ಅಸಹ್ಯಕರವಾಗಿ ಫೋಟೋ ತೆಗೆಯುವವರಿಗೆ ಹೊಡೆಯಿರಿ: ಶರ್ಟ್ ಬಿಚ್ಚಿ ಪಾಪರಾಜಿಗಳ ವಿರುದ್ಧ ಸಲ್ಮಾನ್ ಖಾನ್ ಗರಂ!

ಬಿಗ್ ಬಾಸ್ ಸೀಸನ್ 20ರ ವಾರಾಂತ್ಯದಲ್ಲಿ ಸಲ್ಮಾನ್ ಕಾನ್ ತಮ್ಮ ಬದಲಾಗುತ್ತಿರುವ ದೇಹದ ಬಗ್ಗೆ ಮಾಡಿರುವ ಕಮೆಂಟ್ ಹಾಗೂ ಕತ್ರಿನಾ ಕೈಫ್ ಗುರಿತ ಟ್ರೋಲ್ ಗೆ ಖಾರವಾಗಿಯೇ ಪ್ರತಿಕ್ರಿಯಿಸಿದ್ದಾರೆ.
Salman khan
ಸಲ್ಮಾನ್ ಖಾನ್
Updated on

ಬಿಗ್ ಬಾಸ್ ಸೀಸನ್ 20ರ ವಾರಾಂತ್ಯದಲ್ಲಿ ಸಲ್ಮಾನ್ ಕಾನ್ ತಮ್ಮ ಬದಲಾಗುತ್ತಿರುವ ದೇಹದ ಬಗ್ಗೆ ಮಾಡಿರುವ ಕಮೆಂಟ್ ಗಳಿಗೆ ಖಾರವಾಗಿಯೇ ಪ್ರತಿಕ್ರಿಯಿಸಿದ್ದು ಅಸಹ್ಯಕರವಾಗಿ ಫೋಟೋ ತೆಗೆಯುವ ಪಾಪರಾಜಿಗಳಿಗೆ ಬಾರಿಸಿ ಎಂದು ಎಲ್ಲಾ ನಟಿಯರು ಹಾಗೂ ಹೆಣ್ಣುಮಕ್ಕಳಿಗೆ ಕರೆ ನೀಡಿದರು.

ಮುಂಬೈ ವಿಹಾರ ನೌಕೆ ವಾರದಲ್ಲಿ ಅಂಬಾನಿ ಕುಟುಂಬದ ಗಣಪತಿ ಉತ್ಸವ ಆಚರಣೆಯ ನಂತರ ಕತ್ರಿನಾ ಕೈಫ್ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ಟ್ರೋಲಿಂಗ್ ಎದುರಿಸಿದರು. ಮೊದಲ ಮಗುವಿನ ಜನನದ ನಂತರ ತೂಕ ಹೆಚ್ಚಾಗಿರುವುದನ್ನು ಗುರಿಯಾಗಿಸಿಕೊಂಡು ಹಲವು ನೆಟ್ಟಿಗರು ಕಮೆಂಟ್ ಗಳನ್ನು ಮಾಡಿದರು. ಇದಕ್ಕೆ ಸಲ್ಮಾನ್ ಖಾನ್, ಹೆರಿಗೆ ನಂತರ ಎಲ್ಲರಿಗೂ ತೂಕ ಹೆಚ್ಚಾಗುತ್ತದೆ. ಚಲನಚಿತ್ರಗಳಲ್ಲಿ ನಟಿಸುವಾಗ ನಟಿಯರು ಫಿಟ್ ಆಗಿರುತ್ತಾರೆ. ಈಗ ಕತ್ರಿನಾ ನಟನೆಯಿಂದ ದೂರ ಇದ್ದು ತನ್ನ ಕುಟುಂಬದೊಂದಿಗೆ ಸಮಯ ಕಳೆಯಲು ಬಯಸುತ್ತಾರೆ ಎಂದು ಅಸಾಹಿ ಸಲ್ಮಾನ್ ಹೇಳಿದರು.

ಸೋಷಿಯಲ್ ಮೀಡಿಯಾ ಇಂದು ಅತ್ಯುತ್ತಮ ವೃತ್ತಿಕ್ಷೇತ್ರಗಳಲ್ಲಿ ಒಂದಾಗಿದೆ. ಇದರ ಮೂಲಕ ಲಕ್ಷಾಂತರ ಜನರು ಉದ್ಯೋಗ ಪಡೆಯುತ್ತಿದ್ದಾರೆ. ಹಿಂದೆ ನಿರುದ್ಯೋಗಿಗಳಾಗಿದ್ದರೂ ಇಂದು ಸ್ಮಾರ್ಟ್ ಫೋನ್ ಗಳಿಂದಾಗಿ ಈಗ ಕೆಲಸ ಕಂಡುಕೊಂಡಿದ್ದಾರೆ. ಅವರು ಮೂಲಭೂತ ಎಡಿಟಿಂಗ್ ಕಲಿಯುತ್ತಾರೆ, ನಂತರ ಕಾಮೆಂಟ್‌ಗಳನ್ನು ಪೋಸ್ಟ್ ಮಾಡುತ್ತಾರೆ ಮತ್ತು 'ಟ್ರೋಲಿಂಗ್' (trolling) ಆರಂಭಿಸುತ್ತಾರೆ. ಇದರಿಂದ ಹಣ ಸಂಪಾದಿಸುತ್ತಿದ್ದಾರೆ. ಇದನ್ನು ವೃತ್ತಿ ಮಾಡಿಕೊಂಡಿರುವವರು ಅನೇಕ ಫೋಟೋಗಳಿಗೆ ಕೆಟ್ಟದಾಗಿ ಕಮೆಂಟ್ ಮಾಡುತ್ತಿದ್ದಾರೆ.

