ಸಿನಿಮಾ ಸುದ್ದಿ

ಖ್ಯಾತ ಹಿಂದಿ ಕಿರುತೆರೆ ನಟ ಸಂಜಿತ್ ಬೇಡಿ ನಿಧನ

ಹಿಂದಿ ಕಿರುತೆರೆಯಲ್ಲಿ ಎಲ್ಲರ ಪ್ರೀತಿಗೆ ಪಾತ್ರರಾಗಿ ಉಮಿ ಎಂದೇ ಖ್ಯಾತಿಗಳಿಸಿದ್ದ ನಟ ಸಂಜಿತ್ ಬೇಡಿ ಅವರು ಮಂಗಳವಾರ ಅಕಾಲಿಕ ಸಾವನ್ನಪ್ಪಿದ್ದಾರೆಂದು ತಿಳಿದುಬಂದಿದೆ.

ಖ್ಯಾತ ಹಿಂದಿ ಕಿರುತೆರೆ ನಟ ಸಂಜಿತ್ ಬೇಡಿ ನಿಧನ
ಕಿರುತೆರೆ ನಟ ಸಂಜಿತ್ ಬೇಡಿ
Published On :

ನವದೆಹಲಿ: ಹಿಂದಿ ಕಿರುತೆರೆಯಲ್ಲಿ ಎಲ್ಲರ ಪ್ರೀತಿಗೆ ಪಾತ್ರರಾಗಿ ಉಮಿ ಎಂದೇ ಖ್ಯಾತಿಗಳಿಸಿದ್ದ ನಟ ಸಂಜಿತ್ ಬೇಡಿ ಅವರು ಮಂಗಳವಾರ ಅಕಾಲಿಕ ಮರಣವಪ್ಪಿದ್ದಾರೆಂದು ತಿಳಿದುಬಂದಿದೆ.

ಸಂಜಿತ್ ಬೇಡಿ ಅವರು ಮಿದುಳು ವೈರಸ್ ರೋಗದಿಂದ ಬಳಲುತ್ತಿದ್ದರು. ಹೀಗಾಗಿ ಖಾಸಗಿ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿತ್ತು. ದಿನಕಳೆಯುತ್ತಿದ್ದಂತೆ ರೋಗ ಮತ್ತಷ್ಟು ಉಲ್ಪಣಗೊಂಡ ಕಾರಣ ಸಂಜಿತ್ ಬೇಡಿ ಅವರು ಕೆಲವು ದಿನಗಳ ಹಿಂದೆ ಕೋಮಾಗೆ ಜಾರಿದ್ದರು.  

ಸಂಜಿತ್ ಬೇಡಿ ಅವರು ಹಿಂದಿಯಲ್ಲಿ ಹಲವು ಧಾರಾವಾಹಿಗಳಲ್ಲಿ ನಟಿಸಿದ್ದು, ಸಂಜೀವಾಣಿ ಎಂಬ ಧಾರಾವಾಹಿಯ ಮೂಲಕ ಎಲ್ಲರ ಮನಗೆದಿದ್ದರು. ಅಲ್ಲದೆ, ಜಾನೆ ಕ್ಯಾ ಬಾತ್ ಹುಯಿ, ತೊಡಿ ಸಿ ಜಮೀನ್ ತೊಡ ಸಾ ಆಸ್ಮಾನ್, ಕ್ಯಾ ಹೋಗ ನಿಮ್ಮೋ ಕಾ, ಕಸೌತಿ ಜಿಂದಗಿ ಕೆ ಸೇರಿದಂತೆ ಹಲವು ಧಾರವಾಹಿಗಳಲ್ಲಿ ನಟಿಸಿ ಕಿರುತೆರೆ ರಂಗದಲ್ಲಿ ಖ್ಯಾತಿ ಗಳಿಸಿದ್ದರು. ಸಂಜಿತ್ ಬೇಡಿ ಅವರ ಹಠಾತ್ ನಿಧನಕ್ಕೆ ಹಿಂದಿ ಕಿರುತೆರೆ ಲೋಕ ದಿಗ್ಭ್ರಾಂತಿ ವ್ಯಕ್ತಪಡಿಸಿದ್ದು, ಕಂಬನಿ ಮಿಡಿದಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.