ಮಾರ್ಚ್‍ನಲ್ಲಿ 'ಗೋವಾ' ತೆರೆಗೆ

ಶರ್ಮಿಳಾಮಾಂಡ್ರೆ
ಶರ್ಮಿಳಾಮಾಂಡ್ರೆ

ಶಂಕರ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಶಂಕರ್‍ಗೌಡ, ಸಿ.ಎಂ.ಆರ್ ಶಂಕರ್‍ರೆಡ್ಡಿ ಹಾಗೂ ರಜತ್ ಮಂಜುನಾಥ್ ಅವರು ನಿರ್ಮಿಸಿರುವ `ಗೋವಾ’ ಚಿತ್ರವನ್ನು ವೀಕ್ಷಿಸಿದ ಪ್ರಾದೇಶಿಕ ಸೆನ್ಸಾರ್ ಮಂಡಳಿ ಯು/ಎ ಅರ್ಹತಾಪತ್ರವನ್ನು ನೀಡಿದೆ. ಚಿತ್ರ ಮಾರ್ಚ್‍ನಲ್ಲಿ ರಾಜ್ಯಾದ್ಯಂತ ಬಿಡುಗಡೆಯಗುತ್ತಿದೆ.

ಶರ್ಮಿಳಾ ಮಾಂಡ್ರೆ ಅವರು 'ಗೋವಾ' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ರೀ ಎಂಟ್ರಿ ಕೊಟ್ಟಿದ್ದು, ಕೋಮಲ್ ಮುಖ್ಯ ಭೂಮಿಕೆಯಲ್ಲಿರುವ ಈ ಚಿತ್ರದಲ್ಲಿ ಹಾಟ್‌ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಶರ್ಮಿಳಾ ಹಾಟ್‌ ಅವತಾರ ನೋಡಲು ಚಿತ್ರದ ಬಿಡುಗಡೆಯಾಗುವವರೆಗೆ ಕಾಯಬೇಕಾಗಿದೆ.

ಸೂರ್ಯ ಅವರು ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿರುವ ಈ ಚಿತ್ರದ ತಾರಾಬಳಗದಲ್ಲಿ ಕೋಮಲ್, ತರುಣ್‍ಚಂದ್ರ, ಶ್ರೀಕಾಂತ್, ಶರ್ಮಿಳಾಮಾಂಡ್ರೆ, ರಚಲ್, ಸೋನುಗೌಡ, ಅಶೋಕ್, ಶೋಭ್‍ರಾಜ್, ರಮೇಶ್‍ಭಟ್, ಬುಲೆಟ್‍ಪ್ರಕಾಶ್, ಧರ್ಮ, ಕರಿಸುಬ್ಬು ಮುಂತಾದವರಿದ್ದಾರೆ.  

ಅರ್ಜುನ್‍ಜನ್ಯ ಸಂಗೀತವಿರುವ ಈ ಚಿತ್ರಕ್ಕೆ ರಾಜೇಶ್ ಅವರ ಛಾಯಾಗ್ರಹಣವಿದೆ. ದೀಪು.ಎಸ್.ಕುಮಾರ್ ಸಂಕಲನ, ಮುರಳಿ,  ನಿಕ್ಸನ್ ನೃತ್ಯ ನಿರ್ದೇಶನ, ಕೌರವ ವೆಂಕಟೇಶ್ ಸಾಹಸ ನಿರ್ದೆಶನವಿರುವ ಈ ಚಿತ್ರಕ್ಕೆ ಆನಂದ್ ಕಲಾ ನಿರ್ದೇಶನವಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com