‘ನಿನಗೆ ಖಂಡಿತಾ ಗರ್ಲ್ ಫ್ರೆಂಡ್ ಇಲ್ಲ ಅನಿಸುತ್ತೆ’: ಕ್ರಿಕೆಟರ್ ಜೊತೆ ಡೇಟಿಂಗ್ ರೂಮರ್‌, ಅಭಿಮಾನಿಗೆ ನಟಿ Ameesha Patel ಖಡಕ್ ತಿರುಗೇಟು!

ಅಮೀಷಾ ಪಟೇಲ್ ಮತ್ತು ಹಾರ್ದಿಕ್ ಪಾಂಡ್ಯ ಇತ್ತೀಚೆಗೆ ಮುಂಬೈನ ತಾಜ್ ಮಹಲ್ ಪ್ಯಾಲೇಸ್‌ನಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ಈ ವೇಳೆ ಅಮೀಷಾ ಅವರು ಹಾರ್ದಿಕ್ ಅವರನ್ನು ತಮ್ಮ ಕೆಲವು ಸ್ನೇಹಿತರಿಗೆ ಪರಿಚಯಿಸುತ್ತಿರುವುದು ಕಂಡುಬಂದಿತ್ತು.
‘ನಿನಗೆ ಖಂಡಿತಾ ಗರ್ಲ್ ಫ್ರೆಂಡ್ ಇಲ್ಲ ಅನಿಸುತ್ತೆ’: ಕ್ರಿಕೆಟರ್ ಜೊತೆ ಡೇಟಿಂಗ್ ರೂಮರ್‌, ಅಭಿಮಾನಿಗೆ ನಟಿ Ameesha Patel ಖಡಕ್ ತಿರುಗೇಟು!
Updated on

ಮುಂಬೈ: ನಟಿ ಅಮೀಷಾ ಪಟೇಲ್ ಅವರು ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಅವರೊಂದಿಗಿನ ಇತ್ತೀಚಿನ ಭೇಟಿಗೆ ಪ್ರೇಮದ ಬಣ್ಣ ನೀಡಲು ಯತ್ನಿಸಿದ ಸಾಮಾಜಿಕ ಜಾಲತಾಣದ ಬಳಕೆದಾರರೊಬ್ಬರಿಗೆ ಖಡಕ್ ತಿರುಗೇಟು ನೀಡಿದ್ದಾರೆ.

ಅಮೀಷಾ ಪಟೇಲ್ ಮತ್ತು ಹಾರ್ದಿಕ್ ಪಾಂಡ್ಯ ಇತ್ತೀಚೆಗೆ ಮುಂಬೈನ ತಾಜ್ ಮಹಲ್ ಪ್ಯಾಲೇಸ್‌ನಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ಈ ವೇಳೆ ಅಮೀಷಾ ಅವರು ಹಾರ್ದಿಕ್ ಅವರನ್ನು ತಮ್ಮ ಕೆಲವು ಸ್ನೇಹಿತರಿಗೆ ಪರಿಚಯಿಸುತ್ತಿರುವುದು ಕಂಡುಬಂದಿತ್ತು. ಈ ಭೇಟಿಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಹಲವರ ಗಮನ ಸೆಳೆದಿತ್ತು.

ಈ ವಿಡಿಯೋವನ್ನು ಎಕ್ಸ್‌ನಲ್ಲಿ ಹಂಚಿಕೊಂಡಿದ್ದ ಬಳಕೆದಾರರೊಬ್ಬರು, “ಬೆಂಗಳೂರಿನ ಹೋಟೆಲ್‌ನಲ್ಲಿ ನಡೆದ ಪಾರ್ಟಿಯಲ್ಲಿ ಅಮೀಷಾ ಪಟೇಲ್ ಅವರು ಹಾರ್ದಿಕ್ ಪಾಂಡ್ಯ ಅವರ ಭುಜದ ಮೇಲೆ ಕೈ ಇಟ್ಟ ರೀತಿಯನ್ನು ನೋಡಿ. ರೆಡ್ಡಿಟ್‌ನಲ್ಲಿ ಹರಿದಾಡುತ್ತಿದ್ದ ಎಲ್ಲಾ ರೂಮರ್‌ಗಳು ನಿಜವಾಗುತ್ತಿರುವಂತೆ ಕಾಣುತ್ತಿದೆ” ಎಂದು ಬರೆದುಕೊಂಡಿದ್ದರು.

