

ಚೆನ್ನೈ: ನಾನು ಸಾವನ್ನಪ್ಪಿರುವುದಾಗಿ ಬಂದಿರುವ ಸುದ್ದಿಗಳೆಲ್ಲವು ಸುಳ್ಳಾಗಿದ್ದು, ನಾನು ಆರೋಗ್ಯವಾಗಿದ್ದೇನೆ ಎಂದು ದಕ್ಷಿಣ ಭಾರತದ ಖ್ಯಾತ ಪೋಷಕ ನಟಿ ಮನೋರಮಾ ಹೇಳಿದ್ದಾರೆ.
ಈಗಾಗಲೇ ನನ್ನ ಆರೋಗ್ಯ ಸ್ಥಿರವಾಗಿದ್ದು, ಹೊಸದಾದ ಮೂರು ಸಿನಿಮಾಗಳಲ್ಲಿ ನಟಿಸಲು ಮತ್ತೆ ನನ್ನ ಕೆಲಸದಲ್ಲಿ ಹಾಜರಾಗಲಿದ್ದೇನೆ ಎಂದು ಮನೋರಮಾ ಹೇಳಿದ್ದಾರೆ.
ಕೆಲವು ತಿಂಗಳ ಹಿಂದಷ್ಟೇ ನಟಿ ಮನೋರಮಾ ಅವರು ತೀವ್ರ ಅಸ್ವಸ್ಥಗೊಂಡು ಚೆನ್ನೈನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಮನೋರಮಾ ಸಾವನ್ನಪ್ಪಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ವದಂತಿ ಸೃಷ್ಟಿಸಿದ್ದರು.
ಈ ವದಂತಿಗೆ ಇಂದು ಪ್ರತಿಕ್ರಿಯೆ ನೀಡಿರುವ ಮನೋರಮಾ ಅವರು, ನಾನು ಆರೋಗ್ಯವಾಗಿದ್ದೇನೆ. ಆರೋಗ್ಯದಲ್ಲಿ ಯಾವುದೇ ತೊಂದರೆಗಳಿಲ್ಲ. ನಾನು ಸಾವನ್ನಪ್ಪಿರುವ ಕುರಿತ ವದಂತಿಗಳನ್ನು ನಂಬಬೇಡಿ, ಇನ್ನು ಕೆಲವೇ ದಿನಗಳಲ್ಲಿ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದೇನೆ ಎಂದು ಹೇಳಿದ್ದಾರೆ.