ತೆಲುಗು ಚಿತ್ರರಂಗದಲ್ಲಿ ಶತದಿನೋತ್ಸವ ಆಚರಣೆ ಹೆಚ್ಚು ಚಾಲ್ತಿಯಲ್ಲಿದ್ದು, ಇದನ್ನು ತೆಲುಗಿನ ಖ್ಯಾತ ನಿರ್ದೇಶಕ ಎಸ್.ಎಸ್ ರಾಜಮೌಳಿ ವಿರೋಧಿಸಿದ್ದಾರೆ.
ತಮ್ಮ ಸಿನಿಮಾ ನೂರು ದಿನ ಪೂರೈಸಿದೆ ಎಂದು ಹೇಳಿಕೊಂಡು ತಿರುಗುವ ಜಾಯಮಾನ ನನ್ನದ್ದಲ್ಲ. ಬಾಹುಬಲಿ ಚಿತ್ರಕ್ಕಾಗಿ ನಾನು ಯಾವುದೇ ಚಿತ್ರಮಂದಿರಗಳನ್ನು ಬ್ಲಾಕ್ ಮಾಡಿಲ್ಲ ಎಂದು ಹೇಳಿದ್ದಾರೆ.
ಮೈಕ್ರೋ ಬ್ಲಾಗಿಂಕ್ ಟ್ವೀಟರ್ ನಲ್ಲಿ ಬಾಹುಬಲಿ ಚಿತ್ರ 50 ದಿನ, 100 ದಿನ, 175ನೇ ದಿನ ಓಡುತ್ತಿದೆ ಎಂಬ ಟ್ವೀಟ್ ಗಳು ಹರಿದಾಡುತ್ತಿದ್ದು, ಇದ್ಯಾವುದೂ ನಿಜವಲ್ಲ. ಕೆಲ ಅಭಿಮಾನಿಗಳು ಈ ರೀತಿ ಟ್ವೀಟ್ ಗಳನ್ನು ಮಾಡುತ್ತಿರುವುದು ಸರಿಯಲ್ಲ ಎಂದರು.
ಬಾಹುಬಲಿ ಚಿತ್ರಕ್ಕೆ ಪ್ರೇಕ್ಷಕರು ಸ್ಮರಣೀಯ ವಿಜಯವನ್ನು ನೀಡಿದ್ದಾರೆ. ಈ ವಿಜಯವನ್ನು ನಾನು ನನ್ನ ಜೀವನ ಪರ್ಯಾಂತ ನೆನಪಿನಲ್ಲಿಟ್ಟುಕೊಳ್ಳುತ್ತೇನೆ. ಇದಕ್ಕಿಂತ ಇನ್ನೇನು ಬೇಕು? ಫೇಕ್ ರೆಕಾರ್ಡ್ ನಂತಹ ಸಮಸ್ಯೆಗಳು ನಮ್ಮ ಉದ್ಯಮವನ್ನು ಬಾಧಿಸುತ್ತಿದೆ. ಇದನ್ನು ನಿಲ್ಲಿಸಲು ಇದು ಸರಿಯಾದ ಸಮಯ ಎಂದು ರಾಜಮೌಳಿ ಹೇಳಿದ್ದಾರೆ.
ಬಾಹುಬಲಿ ಚಿತ್ರದ ನಂತರ ಬಿಡುಗಡೆಯಾದ ಮಹೇಶ್ ಬಾಬು ನಟನೆಯ ಶ್ರೀಮಂತಡು ಚಿತ್ರ ಗಳಿಕೆಯು ಉತ್ತಮವಾಗಿದೆ. ಹೀಗಾಗಿ ನಾವು ಫೇಕ್ ರೆಕಾರ್ಡ್ ನಿರ್ಮಿಸುವ ಸಲುವಾಗಿ ಯಾವುದೇ ಚಿತ್ರಮಂದಿರಗಳನ್ನು ಬ್ಲಾಕ್ ಮಾಡಿಲ್ಲ ಎಂದು ಹೇಳಿದ್ದಾರೆ.