

ಆಕಾಶಕ್ಕೆ ಏರಿ ಸಾಧನೆ ಮಾಡ್ತೀನಿ ಅಂತ ಅಭೂತಪೂರ್ವ ಭರವಸೆಯಲ್ಲಿ ಏಣಿ ಏರೋದು ಇರ್ತಾರೆ. ಅವರನ್ನು ನೋಡಿ. ಅವರು ಏರೇ ಬಿಟ್ರೆ ಹೇಗೆ? ಹೇಗಾದರೂ ಕಾಲೆಳೆಯಲೇಬೇಕಲ್ಲ ಎಂದು ಯೋಚಿಸುವವರು ಎಲ್ಲಾ ರಂಗದಲ್ಲೂ ಇರ್ತಾರೆ. ಶೈನ್ ಆಗೋರ್ನ ನೋಡಿ ಕರುಬುವವರಿಗೇನೂ ಕಡಿಮೆ ಇಲ್ಲ ಸ್ವಾಮಿ.
ಹೀಗಿರುವಾಗ ಜಗತ್ತಿನ ಕಣ್ಣನ್ನೇ ತನ್ನತ್ತ ಅಯಸ್ಕಾಂತದಂತೆ ತಿರುಗಿಸಿ ಕೊಂಡ ಐಶ್ವರ್ಯಳನ್ನು ಬಿಡ್ತಾರಾ? ಪಾಪ ಅತ್ತೆ ಜತೆ ಒಂದಿಷ್ಟು ಸ್ವಚ್ಛಂದವಾಗಿ ತಿರುಗೋಣ ಅಂತ ಹೋದರೆ ಈ ಸುದ್ದಿ ಶೂರರು ಗುಸು ಗುಸು-ಪಿಸುಪಿಸು ಶುರು ಮಾಡಿದ್ದಾರಲ್ಲ? ಆದರೆ ಅವರು ಹೋದದ್ದು ತಮ್ಮ ಹಾಗೂ ಮಾವನ ಚಿತ್ರಗಳ ಮೇಕರ್ ವಿಫುಲ್ ಶಾ ಅವರ ಮನೆಗೆ.
ಹೋಗಲಿ ಬಿಡಿ ಅಂದುಕೊಳ್ಳುವ ಬದಲು ಮುಂದಿನ ಚಿತ್ರಕ್ಕೆ ಅವಕಾಶ ಅರಸಿ ಹೋದರು ಅಂತಾರೆ. ಐಶ್ವರ್ಯ ಹಾಗೂ ಸೌಂದರ್ಯಗಳು ಮೇಳೈಸಿರುವ ಬಿಗ್ಬಿ ಸೊಸೆಯ ಬಗ್ಗಯೇ ಇಂಥ ಮಾತುಗಳು ಕೇಳಿ ಬರ್ತಿದೆ ಅಂದರೆ ಉಳಿದವರ ಪಾಡೇನು ಅಂತ ಯೋಚನೆ ಮಾಡಬೇಕಾದ್ದೆ ಅಲ್ವಾ. ಇನ್ನು ಖಾಲಿಪೀಲಿ ನಟ-ನಟಿಯರು ನಿರ್ದೇಶಕರ ಮನೆ ಬಾಗಿಲಲ್ಲಿ ನಿಂತಿದ್ದರೆ ಏನೆಲ್ಲ ಅಂತಿದ್ದರೋ.