ಸಿನಿಮಾ ಲೇಖನ

ನೆನಪಿಡಲಿ ಪ್ರೇಮ್

ನೆನಪಿಡಲಿ ಪ್ರೇಮ್
Published On :

ನೆನಪಿರಲಿ ಪ್ರೇಮ್ ಅವರ ಎರಡು ಚಿತ್ರಗಳಿಗೆ ಮತ್ತೆ ಮರುಜೀವ ಬಂದಿದೆ. ಆದರೆ ಅದು ತಮಿಳು ಚಿತ್ರರಂಗದಲ್ಲಿ ಎಂಬುದು ಸ್ವಾರಸ್ಯ. ತಮಿಳಿನ ನಿರ್ಮಾಪಕರೊಬ್ಬರು ರತ್ನಜ ನಿರ್ದೇಶನದ ನೆನಪಿರಲಿ ಮತ್ತು ಹೊಂಗನಸು ಚಿತ್ರಗಳ ಡಬ್ಬಿಂಗ್ ಹಕ್ಕುಗಳನ್ನು ಪಡೆದುಕೊಂಡಿದ್ದಾರೆ. ಅರರೆ ಇದೇನು, ಪ್ರೇಮ್ ಚಿತ್ರಗಳಿಗೆ ತಮಿಳು ಚಿತ್ರರಂಗದಲ್ಲಿ ಯಾವ ಬೇಡಿಕೆ ಇದೆ ಎನಿಸಬಹುದು. ಆದರೆ, ಅವರೀಗ ತಮಿಳಿನ ಶ್ರೀಯಾ ಜೊತೆ ಅಭಿನಯಿಸಿದ ನಾಯಕ ನಟ ಎಂಬುದನ್ನು ಮರೆಯುವಂತಿಲ್ಲ. ನೆನಪಿರಲಿ ಪ್ರೇಮ್‌ಗೆ ನೆನಪಿದ್ದರೆ ಅವರು ಇತ್ತೀಚೆಗೆ  ಚಂದ್ರ ಎಂಬ ಚಿತ್ರದಲ್ಲಿ ಶ್ರೀಯಾ ಅವರ ಜೊತೆ ನಾಯಕರಾಗಿ ಅಭಿನಯಿಸಿದ್ದರು. ಇದು ಅದೇ ಚಂದ್ರ ಚಿತ್ರದಿಂದ ಸಿಕ್ಕ ಪ್ರತಿಫಲ.  ಅವರು ಹೆಚ್ಚು ಕಡಿಮೆ ಮರೆತೇ ಹೋಗಿರಬಹುದಾದ ಹೊಂಗನಸುವಿನಂಥ ಚಿತ್ರಕ್ಕೂ ಜೀವ ಕೊಟ್ಟಿದೆ ಚಂದ್ರ. ಮೊನ್ನೆ ಚಂದ್ರ ಚಿತ್ರ ನೋಡಿದ ಈ ನಿರ್ಮಾಪಕರು, ನೆನಪಿರಲಿ ಮತ್ತು ಹೊಂಗನಸು ಚಿತ್ರಗಳನ್ನು ನೋಡಿ, ಅರರೇ ಇದು ಶ್ರೀಯಾ ಜೊತೆ ಅಭಿನಯಿಸಿದ ನಾಯಕ ಅಲ್ವಾ ಎನ್ನುತ್ತಾ, ದೊಡ್ಡ ಗಂಟನ್ನಲ್ಲದಿದ್ದರೂ ತಕ್ಕಮಟ್ಟಿನ ಮೊತ್ತ ನೀಡಿ ಪ್ರೇಮ್‌ರ ಈ ಎರಡೂ ಚಿತ್ರಗಳ ಡಬ್ಬಿಂಗ್ ಹಕ್ಕುಗಳನ್ನು ಖರೀದಿಸಿದೆ. ಒಂದು ವೇಳೆ ಈ ಚಿತ್ರಗಳು ಸದ್ದು ಮಾಡಿದರೆ ಪ್ರೇಮ್ ಅವರ ಮತ್ತಷ್ಟು ಚಿತ್ರಗಳಿಗೆ ಬೇಡಿಕೆ ಬಂದು, ನಾಳೆ ಪ್ರೇಮ್‌ಗೆ ತಮಿಳು ಚಿತ್ರರಂಗದಲ್ಲಿ ಅವಕಾಶಗಳು ಸಿಕ್ಕು ಪ್ರೇಮ್ ಅಲ್ಲಿಯೂ ಹೆಸರು ಮಾಡುವ ಎಲ್ಲ
ಸಾಧ್ಯತೆಗಳೂ ಇವೆ. ಈಗಾಗಲೇ ಚಾರ್‌ಮಿನಾರ್‌ನ ತೆಲುಗು ಅವತರಣಿಕೆಯ ನಿರ್ಮಾಪಕ ಶ್ರೀಧರ್ ಪ್ರೇಮ್ ಅವರನ್ನು ನಾಯಕನನ್ನಾಗಿ ಮಾಡಿ ತೆಲುಗು ಚಿತ್ರ ಮಾಡುವ ಇರಾದೆ ವ್ಯಕ್ತಪಡಿಸಿದ್ದೂ ಇದೆ. ಈಗ ತಮಿಳಿನ ಸರದಿ. ಒಟ್ಟಿನಲ್ಲಿ ಪ್ರೇಮ್ ಚಿತ್ರಗಳು ಗಡಿ ದಾಟಿ ಹೋಗುವ ಸಂಭ್ರಮ ಆಚರಿಸುತ್ತಿವೆ. ಇದಕ್ಕೆ, ಕಾರಣ ಚಂದ್ರ ಚಿತ್ರ ಎಂಬುದನ್ನು ಪ್ರೇಮ್ ನೆನಪಿಡುತ್ತಾರೋ ಇಲ್ಲವೋ, ಆದರೆ, ಅವರದ್ದೇ ಮಾತಿನ ಪ್ರಕಾರ, ಅಮಾವಾಸ್ಯೆ  ಕವಿದು, ಗ್ರಹಣಕ್ಕೀಡಾದ ಚಂದ್ರನ ಪರಿಣಾಮ ಇದು ಎಂಬುದನ್ನಂತೂ ಒಪ್ಪಿಕೊಳ್ಳಲೇಬೇಕು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.