ವಿಕಿ ಡೋನರ್ ತೆಲುಗು ರೀಮೇಕ್ ನಲ್ಲಿ ಪಲ್ಲವಿ ಸುಭಾಶ್

ಹಿಂದಿಯಲ್ಲಿ ಮಹಾಭಾರತ, ಚಕ್ರವರ್ತಿ ಅಶೋಕ ಸಾಮ್ರಾಟ್ ನಂತಹ ಧಾರಾವಾಹಿಗಳಲ್ಲಿ ನಟಿಸಿರುವ ಪಲ್ಲವಿ ಸುಭಾಶ್ ತೆಲುಗಿಗೆ ರೀಮೇಕ್ ಆಗುತ್ತಿರುವ ವಿಕಿ ಡೋನರ್ ರೀಮೇಕ್ ನಲ್ಲಿ ನಟಿಸುತ್ತಿದ್ದಾರೆ.
ಪಲ್ಲವಿ ಸುಭಾಶ್
ಪಲ್ಲವಿ ಸುಭಾಶ್

ಚೆನ್ನೈ: ಹಿಂದಿಯಲ್ಲಿ ಮಹಾಭಾರತ, ಚಕ್ರವರ್ತಿ ಅಶೋಕ ಸಾಮ್ರಾಟ್ ನಂತಹ ಧಾರಾವಾಹಿಗಳಲ್ಲಿ ನಟಿಸಿರುವ ಪಲ್ಲವಿ ಸುಭಾಶ್ ತೆಲುಗಿಗೆ ರೀಮೇಕ್ ಆಗುತ್ತಿರುವ ವಿಕಿ ಡೋನರ್ ರೀಮೇಕ್ ನಲ್ಲಿ ನಟಿಸುತ್ತಿದ್ದಾರೆ.
ಆಯುಷ್ಮಾನ್ ಖುರಾನಾ ಹಾಗೂ ಯಾಮಿ ಗೌತಮ್ ನಟಿಸಿದ್ದ ವಿಕಿ ಡೋನರ್ ಚಿತ್ರವನ್ನು ತೆಲುಗು ನಟ ಸುಮಂತ್ ನಿರ್ಮಾಣ ಮಾಡುತ್ತಿದ್ದು, ನಾಯಕ ನಟನಾಗಿಯೂ ನಟಿಸುತ್ತಿದ್ದಾರೆ. ವಿಕಿ ಡೋನರ್ ನಲ್ಲಿ ಯಾಮಿ ಗೌತಮ್ ನಿರ್ವಹಿಸಿದ್ದ ಪಾತ್ರವನ್ನು ರೀಮೇಕ್ ಚಿತ್ರದಲ್ಲಿ ಪಲ್ಲವಿ ನಿರ್ವಹಿಸುತ್ತಿದ್ದಾರೆ.
ರಿಮೇಕ್ ಚಿತ್ರವನ್ನು ಮಲ್ಲಿಕ್ ರಾಮ್ ನಿರ್ದೇಶಿಸುತ್ತಿದ್ದು ಮೊದಲ ಬಾರಿಗೆ ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ. ವೀರ್ಯ ದಾನದ ಕಥಾವಸ್ತು ಹೊಂದಿರುವ ವಿಕಿ ಡೋನರ್ ಚಿತ್ರವನ್ನು ರೀಮೇಕ್ ಮಾಡುವುದಾಗಿ ಮಧುರಾ ಶ್ರೀಧರ್ 2013 ರಲ್ಲೇ ಘೋಶಿಸಿದ್ದರಾದರೂ ಕಾರಣಾಂತರಗಳಿಂದ ಅವರ ನಿರ್ಮಾಣದಲ್ಲಿ ಚಿತ್ರ ಬಿಡುಗಡೆಯಾಗಲಿಲ್ಲ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com