ಕಿಸ್‌ನಿಂದ ಪ್ರೆಗ್ನೆಂಟ್ ಆಗಲ್ಲ: ಬಿಗ್‌ಬಾಸ್ ಸ್ಪರ್ಧಿ

ಮುತ್ತಿನಿಂದ ಗರ್ಭ ಧರಿಸಲು ಸಾಧ್ಯವಿಲ್ಲ....
ಡಿಯಾಂಡ್ರಾ ಸೋರ್ಸೆ
ಡಿಯಾಂಡ್ರಾ ಸೋರ್ಸೆ

ಮುಂಬೈ: ಮುತ್ತಿನಿಂದ ಗರ್ಭ ಧರಿಸಲು ಸಾಧ್ಯವಿಲ್ಲ ಎಂದು ಮಾಡೆಲ್ ಡಿಯಾಂಡ್ರಾ ಸೋರ್ಸೆ ಅವರು ಹೇಳಿದ್ದಾರೆ.

ಕಲರ್ಸ್ ಚಾನಲ್‌ನ ಪ್ರಸಿದ್ಧ ಕಾರ್ಯಕ್ರಮ ಬಿಗ್ ಬಾಸ್ 8 ಆವೃತ್ತಿಯ ರಿಯಾಲಿಟಿ ಶೋನ ಅಭ್ಯರ್ಥಿಯಾಗಿದ್ದ 35 ವರ್ಷದ ಡಿಯಾಂಡ್ರಾ ಅವರು ಕಳೆದ ವಾರ ಹೊರಬಂದಿದ್ದಾರೆ.

ಡಿಯಾಂಡ್ರಾ ಅವರು ಹೊರ ಬಂದಿರುವುದಕ್ಕೆ ಕಾರಣ ಅವರು ಗರ್ಭಿಣಿಯಾಗಿದ್ದಾರೆ ಎಂಬ ವದಂತಿಗಳು ಹರಿದಾಡುತ್ತಿದ್ದು, ಈ ಬಗ್ಗೆ ಪ್ರತಿಕ್ರಿಯಿಸಿರುವ ಅವರು ನಾನು ಗರ್ಭಿಣಿಯಾಗಿಲ್ಲ. ಚುಂಬನದ ಮೂಲಕ  ಗರ್ಭ ಧರಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ರಿಯಾಲಿಟಿ ಶೋನಲ್ಲಿ ನನ್ನ ಆರೋಗ್ಯ ಹದಗೆಟ್ಟಿತ್ತು ಇದರಿಂದಾಗಿ ನನ್ನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದೆ ಅಷ್ಟೇ. ಸದ್ಯ ನಾನು ಆರೋಗ್ಯದಿಂದ ಇದ್ದೇನೆ. ಅಲ್ಲದೆ ಶೋನಲ್ಲಿ ನನ್ನ ಪ್ರತಿಸ್ಪರ್ಧಿ ಹಾಗೂ ನಟ ಗೌತಮ್ ಗುಲಾತಿ ಅವರೊಂದಿಗೆ ನಿಕಟ ಸಂಬಂಧ ಹೊಂದಿದ್ದೆ ಎಂಬುದೆಲ್ಲ ಗಾಳಿ ಸುದ್ದಿ ಎಂದು ಹೇಳಿದ್ದಾರೆ.

ರಿಯಾಲಿಟಿ ಶೋನಲ್ಲಿ ಪ್ರಬಲ ಸ್ಪರ್ಧಿಯಾಗಿದ್ದ ಡಿಯಾಂಡ್ರಾ ಅವರು ತಮ್ಮ ಆಕ್ರಮಣಕಾರಿ ಹಾಗೂ ಮನರಂಜನೆ ನೀಡುವುದರ ಮೂಲಕ ರಂಚಿಸುತ್ತಿದ್ದರು. ಅಲ್ಲದೆ ವಿಭಿನ್ನ ಹೇರ್‌ಸ್ಟೈಲ್ ಮೂಲಕ ಪ್ರಸಿದ್ಧಿ ಪಡೆದಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com