Mr and Mrs ರಾಮಾಚಾರಿ ಭರ್ಜರಿ ಕಲೆಕ್ಷನ್

ಸ್ಯಾಂಡಲ್‌ವುಡ್ ನಟ ಯಶ್ ಹಾಗೂ ರಾಧಿಕ...
Mr and Mrs ರಾಮಾಚಾರಿ ಚಿತ್ರದ ಸ್ಟಿಲ್
Mr and Mrs ರಾಮಾಚಾರಿ ಚಿತ್ರದ ಸ್ಟಿಲ್
Updated on

ಬೆಂಗಳೂರು: ಸ್ಯಾಂಡಲ್‌ವುಡ್ ನಟ ಯಶ್ ಹಾಗೂ ರಾಧಿಕ ಪಂಡಿತ್ ಅಭಿನಯದ Mr and Mrs ರಾಮಾಚಾರಿ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಕಲೆಕ್ಷನ್ ಮಾಡುತ್ತಿದೆ.

ಕಳೆದ ಗುರುವಾರ ರಿಲೀಸ್ ಚಿತ್ರ ಐದೇ ದಿನದಲ್ಲಿ ಬಾಕ್ಸ್ ಆಫೀಸ್‌ನಲ್ಲಿ 12 ಕೋಟಿ ಬಾಚಿದೆ. ಚಿತ್ರಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ದೊರಕಿದ್ದು, ಬಾಕ್ಸ್ ಆಫೀಸ್‌ನಲ್ಲಿ ಕೊಳ್ಳೆ ಹೊಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ.

ಕ್ರಿಸ್‌ಮಸ್ ಹಬ್ಬಕ್ಕೆ ತೆರೆಗೆ ಬಂದ ಚಿತ್ರ ಮೊದಲ ದಿನವೇ 3 ಕೋಟಿ ಗಳಿಸುವ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ದಾಖಲೇ ಬರೆದಿದೆ. ಯಶ್‌ರ ಈ ಹಿಂದಿನ ಯಾವ ಚಿತ್ರ ಮೊದಲ ದಿನವೇ ಮೂರು ಕೋಟಿ ಗಳಿಕೆ ಮಾಡಿರಲಿಲ್ಲ. ಯಶ್ ಅಭಿನಯದ ಸಾಲು ಸಾಲು ಚಿತ್ರಗಳು ಯಶಸ್ಸು ಗಳಿಸುವ ಮೂಲಕ ನಿರ್ಮಾಪಕರ ಜೇಬು ತುಂಬಿಸುತ್ತಿದೆ.

ಯಶ್ ಅಭಿನಯದ ಗಜಕೇಸರಿ ಇದೇ ವರ್ಷ ತೆರೆಗೆ ಬಂದಿದ್ದು, ಗಜಕೇಸರಿ ಚಿತ್ರ ಸಹ ಬಾಕ್ಸ್‌ಆಫೀಸ್ ಹಿಟ್ ಆಗಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com