ಕಾನ್ಪುರದ ದಾಂಡಿಯಾ ಕಾರ್ಯಕ್ರಮದ ವೇಳೆ ಹೈಡ್ರಾಮಾ: ‘ಕಚ್ಚಾ ಬಾದಾಮ್‌’ ಹಾಡಿಗೆ ನಟಿ ಅಂಜಲಿ ಅರೋರಾ ಗರಂ? ಆಗಿದ್ದೇನು?

ಕಾನ್ಪುರದಲ್ಲಿ ನಡೆದ ದಾಂಡಿಯಾ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ನಟಿ ಅಂಜಲಿ ಅರೋರಾ ತಮ್ಮದೇ ಸಾಂಗ್ ಪ್ಲೇ ಮಾಡಿದ ಡಿಜೆ ವಿರುದ್ಧ ವೇದಿಕೆಯಲ್ಲೇ ಗರಂ ಆದರು ಎನ್ನಲಾಗಿದೆ.
Actress Anjali Arora gets upset over Kacha Badam
ವೇದಿಕೆಯಲ್ಲೇ ನಟಿ ಅಂಜಲಿ ಆರೋರಾ ಗರಂ
Updated on: 

ಕಾನ್ಪುರ: ‘ಕಚ್ಚಾ ಬಾದಾಮ್‌’ ಹಾಡಿಗೆ ಡ್ಯಾನ್ಸ್‌ ಮಾಡುವ ಮೂಲಕವೇ ಭಾರೀ ಜನಪ್ರಿಯತೆ ಗಳಿಸಿದ್ದ ನಟಿ ಹಾಗೂ ಸೋಷಿಯಲ್‌ ಮೀಡಿಯಾ ಇನ್‌ಫ್ಲುಯೆನ್ಸರ್‌ ಅಂಜಲಿ ಅರೋರಾ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ.

ಕಾನ್ಪುರದಲ್ಲಿ ನಡೆದ ದಾಂಡಿಯಾ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ನಟಿ ಅಂಜಲಿ ಅರೋರಾ ತಮ್ಮದೇ ಸಾಂಗ್ ಪ್ಲೇ ಮಾಡಿದ ಡಿಜೆ ವಿರುದ್ಧ ವೇದಿಕೆಯಲ್ಲೇ ಗರಂ ಆದರು ಎನ್ನಲಾಗಿದೆ.

ಈ ಕುರಿತ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದ್ದು, ವೇದಿಕೆಯಲ್ಲಿ ನಿಜಕ್ಕೂ ಏನಾಯಿತು ಎಂಬ ಬಗ್ಗೆ ನೆಟ್ಟಿಗರು ಚರ್ಚೆ ನಡೆಸುತ್ತಿದ್ದಾರೆ.

ಕಾನ್ಪುರ ಕಾರ್ಯಕ್ರಮದಲ್ಲಿ ನಡೆದಿದ್ದೇನು?

ಅಂಜಲಿ ಅರೋರಾ ಅಕ್ಟೋಬರ್‌ 15ರ ಗುರುವಾರ ಕಾನ್ಪುರದಲ್ಲಿ ನಡೆದ ‘ನಗಾಡಾ ನೈಟ್‌ ದಾಂಡಿಯಾ’ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ವೇಳೆ ‘ಕಚ್ಚಾ ಬಾದಾಮ್‌’ ಹಾಡು ಹಿನ್ನೆಲೆಯಲ್ಲಿ ಕೇಳಿಬರುತ್ತಿದ್ದಾಗ ಅಂಜಲಿ ವೇದಿಕೆಯ ಮೇಲೆ ಡಿಜೆ ಇದ್ದ ಸ್ಥಳದತ್ತ ತೆರಳಿದ್ದಾರೆ.

ಬಳಿಕ ಡಿಜೆ ಜೊತೆ ಕೆಲಕಾಲ ಮಾತನಾಡಿದ್ದು, ಅವರ ತಂಡದ ಕೆಲವು ಸದಸ್ಯರೂ ಡಿಜೆ ಕನ್ಸೋಲ್‌ ಬಳಿ ಹೋಗಿರುವುದು ವಿಡಿಯೋದಲ್ಲಿ ಕಾಣಿಸುತ್ತದೆ.