Salman khan
‘ಮಹಿಳೆಯ ದೇಹವೇನು ಸಾರ್ವಜನಿಕ ಜಾಹಿರಾತು ಫಲಕವೇ?’; Katrina Kaif ಪರ ನಟಿ ಖುಷ್ಬೂ ಖಡಕ್ ಮಾತು!

ಟ್ರೋಲರ್‌ಗಳು ಸೆಲೆಬ್ರಿಟಿಗಳನ್ನು ಅವರ ದೇಹರಚನೆ, ತೂಕ, ನೋಟ, ಕುಟುಂಬ, ವೃತ್ತಿಜೀವನದ ವೈಫಲ್ಯ ಮತ್ತು ತಾಯ್ತನದಂತಹ ಅನೇಕ ವೈಯಕ್ತಿಕ ಜೀವನದ ಪ್ರಮುಖ ಘಟನೆಗಳನ್ನು ಗುರಿಯಾಗಿಸುತ್ತಾರೆ. ನಟಿಯರು ಕಾರಿನಿಂದ ಇಳಿಯುವಾಗ ಅಥವಾ ಕಾರು ಹತ್ತುವಾಗ ಅಸಹ್ಯಕರ ಕೋನದಲ್ಲಿ, ಹಿಂಭಾಗದಿಂದ ಫೋಟೋಗಳನ್ನು ಕ್ಲಿಕ್ಕಿಸುತ್ತಾರೆ. ಇದನ್ನು ಯಾವ ನಟಿಯರೂ ಇಷ್ಟಪಡುವುದಿಲ್ಲ. ಕೆಲವರು ಸಮ್ಮತಿಸಬಹುದು, ಆದರೆ ಇಷ್ಟವಿಲ್ಲದವರ ಪರಿಸ್ಥಿತಿ ಏನು?’ ಎಂದು ಸಲ್ಮಾನ್ ಖಾನ್ ಪ್ರಶ್ನಿಸಿದ್ದಾರೆ.

ದಬಾಂಗ್ 3’ ಚಿತ್ರದಲ್ಲಿ ತಮ್ಮೊಂದಿಗೆ ನಟಿಸಿದ್ದ ಸಾಯಿ ಮಂಜ್ರೇಕರ್‌ ಇಂತಹ ಫೋಟೊಗ್ರಫಿಯಿಂದ ಅಸಹಜವಾಗಿ, ಮುಜುಗರಕ್ಕೆ ಒಳಗಾಗಿರುವುದನ್ನು ತಾವು ಕಂಡಿದ್ದಾಗಿ ಸಲ್ಮಾನ್‌ ಹೇಳಿದರು. ನಟಿ ನೇಹಾ ಧೂಪಿಯಾ ಅವರಿಗೂ ಇಂತಹ ಸಂದರ್ಭ ಎದುರಾಗಿರುವುದನ್ನು ಪ್ರಸ್ತಾಪಿಸಿ, ತಮ್ಮ ಸಂಬಂಧಿಗೂ ಇದೇ ರೀತಿಯ ಪರಿಸ್ಥಿತಿ ಎದುರಾಗಿರುವುದನ್ನು ನೋಡಿದ್ದೇನೆ ಎಂದರು. ಈ ರೀತಿ ಟ್ರೋಲ್ ಮಾಡುವ ಉದ್ದೇಶವೇನು? ನೀವು ಏನು ಟ್ರೋಲ್ ಮಾಡಲು ಬಯಸುತ್ತೀರಿ ಮತ್ತು ನೀವು ಏಕೆ ಟ್ರೋಲ್ ಮಾಡಲು ಬಯಸುತ್ತೀರಿ?. ಇದರಿಂದ ಕೆಲವು ನಿರ್ಮಾಪಕರು ಅಥವಾ ಕಲಾವಿದರು ಸಾಮಾಜಿಕ ಮಾಧ್ಯಮದಲ್ಲಿ ಸೆಲೆಬ್ರಿಟಿಗಳನ್ನು ಗುರಿಯಾಗಿಸಲು ಪಾಪರಾಜಿಗಳಿಗೆ ಹಣ ನೀಡುವ ಮೂಲಕ ಟ್ರೋಲಿಂಗ್‌ನಲ್ಲಿ ತೊಡಗುತ್ತಾರೆ ಎಂದು ಸಲ್ಮಾನ್ ಆರೋಪಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com