ಅಸ್ಮಿತಾ ಎಂಬ ತ್ರಿಪುರಾಂತಕಿ

ನಟ ಶರಣ್ಗೆ ಹೊಸ ಶರಣಮ್ಮ ಸಿಕ್ಕಿದ್ದಾಳೆ. ಈಕೆ ನಮ್ಮೂರಿನ ಮಂದಾರ ಹೂವು ಅಲ್ಲ. ದೂರದಿಂದ ಬಂದ ಸುಂದರಿ. ಈ ಸುಂದರಿ ಗಂಡ ಶರಣ್! ಇತ್ತೀಚೆಗಷ್ಟೆ ಶುರುವಾದ 'ವಿ' ಚಿತ್ರದಲ್ಲಿ ಶರಣ್ಗೆ ಜೊತೆಯಾಗಿರುವ ಈಕೆಯ ಹೆಸರು ಅಸ್ಮಿತಾ ಸೂದ್. ಅಂದಹಾಗೆ ಈಕೆ ಖಳ ನಟ ಬಾಲಿವುಡ್ ಸೋನು ಸೂದ್ರ ರಿಲೇಟಿವ್ ಅಲ್ಲ ಬಿಡಿ. ಹುಟ್ಟಿದ್ದು ಹಿಮಾಚಲ ಪ್ರದೇಶದ ಶಿಮ್ಲಾ. ಓದಿದ್ದು ದೆಹಲಿ. ಅಭಿನಯಕ್ಕೆ ಮುಖ ಮಾಡಿದ್ದು ಬಾಂಬೆ ಹಾಗೂ ಹೈದರಬಾದ್ ಕಡೆಗೆ. ಈಗ ಕನ್ನಡಕ್ಕೆ ಹೊಸ ಪ್ರವೇಶ. ಅಲ್ಲಿಗೆ ಈಕೆ 'ತ್ರಿ'ಪುರ (ಬಾಲಿವುಡ್, ಟಾಲಿವುಡ್, ಸ್ಯಾಂಡಲ್ವುಡ್) ಸುಂದರಿ ಎನ್ನಬಹುದು.
'ಫೆಮಿನಾ ಮಿಸ್ ಇಂಡಿಯಾ- 2011'ರಲ್ಲಿ 20ನೇ ಸ್ಥಾನಕ್ಕೆ ತೃಪ್ತಿಪಟ್ಟಳು ಈಕೆ. ಏರ್ಟೆಲ್, ವೈಭವ್ ಜ್ಯುವೆಲ್ಲರಿ, ಎಸ್ಬಿಐ ಕ್ರೆಡಿಟ್ ಕಾರ್ಡ್, ಯೂನಿನಾರ್, ಕೊಕಾಕೋಲಾ, ಬಿಗ್ ಬಜಾರ್ ಸೇರಿದಂತೆ ಸಾಕಷ್ಟು ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದಾಳೆ. ಅಲ್ಲದೆ ಮೊದ ಮೊದಲು ಸೌಂದರ್ಯೋತ್ಪನ್ನಗಳ ಜಾಹೀರಾತುಗಳಲ್ಲೂ ಮಿಂಚಿದ್ದಾಳೆ.
ಈಕೆಯನ್ನು ಮೊದಲು ಗುರುತಿಸಿದ್ದು ತೆಲುಗು ಚಿತ್ರರಂಗ. 'ಜಾಲಿಡೇಸ್' ಖ್ಯಾತಿಯ ನಟ ವರುಣ್ ಸಂದೇಶ್ ಅಭಿನಯದ 'ಬ್ರಹ್ಮಿಗಾಡಿ ಕಥಾ' ಚಿತ್ರದಲ್ಲಿ ಮೊದಲ ಬಾರಿಗೆ ಕ್ಯಾಮೆರಾಕ್ಕೆ ಮುಖ ಮಾಡಿದ ಅಸ್ಮಿತಾ ಸೂದ್ ಆಗ ಭಾರಿ ಗಮನ ಸೆಳೆದಳು. ಅದಕ್ಕೆ ಕಾರಣ ಈಕೆಯ ಸೆಕ್ಸಿ ಅಪೀಲ್. ಕತ್ತಿಯಂಥ ತೀಕ್ಷ್ಣ ನೋಟದಿಂದಲೇ ಪಡ್ಡೆ ಹುಡುಗರ ಮನಸ್ಸಿಗೆ ಬಾಣ ಬಿಟ್ಟಾಕೆಯನ್ನು ಈಗ ಗಾಂಧಿನಗರ ಸ್ವಾಗತಿಸುತ್ತಿದೆ.
ಶರಣ್, ತಬಲನಾಣಿ ಅಭಿನಯದ, ಆನಂದ್ ಆಡಿಯೋ ಮೋಹನ್ ನಿರ್ಮಾಣದ 'ವಿ' ಸಿಂಬಲ್ ಚಿತ್ರದಲ್ಲಿ ಅಸ್ಮಿತಾ ಸೂದ್ ನಾಯಕಿ. ಈಗಾಗಲೇ ಎರಡ್ಮೂರು ತೆಲುಗು ಚಿತ್ರಗಳಲ್ಲಿ ಕಾಣಿಸಿಕೊಂಡ ಈಕೆಯನ್ನೂ ಗಾಸಿಪ್ಗಳು ಬಿಟ್ಟಿಲ್ಲ. 'ಇದು ನನ್ನ ಮೊದಲ ಕನ್ನಡ ಸಿನಿಮಾ. ಹೀಗಾಗಿ ಕಥೆಗೆ ಮಹತ್ವ ಕೊಟ್ಟು ಪಾತ್ರವನ್ನು ಒಪ್ಪಿಕೊಂಡಿದ್ದೇನೆ. ಕಥೆ ಕೇಳಿದೆ. ತುಂಬಾ ಚೆನ್ನಾಗಿದೆ ಅಂತನ್ನಿಸ್ತು. ಶರಣ್ರೊಂದಿಗೆ ಅಭಿನಯಿಸುವುದಕ್ಕೆ ಖುಷಿ ಇದೆ' ಎನ್ನುತ್ತಾರೆ ಅಸ್ಮಿತಾ.
- ಆರ್. ಕೇಶವಮೂರ್ತಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


