

ಮುಂಬೈ: ಪ್ರಾದೇಶಿಕ ಸಿನೆಮಾಗಳ ವಿಷಯ ಮತ್ತು ಹೂರಣ ಹಿಂದಿ ಸಿನೆಮಾಗಳಿಗಿಂತಲೂ ಉತ್ತಮ ಎಂದು ಅಭಿಪ್ರಾಯಪಟ್ಟಿದ್ದಾರೆ ಬಾಲಿವುಡ್ ಖ್ಯಾತ ನಟ ಅನಿಲ್ ಕಪೂರ್.
"ಪ್ರಾದೇಶಿಕ ಸಿನೆಮಾಗಳ ಹೂರಣ ಹಿಂದಿ ಸಿನೆಮಾಗಳಿಗಿಂತಲೂ ಉತ್ತಮ. ಇಂದು ನಾನು ನೋಡಿರುವ ಮತ್ತು ನಾನು ಕೇಳಿರುವ ಪ್ರಾದೇಶಿಕ ಸಿನೆಮಾಗಳ ವಿಷಯ ಮತ್ತು ವಸ್ತು ಅತ್ಯುತ್ತಮವಾಗಿರುತ್ತದೆ. ... ಮರಾಠಿ ಸಿನೆಮಾಗಳ ಕಥೆಗಳಂತೂ ಅದ್ಭುತ" ಎಂದು ಮರಾಠಿ ಸಿನೆಮಾ 'ಮನಾಟ್ಲ್ಯಾ ಉನ್ಹಟ್' ಸಿನೆಮಾದ ಆಡಿಯೋ ಅನಾವರಣದ ವೇಳೆ ತಿಳಿಸಿದ್ದಾರೆ.
"ನಾನು ನನ್ನ ಮೊದಲ ಮರಾಠಿ ಸಿನೆಮಾ ಮಾಡಿದ್ದು ಬಹಳ ಹಿಂದೆ. ಅದು ಲಕ್ಷ್ಮಿಕಾಂತ್ ಬೆರ್ದೆ ಅವರ ಸಿನೆಮಾ(ಹಮಾಲ್ ದೇ ಧಮಾಲ್) ಆಗಿತ್ತು. ನನಗೆ ಒಳ್ಳೆಯ ಸ್ಕ್ರಿಪ್ಟ್ ದೊರೆತು ನನ್ನನ್ನು ನಟಿಸಲು ಕೇಳಿದರೆ ನನಗೆ ನಟಿಸಿ ನಿರ್ಮಿಸಬೇಕೆಂಬ ಆಸೆಯಿದೆ. ನಾನಿಲ್ಲೇ ಹುಟ್ಟಿದ್ದು, ಅದಕ್ಕೆ ಮರಾಠಿ ಸಿನೆಮಾಗಳನ್ನು ಮಾಡುವಾಸೆ" ಎಂದು ಹಾಲಿವುಡ್ ಸಿನೆಮಾ 'ಸ್ಲಂ ಡಾಗ್ ಮಿಲಿಯನೇರ್' ನಟ ಅನಿಲ್ ಕಪೂರ್ ಹೇಳಿದ್ದಾರೆ.