ಕುನಾಲ್ ಜತೆ ಸೋಹಾ ಅಲಿ ಖಾನ್ ವಿವಾಹ

ಮಾಜಿ ಕ್ರಿಕೆಟಿಗ ಮನ್ಸೂರ್ ಅಲಿ ಖಾನ್ ಪೌಟೌಡಿ ಮತ್ತು ನಟಿ ಶರ್ಮಿಳಾ ಟಾಗೋರ್ ಪುತ್ರಿ, ನಟ ಸೈಫ್ ಅಲಿ ಖಾನ್ ...
ಸೋಹಾ ಅಲಿ ಖಾನ್ - ಕುನಾಲ್ ಖೇಮು
ಸೋಹಾ ಅಲಿ ಖಾನ್ - ಕುನಾಲ್ ಖೇಮು

ನವದೆಹಲಿ: ಮಾಜಿ ಕ್ರಿಕೆಟಿಗ ಮನ್ಸೂರ್ ಅಲಿ ಖಾನ್ ಪೌಟೌಡಿ ಮತ್ತು ನಟಿ ಶರ್ಮಿಳಾ ಟಾಗೋರ್ ಪುತ್ರಿ, ನಟ ಸೈಫ್ ಅಲಿ ಖಾನ್ ಸಹೋದರಿ ನಟಿ ಸೋಹಾ ಅಲಿ ಖಾನ್ -ಬಾಲಿವುಡ್ ನಟ ಕುನಾಲ್ ಖೇಮು ಅವರ ವಿವಾಹವು ಜ.25ಕ್ಕೆ ನಡೆಯಿತು.

ಇದು ರಿಜಿಸ್ಟರ್ ವಿವಾಹವಾಗಿದ್ದು ಕುಟುಂಬದ ಸದಸ್ಯರು ಹಾಗು ಆಪ್ತರು ಮಾತ್ರ ಈ ವಿವಾಹದಲ್ಲಿ ಭಾಗಿಯಾಗಿದ್ದರು.

ವಿವಾಹ ವೇಳೆ ಗೋಲ್ಡನ್ ಮತ್ತು ಆರೆಂಜ್ ಲೆಹಂಗಾ ಧರಿಸಿ ಸೋಹಾ ಆಲಿ ಖಾನ್ ಮಿಂಚಿದರೆ ಕುಲಾಲ್ ಖೇಮು ಕ್ರೀಮ್ ಬಣ್ಣದ ಶೆರ್ವಾನಿ ತೊಟ್ಟಿದ್ದರು.

ಸಿನಿಮಾ ಶೂಟಿಂಗ್ ವೇಳೆ ಪರಿಚಯವಾಗಿದ್ದ ಈ ಜೋಡಿಯ ಸ್ನೇಹ ಪ್ರೇಮಕ್ಕೆ ತಿರುಗಿದ್ದು ಕಳೆದ ವರ್ಷ ಪ್ಯಾರೀಸ್‌ನಲ್ಲಿ ವಿವಾಹ ನಿಶ್ಚಯವಾಗಿತ್ತು

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com