ಮಾತುಕತೆ ವೇಳೆ ಅಂಜಲಿ ಕೈ ಸನ್ನೆಗಳನ್ನು ಮಾಡಿರುವುದೂ ಕಂಡುಬಂದಿದೆ. ಈ ದೃಶ್ಯಗಳೇ ಈಗ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಕಾರಣವಾಗಿವೆ.

Actress Anjali Arora gets upset over Kacha Badam
'ಲೈಟ್‌ ಆನ್‌-ಆಫ್‌, ತಾನಾಗಿಯೇ ತೆರೆಯುತ್ತಿದ್ದ ಕಪಾಟು, ರೂಮ್‌ನಲ್ಲಿ ಯಾರೋ ಇದ್ದಂತೆ ಅನಿಸುತ್ತಿತ್ತು': ದೆವ್ವದ ರಹಸ್ಯ ಬಿಚ್ಚಿಟ್ಟ Salman Khan

ಖ್ಯಾತಿ ತಂದುಕೊಟ್ಟ ಹಾಡಿನ ವಿರುದ್ಧವೇ ಕೋಪ?

ಅಂಜಲಿ ಅರೋರಾ ತಮ್ಮನ್ನು ಜನಪ್ರಿಯಗೊಳಿಸಿದ ‘ಕಚ್ಚಾ ಬಾದಾಮ್‌’ ಹಾಡನ್ನು ಹಾಕಿದ್ದಕ್ಕೆ ಅಸಮಾಧಾನಗೊಂಡಿದ್ದಾರೆಯೇ? ಎಂಬ ಪ್ರಶ್ನೆಯನ್ನು ಕೆಲವರು ಎತ್ತಿದ್ದಾರೆ. ಆದರೆ, ವೈರಲ್‌ ವಿಡಿಯೋದಲ್ಲಿ ಅವರು ಏನು ಮಾತನಾಡಿದ್ದಾರೆ ಅಥವಾ ಅವರ ಪ್ರತಿಕ್ರಿಯೆಗೆ ನಿಜವಾದ ಕಾರಣವೇನು ಎಂಬುದು ಸ್ಪಷ್ಟವಾಗಿಲ್ಲ. ಹೀಗಾಗಿ, ಅವರು ಹಾಡಿನ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ ಎಂಬ ಚರ್ಚೆ ವ್ಯಾಪಕವಾಗಿ ನಡೆಯುತ್ತಿದೆ.

ನೆಟ್ಟಿಗರ ಪ್ರತಿಕ್ರಿಯೆ

ವಿಡಿಯೋ ವೈರಲ್‌ ಆಗುತ್ತಿದ್ದಂತೆ ಸಾಮಾಜಿಕ ಜಾಲತಾಣ ಬಳಕೆದಾರರು ತಮ್ಮದೇ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಕೆಲವರು ಅಂಜಲಿ ಅವರ ವರ್ತನೆಯನ್ನು ಟೀಕಿಸಿದರೆ, ಇನ್ನು ಕೆಲವರು ವಿಡಿಯೋದಿಂದ ಮಾತ್ರ ತೀರ್ಮಾನಕ್ಕೆ ಬರುವುದು ಸರಿಯಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

‘ಕಚ್ಚಾ ಬಾದಾಮ್‌’ ಹಾಡಿನಿಂದಲೇ ಅಂಜಲಿ ಅರೋರಾ ಖ್ಯಾತಿ ಗಳಿಸಿದ್ದರು. ಈಗ ಅದೇ ಹಾಡನ್ನು ಡಿಜೆ ಹಾಕಿದ್ದಕ್ಕೆ ಅವರು ಅಸಮಾಧಾನಗೊಂಡಿದ್ದರೆ ಅದು ವಿಪರ್ಯಾಸ ಎಂದು ಓರ್ವ ಬಳಕೆದಾರ ಕಾಮೆಂಟ್‌ ಮಾಡಿದ್ದಾರೆ.

