ಹಾರರ್ ಸಿನೆಮಾದಲ್ಲಿ ಪ್ರಿಯಾಂಕ ಉಪೇಂದ್ರ

ಉಪ್ಪಿ೨ ಸಿನೆಮಾದ ನಿರ್ಮಾಣ ಕಾರ್ಯವನ್ನು ಸಂಪೂರ್ಣಗೊಳಿಸಿರುವ ಪ್ರಿಯಾಂಕ ಉಪೇಂದ್ರ ಈಗ ತಮ್ಮ ನೆಚ್ಚಿನ ನಟನೆಯ ಕಾರ್ಯಕ್ಕೆ ಹಿಂದಿರುಗಿದ್ದಾರೆ.
ನಟಿ ಪ್ರಿಯಾಂಕಾ ಉಪೇಂದ್ರ
ನಟಿ ಪ್ರಿಯಾಂಕಾ ಉಪೇಂದ್ರ
ಬೆಂಗಳೂರು: ಉಪ್ಪಿ೨ ಸಿನೆಮಾದ ನಿರ್ಮಾಣ ಕಾರ್ಯವನ್ನು ಸಂಪೂರ್ಣಗೊಳಿಸಿರುವ ಪ್ರಿಯಾಂಕ ಉಪೇಂದ್ರ ಈಗ ತಮ್ಮ ನೆಚ್ಚಿನ ನಟನೆಯ ಕಾರ್ಯಕ್ಕೆ ಹಿಂದಿರುಗಿದ್ದಾರೆ. ಲೋಹಿತ್ ಎಚ್ ನಿರ್ದೇಶನದ 'ಮಮ್ಮಿ- ಸೇವ್ ಮಿ' ಚಲನಚಿತ್ರದಲ್ಲಿ ಅವರು ಪ್ರಮುಖ ನಟಿ. 
ಪ್ರಿಯಾಂಕ ಅವರ ಕಳೆದ ವರ್ಷದ ಹುಟ್ಟುಹಬ್ಬದ ದಿನದಂದೆ ಈ ಸಿನೆಮಾದ ಮಹೂರ್ತ ನಡೆದಿದ್ದರೂ ಸೆಪ್ಟಂಬರ್ ೯ ರಿಂದ ಸಿನೆಮಾ ಚಿತ್ರೀಕರಣ ಪ್ರಾರಂಭವಾಗಲಿದೆ. "ನಾನು ನನ್ನ ಇತರ ಸಿನೆಮಾಗಳೊಂದಿಗೆ 'ಮಮ್ಮಿ..' ಸಿನೆಮಾಗೆ ಕೂಡ ಒಪ್ಪಿಕೊಂಡಿದ್ದೆ. ನಾನು ವಾಣಿಜ್ಯಾತ್ಮಕ ಮತ್ತು ಗಂಭೀರ ಸಿನೆಮಾಗಳ ಭಾಗವಾಗಿದ್ದೇನೆ, ಆದರೆ 'ಮಮ್ಮಿ ...' ಬೇರೆಯದೇ ರೀತಿಯ ಸಿನೆಮಾ" ಎನ್ನುತ್ತಾರೆ ಪ್ರಿಯಾಂಕ.
ವರಮಹಾಲಕ್ಷಿ ಹಬ್ಬಕ್ಕೆ ಸಿನೆಮಾದ ಮೊದಲ ನೋಟ ಲಭ್ಯವಾಗಲಿದೆಯಂತೆ. "ಹಲವಾರು ಹಾರರ್ ಸಿನೆಮಾಗಳು ಈಗಾಗಲೇ ಬಹಳಷ್ಟು ಬಂದಿದ್ದರೂ 'ಮಮ್ಮಿ.... ' ಸಿನೆಮಾದಲ್ಲಿ ಭಾವನೆಗಳಿಗೆ ಅವಕಾಶ ಇದೆ. ನಾನು ಸಿನೆಮಾದಲ್ಲಿ ಏಳು ತಿಂಗಳ ಗರ್ಭಿಣಿ ಪಾತ್ರವನ್ನು ನಿರ್ವಹಿಸಲಿದ್ದೇನೆ" ಎನ್ನುತ್ತಾರೆ ಅವರು. 
ಲೋಹಿತ್ ಎಚ್ ಅವರಿಗೆ ಇದು ಚೊಚ್ಚಲ ಸಿನೆಮಾ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com