ಮುಂದೆ ನೋಡಿ ಬಾಹುಬಲಿ 2, 3, 4!

'ಬಾಹುಬಲಿ-2' 2016ರಲ್ಲಿ ಬಿಡುಗಡೆ ಆಗುತ್ತೆ ಅನ್ನೋದು ಎಲ್ಲರಿಗೂ ಗೊತ್ತು. ಆದರೆ, ಈ ಸರಣಿ ಹೀಗೆಯೇ ಮುಂದುವರಿಯುತ್ತಾ? ಅಂಥದ್ದೊಂದು ಆಲೋಚನೆಯೂ...
ಬಾಹುಬಲಿ ಚಿತ್ರದ ಸ್ಟಿಲ್
ಬಾಹುಬಲಿ ಚಿತ್ರದ ಸ್ಟಿಲ್

'ಬಾಹುಬಲಿ-2' 2016ರಲ್ಲಿ ಬಿಡುಗಡೆ ಆಗುತ್ತೆ ಅನ್ನೋದು ಎಲ್ಲರಿಗೂ ಗೊತ್ತು. ಆದರೆ, ಈ ಸರಣಿ ಹೀಗೆಯೇ ಮುಂದುವರಿಯುತ್ತಾ? ಅಂಥದ್ದೊಂದು ಆಲೋಚನೆಯೂ ರಾಜ್‌ಮೌಳಿಗೆ ಇದೆ ಎಂಬ ಗುಸುಗುಸು ಈಗ ಎಲ್ಲೆಡೆ ಕೇಳಿಬರುತ್ತಿದೆ.

ಮುಂದೆ ಬಾಹುಬಲಿ-2, 3,4 ಬಂದರೂ ಅಚ್ಚರಿ ಇಲ್ವಂತೆ. ಹೀಗೆ ವಾದಿಸುವವರ ತಂಡ ಚಿತ್ರದಲ್ಲೊಂದು ಆಧಾರವನ್ನು ಎತ್ತಿ ತೋರಿಸುತ್ತಿದೆ. ಶಿವುಡು ಮುಖವಾಡವನ್ನು ಕೊಡಲು ಅವಂತಿಕಾಳನ್ನು ಹುಡುಕಿಕೊಂಡು ಬಂದಾಗ ಲೈಟಾಗಿ ಒಂದು ಕಾಳಗವೂ ನಡೆಯುತ್ತದೆ. ನಂತರ ಶಿವುಡುವಿನ ಅಸಾಮಾನ್ಯ ದೈಹಿಕ ಸಾಮರ್ಥ್ಯಕ್ಕೆ ಅವಂತಿಕಾ ಶರಣಾಗುತ್ತಾಳೆ. ಅಲ್ಲಿ ಪ್ರೀಯಿಯೂ ಮೊಳಕೆ ಏಳುತ್ತದೆ. 'ಪಚ್ಚ ಬೊಟ್ಟಿಸಿನಾ, ಪಿಲ್ಲಗಾಡ ನೀತೋ ಪಚ್ಚಾ ಪ್ರಾಯಲೇ ಪಂಚು ಕುಂಟಾನು...' ಅಂತ ಅವಂತಿಕಾ ಪ್ರೇಮರಾಗದಲ್ಲಿ ಹಾಡುತ್ತಾಳೆ. ಅಂದರೆ, ಹಚ್ಚೆ ಹಾಕಿದ ನಿನ್ನೊಂದಿಗೆ ನನ್ನ ಹದಿಹರೆಯವನ್ನು ಹಂಚಿಕೊಳ್ಳುತ್ತೇನೆ ಅನ್ನೋದು ಅವಂತಿಕಾಳ ಅಂತರಂಗದ ಮಾತು. ಈ ಹಾಡಿನೊಂದಿಗೆ ಇಬ್ಬರೂ ಲೈಂಗಿಕವಾಗಿ ಬೆರೆಯುತ್ತಾರೆ. ಮುಂದೆ ಈತನೇ ಮರಿ ಬಾಹುಬಲಿ! ಈ ವಿಚಾರ ಎರಡನೇ ಭಾಗದಲ್ಲಿ ವಿಸ್ತಾರವಾಗಿ ಇದೆಯಂತೆ.

ಆ ಮರಿ ಬಾಹುಬಲಿಯ ಕಥೆಯನ್ನೇ ಮುಂದುವರಿಸಿದರೆ ಇದು ಒಳ್ಳೆಯ ಸರಣಿಯೂ ಆಗಬಲ್ಲದು ಎನ್ನುವುದು ಟಾಲಿವುಡ್ ಪಂಡಿತರ ಲೆಕ್ಕಾಚಾರ. ಹಾಗೆ ಆಗುತ್ತದಾ? ಬಹಶಃ ರಾಜ್‌ಮೌಳಿ ಅವರಿಗೆ ಮಾತ್ರ ಗೊತ್ತು!

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com