

ಸ್ಯಾಂಡಲ್‌ವುಡ್ ಕನಸುಗಾರ ಕ್ರೇಜಿಸ್ಟಾರ್ ರವಿಚಂದ್ರನ್ ನಿರ್ದೇಶನದ ಹಾಗೂ ಅಭಿನಯದ ಅಪೂರ್ವ ಚಿತ್ರದ ಎಕ್ಸ್‌ಕ್ಲ್ಯೂಸಿವ್ ಫೋಟೊಗಳು ಇಲ್ಲಿವೆ.
ರವಿಚಂದ್ರನ್‌ರ ಕ್ರಿಯಾಶೀಲತೆಗೆ ಕನ್ನಡಿ ಹಿಡಿಯುವಂತಿವೆ ಅಪೂರ್ವ ಚಿತ್ರದ ಫೋಟೊಗಳಿವೆ. ಪ್ರತಿಯೊಂದು ಫೋಟೊಗಳಲ್ಲಿಯೂ ರವಿಚಂದ್ರನ್ ಬರೆದ ಸಾಲುಗಳಿವೆ. ಪ್ರತಿ ಸಾಲುಗಳು ಪ್ರೀತಿಯ ತುಡಿತವನ್ನು ಕಟ್ಟಿಕೊಡುತ್ತವೆ.
ಅಪೂರ್ವ ಒಂದು ಪ್ರಯೋಗಾತ್ಮಕ ಚಿತ್ರವಾಗಿದೆ. ಚಿತ್ರದ ಬಹುತೇಕ ಭಾಗ ಒಂದು ಲಿಫ್ಟ್‌ನೊಳಗೆ ನಡೆಯುತ್ತದಂತೆ. ಈ ಚಿತ್ರದಲ್ಲಿ ರವಿಚಂದ್ರನ್ 61 ವರ್ಷದ ವೃದ್ಧನಾಗಿ ಕಾಣಿಸಿಕೊಂಡಿದ್ದಾರೆ. ನವನಟಿ ಅಪೂರ್ವ 19ರ ಹರೆಯದ ಹುಡುಗಿಯಾಗಿ ಕಾಣಿಸಿಕೊಂಡಿದ್ದು, ಇಬ್ಬರ ನಡುವಿನ ಕೆಮಿಸ್ಟ್ರಿ ಸಖತ್ತಾಗಿದೆ.