'ಬಾಹುಬಲಿ'ಗೆ ಬೆದರಿದ 'ಶ್ರೀಮಂತುಡು'?

ತೆಲುಗು ಸೂಪರ್ ಸ್ಟಾರ್ ಮಹೇಶ್ ಬಾಬು ಅವರು ಎಸ್ ಎಸ್ ರಾಜಮೌಳಿ ಅವರ 'ಬಾಹುಬಲಿ' ಸಿನೆಮಾ ಬಗ್ಗೆ ಎಲ್ಲ ಸಿನೆಮಾ ಪ್ರಿಯರು ಹೆಮ್ಮೆ ಪಡಬೇಕು
ಬಾಹುಬಲಿ ಸಿನೆಮಾ ಭಿತ್ತಿಚಿತ್ರ
ಬಾಹುಬಲಿ ಸಿನೆಮಾ ಭಿತ್ತಿಚಿತ್ರ
Updated on: 

ಹೈದರಾಬಾದ್: ತೆಲುಗು ಸೂಪರ್ ಸ್ಟಾರ್ ಮಹೇಶ್ ಬಾಬು ಅವರು ಎಸ್ ಎಸ್ ರಾಜಮೌಳಿ ಅವರ 'ಬಾಹುಬಲಿ' ಸಿನೆಮಾ ಬಗ್ಗೆ ಎಲ್ಲ ಸಿನೆಮಾ ಪ್ರಿಯರು ಹೆಮ್ಮೆ ಪಡಬೇಕು ಹಾಗೂ ಈ ಚಲನಚಿತ್ರದ ಯಶಸ್ಸು ತೆಲುಗು ಚಿತ್ರರಂಗಕ್ಕೆ ಬಹಳ ಅವಶ್ಯಕ ಎಂದಿದ್ದಾರೆ.

"ನಾವೆಲ್ಲರೂ 'ಬಾಹುಬಲಿ' ಸಿನೆಮಾದ ಬಗ್ಗೆ ಹೆಮ್ಮೆಯಿಂದರಬೇಕು. ಈ ಸಿನೆಮಾ ಬ್ಲಾಕ್ ಬಸ್ಟರ್ ಆಗಲೆಂದು ನಾವೆಲ್ಲರೂ ಪ್ರಾರ್ಥಿಸೋಣ ಏಕೆಂದರೆ ಇದು ನಮ್ಮ ಉದ್ಯಮಕ್ಕೆ ಅತ್ಯಗತ್ಯ" ಎಂದು ವರದಿಗಾರರಿಗೆ ಮಹೇಶ್ ತಿಳಿಸಿದ್ದಾರೆ.

'ಬಾಹುಬಲಿ' ಬಿಡುಗಡೆಯ ಒಂದು ವಾರದ ನಂತರ ಬಿಡುಗಡೆಯಾಗಬೇಕಿದ್ದ ಮಹೇಶ್ ಬಾಬು ಅವರ ಚಲನಚಿತ್ರ 'ಶ್ರೀಮಂತುಡು' ಈಗ ಅಗಸ್ಟ್ ೭ಕ್ಕೆ ಮುಂದುಡಲಾಗಿದೆ.

"ನಾವು 'ಬಾಹುಬಲಿ'ಗೆ ಸ್ಪರ್ಧಿಸಲು ಹೆದರಿ ನಮ್ಮ ಸಿನೆಮಾ ಬಿಡುಗಡೆಯನ್ನು ಮುಂದೂಡಲಿಲ್ಲ. ಎರಡು ದೊಡ್ಡ ಸಿನೆಮಾಗಳ ಬಿಡುಗಡೆ ಮಧ್ಯೆ ೩ ವಾರಗಳ ಅಂತರ ಕೊಡುವುದು ಆರೋಗ್ಯಕರ" ಎಂದಿದ್ದಾರೆ ಮಹೇಶ್ ಬಾಬು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com