತಿದ್ದಾರೆ. ಸಂಖ್ಯೆಗೆ ಹೋಲಿಸಿದರೆ ಚಿತ್ರದ ಗುಣಮಟ್ಟವೇ ಈಗ ಹೆಚ್ಚು ಮುಖ್ಯವಾಗಿದೆ ಎಂಬುದು ಅವರ ಅಭಿಪ್ರಾಯ .ಉದಯೋನ್ಮುಖ ನಾಯಕರನ್ನು ಗೌರವಿಸುವ ಟೈಮ್100 ನೆಕ್ಸ್ಟ್ ಇಂಡಿಯಾದ ಮೊದಲ ಪಟ್ಟಿಯಲ್ಲೂ ಆಲಿಯಾ ಸ್ಥಾನ ಪಡೆದಿದ್ದಾರೆ.

ಮುಂದಿನ ಸಿನಿಮಾಗಳೇನು? ಆಲಿಯಾ ಭಟ್ ಕೊನೆಯದಾಗಿ ಆಲ್ಫಾ ಸಿನಿಮಾದಲ್ಲಿ ಗೂಢಚಾರಿಣಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಲವ್ ಆ್ಯಂಡ್ ವಾರ್ ಸಿನಿಮಾದಲ್ಲಿ ನಟಿಸಲಿದ್ದಾರೆ. ಈ ಚಿತ್ರದಲ್ಲಿ ರಣಬೀರ್ ಕಪೂರ್ ಮತ್ತು ವಿಕ್ಕಿ ಕೌಶಲ್ ಕೂಡ ಪ್ರಮುಖ ಪಾತ್ರಗಳಲ್ಲಿದ್ದಾರೆ. ಇದರ ಜೊತೆಗೆ ತುಂಭಾಡ್ 2ಸಿನಿಮಾದಲ್ಲೂ ಆಲಿಯಾ ಕಾಣಿಸಿಕೊಳ್ಳಲಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X