‘ನಿನಗೆ ಖಂಡಿತಾ ಗರ್ಲ್ ಫ್ರೆಂಡ್ ಇಲ್ಲ ಅನಿಸುತ್ತೆ’: ಕ್ರಿಕೆಟರ್ ಜೊತೆ ಡೇಟಿಂಗ್ ರೂಮರ್‌, ಅಭಿಮಾನಿಗೆ ನಟಿ Ameesha Patel ಖಡಕ್ ತಿರುಗೇಟು!
ಬಾಕ್ಸ್ ಆಫೀಸ್‌ನಲ್ಲಿ ‘Hanuman Ansh’ ಕಮಾಲ್; ನೀಮ್ ಕರೋಲಿ ಬಾಬಾ ಕಥೆಗೆ ಪ್ರೇಕ್ಷಕರ ಮೆಚ್ಚುಗೆ, 100 ಕೋಟಿ ಕ್ಲಬ್ ಸೇರಿದ ಸಿನಿಮಾ!

ಈ ಪೋಸ್ಟ್‌ಗೆ ಪ್ರತಿಕ್ರಿಯಿಸಿರುವ ಅಮೀಷಾ ಪಟೇಲ್, “ನಿನಗೆ ಖಂಡಿತಾ ಗರ್ಲ್ ಫ್ರೆಂಡ್ ಇಲ್ಲ ಅನಿಸುತ್ತೆ” ಎಂದು ತಿರುಗೇಟು ನೀಡಿದ್ದಾರೆ.

'ನೀನು ಹೇಳಿದ್ದು ತುಂಬಾ ನಿಜ.. ತುಂಬಾ ರೊಮ್ಯಾಂಟಿಕ್ ಧಾಟಿಯಲ್ಲಿ ನನ್ನ ಕೈಗಳು ಹಾರ್ದಿಕ್ ಮೇಲೆ ಇದ್ದವು. ಗೊತ್ತಿಲ್ಲ ಆದ್ರೆ ನಿಜಕ್ಕೂ ನಿನಗೆ ಕೇವಲ ಸ್ನೇಹಿತೆಯಾಗಿ ಕೂಡ ಗರ್ಲ್ ಫ್ರೆಂಡ್ ಇರೋದಿಲ್ಲ. ಇಂತಹ ಪೋಸ್ಟ್ ಗಳನ್ನು ಮಾಡುವ ಮುನ್ನ ಕನಿಷ್ಠ ಒಬ್ಬರನ್ನಾದರೂ ಗರ್ಲ್ ಫ್ರೆಂಡ್ ಮಾಡಿಕೋ' ಎಂದು ನೆಟ್ಟಿಗನ ಕಾಲೆಳೆದಿದ್ದಾರೆ. ಅಮೀಷಾ ಅವರ ಈ ಪ್ರತಿಕ್ರಿಯೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಮತ್ತಷ್ಟು ಚರ್ಚೆಗೆ ಕಾರಣವಾಗಿದೆ.

ಹಾರ್ದಿಕ್ ಪಾಂಡ್ಯ-ಮಹೀಕಾ ಶರ್ಮಾ ಸಂಬಂಧ

ಇನ್ನು ಹಾರ್ದಿಕ್ ಪಾಂಡ್ಯ ಸದ್ಯ ಮಾಡೆಲ್ ಮಹೀಕಾ ಶರ್ಮಾ ಅವರೊಂದಿಗೆ ಸಂಬಂಧದಲ್ಲಿದ್ದಾರೆ ಎನ್ನಲಾಗಿದೆ. 2025ರಲ್ಲಿ ಹಾರ್ದಿಕ್ ಅವರು ಇನ್‌ಸ್ಟಾಗ್ರಾಂನಲ್ಲಿ ಮಹೀಕಾ ಅವರೊಂದಿಗಿನ ಸಂಬಂಧವನ್ನು ಅಧಿಕೃತವಾಗಿ ಬಹಿರಂಗಪಡಿಸಿದ್ದರು.

ಇದಕ್ಕೂ ಮುನ್ನ ಹಾರ್ದಿಕ್ ಪಾಂಡ್ಯ ಅವರು ರಷ್ಯಾ ಮೂಲದ ನಟಿ ನತಾಶಾ ಸ್ಟಾಂಕೋವಿಕ್ ಅವರನ್ನು ವಿವಾಹವಾಗಿದ್ದರು. ಬಳಿಕ ಇಬ್ಬರೂ ವಿಚ್ಚೇದನ ಪಡೆದು ಪ್ರತ್ಯೇಕವಾಗಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com