ನಟಿ ಸಂಜನಾಗಾಗಿ ಮೂವರ ಕಾದಾಟ

ಗಂಡ ಹೆಂಡತಿ ಚಿತ್ರ ಖ್ಯಾತಿ ಕನ್ನಡ ನಟಿ ಸಂಜನಾಗಾಗಿ ಮೂವರು ಕಾದಾಟಕ್ಕೆ...
ನಟಿ ಸಂಜನಾ
ನಟಿ ಸಂಜನಾ

ಗಂಡ ಹೆಂಡತಿ ಚಿತ್ರ ಖ್ಯಾತಿ ಕನ್ನಡ ನಟಿ ಸಂಜನಾಗಾಗಿ ಮೂವರು ಕಾದಾಟಕ್ಕೆ ಸಿದ್ಧರಾಗಿದ್ದಾರೆ.

ಇದೇನಪ್ಪಾ, ಸಂಜನಾಗಾಗಿ ಮೂವರ ಕಾದಾಟಾನಾ? ಎಂದು ಗಾಬರಿಯಾಗಬೇಕಿಲ್ಲ. ಏಕೆಂದರೆ ಸಂಜನಾಗಾಗಿ ಮೂವರು ಕಾದಾಡುತ್ತಿರುವುದು ಚಿತ್ರದಲ್ಲಿ.

ಹೌದು, ಸದ್ಯಕ್ಕೆ ಹೈದ್ರಾಬಾದ್‌ನಲ್ಲಿ ತೆಲುಗು ಚಿತ್ರ 'ಸರದ' ಚಿತ್ರ ಶೂಟಿಂಗ್‌ನಲ್ಲಿ ಬ್ಯುಸಿಯಾಗಿರುವ ಸಂಜನಾಗೆ ಮೂವರು ನಾಯಕರಂತೆ. ಈ ಚಿತ್ರದಲ್ಲಿ ಮೂವರು ನಾಯಕರ ಜೋಡಿಯಾಗಿ ಸಂಜನಾ ಅಭಿನಯಿಸುತ್ತಿದ್ದು, ಚಿತ್ರ ರಸಿಕರ ಗಮನ ಸೆಳೆಯುವಂತೆ ಪಾತ್ರ ಮೂಡಿಬರುತ್ತಿದೆಯಂತೆ.

ಕನ್ನಡ, ತಮಿಳು, ಮಲೆಯಾಳಂ ಕ್ಯಾಮೆರಾಗಳಿಗೂ ಮುಖ ತೋರಿಸಿದ ಸಂಜನಾ ಸದ್ಯಕ್ಕೆ ತೆಲುಗು ಚಿತ್ರಗಳ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ.

ಅಲ್ಲದೆ, ಕನ್ನಡ ಅಭಿಮಾನಿಗಳಿಗೂ ನಿರಾಶೆ ಮಾಡದೇ ನಟ ಆದಿತ್ಯ ಜೊತೆ ರೆಬೆಲ್ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಮಾಡೆಲಿಂಗ್ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಸಂಜನಾ 2006ರಲ್ಲಿ ಸಿನಿ ಪಯಣ ಆರಂಭಿಸಿದರು. ಗಂಡ ಹೆಂಡತಿ ಚಿತ್ರದಿಂದ ಹೆಚ್ಚು ವಿವಾದಕ್ಕೆ ಗುರಿಯಾದ ಸಂಜನಾ ಅನ್ಯ ಭಾಷೆಗಳತ್ತಾ ಮುಖ ಮಾಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com