ಮತ್ತೊಬ್ಬರು, “ಜನರಿಗೆ ತಮ್ಮದೇ ಗುರುತಿನಿಂದ ಸಮಸ್ಯೆ ಇದೆ… ಇದೇ ಪತನದ ಆರಂಭ” ಎಂಬರ್ಥದಲ್ಲಿ ಪ್ರತಿಕ್ರಿಯಿಸಿದ್ದಾರೆ. ಇನ್ನೊಬ್ಬ ಬಳಕೆದಾರರು, “ನೀವು ಎಷ್ಟೇ ಪ್ರಯತ್ನಿಸಿದರೂ ಗೌರವದ ಜೀವನ ಸಿಗುವುದಿಲ್ಲ” ಎಂದು ಟೀಕಿಸಿದ್ದಾರೆ.

ಸೀತೆಯ ಪಾತ್ರದಲ್ಲಿ ನಟಿಸಿದ್ದಕ್ಕೂ ಟೀಕೆ ಎದುರಿಸಿದ್ದ ಅಂಜಲಿ

ಇತ್ತೀಚೆಗೆ ಅಂಜಲಿ ಅರೋರಾ ‘ಮಹಾಕಾವ್ಯ ಶ್ರೀ ರಾಮಾಯಣ ಕಥಾ’ ಚಿತ್ರದಲ್ಲಿ ಸೀತೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಚಿತ್ರದ ಟೀಸರ್‌ ಬಿಡುಗಡೆಯಾದ ಬಳಿಕ ಅವರು ಈ ಪಾತ್ರದಲ್ಲಿ ನಟಿಸಿರುವುದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗಿತ್ತು.

ಈ ಹಿಂದೆ ಟ್ರೋಲ್‌ಗಳ ಬಗ್ಗೆ ಪ್ರತಿಕ್ರಿಯಿಸಿದ್ದ ಅಂಜಲಿ, ಅವುಗಳಿಂದ ತಮಗೆ ಬೇಸರವಾಗಿಲ್ಲ ಎಂದು ಹೇಳಿದ್ದರು.

“ನಾನು ಮೊದಲು ಡ್ಯಾನ್ಸ್‌ ಮಾಡುತ್ತಿದ್ದೆ, ಹಾಗಿದ್ದ ಮೇಲೆ ಮಾತಾ ಸೀತೆಯ ಪಾತ್ರವನ್ನು ಹೇಗೆ ನಿರ್ವಹಿಸುತ್ತೇನೆ ಎಂದು ಜನರು ಟ್ರೋಲ್‌ ಮಾಡುತ್ತಿದ್ದಾರೆ. ಎಲ್ಲರೂ ಡ್ಯಾನ್ಸ್‌ ಮಾಡುತ್ತಾರೆ. ಡ್ಯಾನ್ಸ್‌ ಮಾಡದ ನಟರು ಯಾರು? ನನಗೆ ಡ್ಯಾನ್ಸ್‌ ಮಾಡುವುದು ಇಷ್ಟ. ಅದು ನನ್ನ ಹವ್ಯಾಸ. ಅದಕ್ಕಾಗಿ ನನಗೆ ನಾಚಿಕೆಯಿಲ್ಲ” ಎಂದು ಅವರು ಹೇಳಿದ್ದರು.

ಅಂತೆಯೇ “ನಾವು ಸಾರ್ವಜನಿಕ ವ್ಯಕ್ತಿಗಳು. ನಮ್ಮನ್ನು ನಿರ್ಣಯಿಸುವ ಹಕ್ಕನ್ನು ಜನರಿಗೆ ನೀಡಿದ್ದೇವೆ. ಅವರು ನಮ್ಮನ್ನು ಒಳ್ಳೆಯ ರೀತಿಯಲ್ಲಿ ಅಥವಾ ಕೆಟ್ಟ ರೀತಿಯಲ್ಲಿ ವಿಮರ್ಶಿಸುವುದು ಅವರ ಇಷ್ಟ. ನಮ್ಮನ್ನು ಇಷ್ಟಪಡಬೇಕೇ ಅಥವಾ ಬೇಡವೇ ಎಂಬ ನಿರ್ಧಾರ ಅವರದ್ದು” ಎಂದೂ ಅಂಜಲಿ ಪ್ರತಿಕ್ರಿಯಿಸಿದ್ದರು.

‘ಮಹಾಕಾವ್ಯ ಶ್ರೀ ರಾಮಾಯಣ ಕಥಾ’ ಚಿತ್ರವು 2026ರ ಸೆಪ್ಟೆಂಬರ್‌ 26ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com