'ಬುಗುರಿ' ಆಡಿಯೋ ಬಿಡುಗಡೆಗೆ ಸಾರ್ವಜನಿಕ ಸಮಾರಂಭ ನಡೆಸಲು ಸಿದ್ಧತೆ

ನಟ ಗಣೇಶ್ ಅವರ ೨೫ ನೆಯ ಚಲನಚಿತ್ರ 'ಬುಗುರಿ' ನಿರ್ದೇಶಕ ಎಂ ಡಿ ಶ್ರೀಧರ್, ಸಿನೆಮಾದ ಆಡಿಯೋ ಬಿಡುಗಡೆ ಕಾರ್ಯಕ್ರಮವನ್ನು ಅದ್ದೂರಿಯಾಗಿ ನಡೆಸಲು
ಬುಗುರಿ ಸಿನೆಮಾ ಸ್ಟಿಲ್
ಬುಗುರಿ ಸಿನೆಮಾ ಸ್ಟಿಲ್

ಬೆಂಗಳೂರು: ನಟ ಗಣೇಶ್ ಅವರ ೨೫ ನೆಯ ಚಲನಚಿತ್ರ 'ಬುಗುರಿ' ನಿರ್ದೇಶಕ ಎಂ ಡಿ ಶ್ರೀಧರ್, ಸಿನೆಮಾದ ಆಡಿಯೋ ಬಿಡುಗಡೆ ಕಾರ್ಯಕ್ರಮವನ್ನು ಅದ್ದೂರಿಯಾಗಿ ನಡೆಸಲು ಸಿದ್ಧತೆ ನಡೆಸಿದ್ದಾರೆ. ಅವರದ್ದೇ ನಿರ್ಮಾಣ ಸಂಸ್ಥೆಯಾದ ಎಸ್ ಎಂ ಜಿ ಮೂವಿಸ್ ನ ಚೊಚ್ಚಲ ಸಿನೆಮಾ ಇದು. ಈ ತಿಂಗಳ ಅಂತ್ಯಕ್ಕೆ ಅಥವಾ ಏಪ್ರಿಲ್ ನ ಮೊದಲ ವಾರದಲ್ಲಿ ಚಿತ್ರದ ಆಡಿಯೋ ಬಿಡುಗಡೆ ಮಾಡಲು ಸಿದ್ಧತೆ ನಡೆಸಿದ್ದಾರೆ. "ಆಡಿಯೋ ಬಿಡುಗಡೆ ಕಾರ್ಯಕ್ರಮವನ್ನು ಸಾರ್ವಜನಿಕ ಸಮಾರಂಭವನ್ನಾಗಿಸಬೇಕೆಂದಿದ್ದೇನೆ. ಕನ್ನಡ ಮತ್ತು ಇತರ ಚಿತ್ರ ರಂಗದ ಗಣ್ಯರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಿದ್ದೇನೆ ಹಾಗೂ ಚಿತ್ರದ ಟ್ರೇಲರ್ ಅನ್ನು ಕೂಡ ಅಂದೆ ಬಿಡುಗಡೆ ಮಾಡಲಿದ್ದೇನೆ" ಎಂದಿದ್ದಾರೆ ಶ್ರೀಧರ್.

ಸಂಗೀತ ನಿರ್ದೇಶಕ ಮಿಕ್ಕಿ ಜೆ ಮೇಯರ್ ನಿರ್ದೇಶಿಸಿರುವ ಆರು ಹಾಡುಗಳ ಬಗ್ಗೆ ಹರ್ಷ ವ್ಯಕ್ತಪಡಿಸಿದ ಶ್ರೀಧರ್ "ಜಾಲಿ ಡೇಸ್ ನಂತರ ಮಿಕಿ ಸಂಗೀತ ನೀಡಿರುವ ಎರಡನೇ ಸಂಗಿತದ ಆಲ್ಬಮ್ ಇದು. ಎಲ್ಲ ಹಾಡುಗಳಿಗೆ ಗೀತ ರಚನೆ ಮಾಡಿರುವವರು ಕವಿರಾಜ್. ಜಾಲಿ ಡೇಸ್ ನಲ್ಲಿ ನೀಡಿದ ಹಾಡುಗಳ ತರಹ ಹಾಡುಗಳನ್ನು ನೀಡಬೇಕೆಂದು ಇಂದಿಗೂ ನಾನು ಭೇಟಿ ಮಾಡುವ ಯುವಕರು ಹೇಳುತ್ತಿರುತ್ತಾರೆ. ಸೋನು ನಿಗಮ್, ವಿಜಯ್ ಪ್ರಕಾಶ್, ಶ್ರೇಯಾ ಘೋಷಲ್, ಕಾರ್ತಿಕ್ ಮತ್ತು ಸುನಿತಾ ಹಾಡುಗಳಿಗೆ ಕಂಠ ನೀಡಿದ್ದಾರೆ. ವಾಣಿ ಹರಿಕೃಷ್ಣ ಅವರಿಂದಲೂ ಒಂದು ಹಾಡನ್ನು ಹಾಡಿಸುವ ಯೋಚನೆ ಇದೆ" ಎನ್ನುತ್ತಾರೆ.

ಗಣೇಶ್ ಮತ್ತು ಎರಿಕ ಫರ್ನಾಂಡಿಸ್ ಮುಖ್ಯ ಭೂಮಿಕೆಯಲ್ಲಿದ್ದು, ರಿಚಾ ಪನಯ್ ಮತ್ತು ಸಾಧು ಕೋಕಿಲಾ ಕೂಡ ನಟಿಸಿದ್ದಾರೆ. ಬುಗುರಿ ಮೇ ಮೊದಲ ವಾರದಲ್ಲಿ ಬಿಡುಗಡೆ ಕಾಣುವ ಸಾಧ್ಯತೆ ಇದೆ ಎನ್ನುತ್ತಾರೆ ಶ್ರೀಧರ್.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com