ಶಂಕರ್ 'ಐ' ಸಿನಿಮಾಕ್ಕೆ ಮದ್ರಾಸ್ 'ಹೈ' ಸ್ಟೇ

ಕಾಲಿವುಡ್‌ ನಟ ವಿಕ್ರಮ್‌ರ ಬಹುನಿರೀಕ್ಷಿತ...
ಐ ಚಿತ್ರದ ಸ್ಟಿಲ್
ಐ ಚಿತ್ರದ ಸ್ಟಿಲ್

ಚೆನ್ನೈ: ಕಾಲಿವುಡ್‌ ನಟ ವಿಕ್ರಮ್‌ರ ಬಹುನಿರೀಕ್ಷಿತ 'ಐ' ಚಿತ್ರ ಇದೇ ಸಂಕ್ರಾಂತಿಗೆ ಬಿಡುಗಡೆಯಾಗಲಿತ್ತು. ಆದರೆ ಈ ಚಿತ್ರದ ಬಿಡುಗಡೆಗೆ ಮದ್ರಾಸ್ ಹೈ ಕೋರ್ಟ್ ಸ್ಟೇ ಆರ್ಡರ್ ನೀಡಿದೆ.

ಹೈ ಕೋರ್ಟ್ ಸ್ಟೇ ಆರ್ಡರ್‌ನಿಂದಾಗಿ ಸಂಕ್ರಾಂತಿಗೆ ತೆರೆಯ ಮೇಲೆ ಬರಬೇಕಿದ್ದ ಚಿತ್ರದ ಬಿಡುಗಡೆ ಮುಂದಕ್ಕೆ ಹೋಗುವ ಸಾಧ್ಯತೆ ಇದೆ.  ನಿರ್ದೇಶನದಲ್ಲಿ ಮೂಡಿಬಂದಿರುವ ಐ ಚಿತ್ರ ಬಾರಿ ಕುತೂಹಲ ಕೆರಳಿಸಿತ್ತು.

ಪಿಕ್ಚರ್ಸ್ ಮೀಡಿಯ ಸಂಸ್ಧೆಗೆ ಸುಮಾರು 19 ಕೋಟಿ ರುಪಾಯಿಯನ್ನು ಐ ಚಿತ್ರ ನಿರ್ಮಾಪಕ ಆಸ್ಕರ್ ಫಿಲಿಮ್ಸ್‌ನ ವಿ. ರವಿಚಂದ್ರನ್ ನೀಡಬೇಕಿತ್ತು. ಆದರೆ ನಿಗದಿತ ಸಮಯಕ್ಕೆ ಹಣ ನೀಡದ ಹಿನ್ನೆಲೆಯಲ್ಲಿ ಪಿಕ್ಚರ್ಸ್ ಮೀಡಿಯ ಮದ್ರಾಸ್ ಹೈಕೋರ್ಟ್‌ನಿಂದ ಚಿತ್ರದ ಬಿಡುಗಡೆಗೆ ಸ್ಟೇ ತಂದಿದೆ.

ಅದರಂತೆ ಚಿತ್ರಕ್ಕೆ  ಜನವರಿ 30ರವರೆಗೆ ಹೈಕೋರ್ಟ್ ಸ್ಟೇ ನೀಡಿದೆ. ಇದರಿಂದಾಗಿ ಜನವರಿ 14ಕ್ಕೆ ಬಿಡುಗಡೆಯಾಗಬೇಕಿದ್ದ ಚಿತ್ರ ಇನ್ನೂ ಮೂರು ವಾರಗಳು ಮುಂದಕ್ಕೆ ಹೋಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com